ETV Bharat / city

ವಿಶ್ವ ಆನೆಗಳ ದಿನಾಚರಣೆ: ಸಕ್ರೇಬೈಲು ಆನೆ ಬಿಡಾರದಲ್ಲಿ ಸರಳ ಪೂಜೆ

ರಾಜ್ಯದ ಎರಡನೇ ಅತಿದೊಡ್ಡ ಆನೆ ಬಿಡಾರ ಎನಿಸಿಕೊಂಡಿರುವ ಶಿವಮೊಗ್ಗದ ಗಾಜನೂರು ಬಳಿಯಿರುವ ಸಕ್ರೇಬೈಲು ಆನೆ ಬಿಡಾರದಲ್ಲಿ ವಿಶ್ವ ಆನೆಗಳ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.

World elephant day celebrated at sakrebailu elephant camp
ಸಕ್ರೇಬೈಲು ಆನೆ ಬಿಡಾರದಲ್ಲಿ ಸರಳ ಪೂಜೆ
author img

By

Published : Aug 12, 2021, 4:45 PM IST

Updated : Aug 12, 2021, 5:04 PM IST

ಶಿವಮೊಗ್ಗ: ಪ್ರತಿವರ್ಷ ಆ.12ರ ವಿಶ್ವ ಆನೆಗಳ ದಿನಾಚರಣೆಯಂದು ಶಿವಮೊಗ್ಗದ ಸಕ್ರೇಬೈಲು ಆನೆ ಬಿಡಾರದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿರುತ್ತಿತ್ತು. ಸಾವಿರಾರು ಪ್ರವಾಸಿಗರ ನಡುವೆ ನಡೆಯುತ್ತಿದ್ದ ಆನೆಗಳ ದಿನಾಚರಣೆಯ ಮನೋರಂಜನಾ ಕ್ರೀಡಾಕೂಟ ಎಲ್ಲರ ಮನಸೂರೆಗೊಳ್ಳುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕಾಗಿ ಆನೆಗಳ ಕ್ರೀಡಾಕೂಟ ರದ್ದಾಗುತ್ತಿದೆ. ಹೀಗಾಗಿ ಈ ಬಾರಿಯ ವಿಶ್ವ ಆನೆಗಳ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.

ಸಕ್ರೇಬೈಲು ಆನೆ ಬಿಡಾರದಲ್ಲಿ ಸರಳ ಪೂಜೆ..

ರಾಜ್ಯದ ಎರಡನೇ ಅತಿದೊಡ್ಡ ಆನೆ ಬಿಡಾರ ಎನಿಸಿಕೊಂಡಿರುವ ಶಿವಮೊಗ್ಗದ ಗಾಜನೂರು ಬಳಿಯಿರುವ ಸಕ್ರೇಬೈಲು ಆನೆ ಕ್ಯಾಂಪ್​​ನಲ್ಲಿ ಪ್ರತಿವರ್ಷ ವಿಶ್ವ ಆನೆಗಳ ದಿನಾಚರಣೆಯಂದು ಆನೆಗಳ ಕ್ರೀಡಾಕೂಟ ನಡೆಸಲಾಗುತ್ತಿತ್ತು. ವನ್ಯಜೀವಿ ಅರಣ್ಯ ವಿಭಾಗದಿಂದ ನಡೆಸುತ್ತಿದ್ದ ಈ ಕ್ರೀಡಾಕೂಟದಲ್ಲಿ ಆನೆಗಳಿಗೆ ವಿವಿಧ ಆಟೋಟ ಹಾಗೂ ತಿನ್ನುವ ಸ್ಫರ್ಧೆಯನ್ನು ಆಯೋಜಿಸಲಾಗುತ್ತಿತ್ತು. ಇದಕ್ಕಾಗಿ ಆನೆಗಳಿಗೆ ತರಬೇತಿ ಸಹ ನೀಡಲಾಗುತ್ತಿತ್ತು.‌ ಆದರೆ ಕಳೆದ ಎರಡು ವರ್ಷದಿಂದ ಕೋವಿಡ್ ಕಾರಣಕ್ಕಾಗಿ ಕ್ರೀಡಾಕೂಟವನ್ನು ರದ್ದುಮಾಡಿದ್ದು, ಆನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಗಿದೆ.

World elephant day celebrated at sakrebailu elephant camp
ವಿಶ್ವ ಆನೆಗಳ ದಿನಾಚರಣೆ: ಸಕ್ರೇಬೈಲು ಆನೆ ಬಿಡಾರದಲ್ಲಿ ಸರಳ ಪೂಜೆ

ಮಕ್ಕಳು, ಹಿರಿಯರು ಸೇರಿದಂತೆ ಸಾವಿರಾರು ಪ್ರವಾಸಿಗರ ನಡುವೆ ನಡೆಯುತ್ತಿದ್ದ ಕ್ರೀಡಾಕೂಟ ಈ ಬಾರಿ ಸರಳ ಪೂಜೆಯಲ್ಲಿಯೇ ಅಂತ್ಯಗೊಂಡಿದೆ. ಶಿವಮೊಗ್ಗ ಅರಣ್ಯ ವಿಭಾಗದ ಸಿಸಿಎಫ್ ರವಿಶಂಕರ್, ವನ್ಯಜೀವಿ ವಿಭಾಗದ ಡಿಎಫ್ಓ ನಾಗರಾಜ್ ನೇತೃತ್ವದಲ್ಲಿ ಸರಳವಾಗಿ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು. ಜೊತೆಗೆ ಆನೆಗಳಿಗೆ ಕಬ್ಬು, ಅನಾನಸ್, ಬಾಳೆಹಣ್ಣು, ಬೆಲ್ಲ ಸೇರಿದಂತೆ ವಿಶೇಷ ಆಹಾರ ನೀಡಲಾಯಿತು. ಕೋವಿಡ್ ಕಾರಣಕ್ಕೆ 72 ಗಂಟೆಯೊಳಗಿನ ಕೋವಿಡ್ ನೆಗೆಟಿವ್​ ರಿಪೋರ್ಟ್ ಇದ್ದ ಪ್ರವಾಸಿಗರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು.

World elephant day celebrated at sakrebailu elephant camp
ಸಕ್ರೇಬೈಲು ಆನೆ ಬಿಡಾರದಲ್ಲಿ ಸರಳ ಪೂಜೆ

ಹಿನ್ನೆಲೆ: ಏಷ್ಯನ್ ಮತ್ತು ಆಫ್ರಿಕನ್​ ಆನೆಗಳಿಗೆ ಉಂಟಾಗಿರುವ ಸಂಕಷ್ಟವನ್ನು ಎತ್ತಿ ತೋರಿಸಲು, ಅದರ ಬಗ್ಗೆ ಅರಿವು ಮೂಡಿಸಲು ಆನೆಗಳ ದಿನಾಚರಣೆ ಪ್ರಾರಂಭಿಸಲಾಯಿತು. 2012ರ ಆ.12ರಂದು ಮೊದಲ ಬಾರಿಗೆ ವಿಶ್ವ ಆನೆಗಳ ದಿನವನ್ನು ಆಚರಿಸಲಾಗಿತ್ತು.

Last Updated : Aug 12, 2021, 5:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.