ಶಿವಮೊಗ್ಗ: ಕೆಟ್ಟು ಹೋದ ರಸ್ತೆ ದುರಸ್ತಿ ಮಾಡುವಂತೆ ಸರ್ಕಾರ, ಅಧಿಕಾರಿಗಳಿಗೆ ಅದೆಷ್ಟೇ ಮನವಿ ಕೊಟ್ಟರೂ ಫಲ ನೀಡಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ತಾವೇ ಒಟ್ಟು ಸೇರಿ ರಸ್ತೆ ರಿಪೇರಿ ಮಾಡಿಕೊಂಡಿದ್ದಾರೆ. ಸೊರಬ ತಾಲೂಕಿನ ಯಲಸಿ ಗ್ರಾಮದ ಒಳಭಾಗದ ರಸ್ತೆ ಹಾಳಾಗಿ ಹಲವು ವರ್ಷಗಳೇ ಕಳೆದಿದ್ದವು.
ಅಧಿಕಾರಿಗಳ ದಾರಿ ಕಾದರೆ ರಸ್ತೆ ರಿಪೇರಿಯಾಗದು. ಹೀಗಾಗಿ ಏನಾದ್ರು ಮಾಡಬೇಕೆಂದರಿತ ಗ್ರಾಮಸ್ಥರು ಸೇರಿ ಮಾತುಕತೆ ನಡೆಸಿದ್ದರು. ಗ್ರಾಮದ ಪ್ರತಿ ಮನೆಗೆ ಒಬ್ಬರಂತೆ ಬಂದು ರಸ್ತೆ ರಿಪೇರಿ ಕಾರ್ಯಕ್ಕೆ ಸಹಕಾರ ನೀಡಬೇಕೆಂದು ತಿಳಿಸಲಾಗಿತ್ತು. ಹೀಗೆ ಕಾರ್ಯ ಪ್ರವೃತ್ತರಾದ ಜನರು, ರಸ್ತೆಗೆ ಬೇಕಾದ ಮಣ್ಣನ್ನು ಟ್ರ್ಯಾಕ್ಟರ್ನಲ್ಲಿ ತಂದು ಹಾಕಿ ಸುಮಾರು ಒಂದು ಕಿ.ಮೀ ರಸ್ತೆ ದುರಸ್ತಿ ಮಾಡಿದ್ದಾರೆ. ಇದು ಸಿದ್ದಾಪುರ ಹಾಗೂ ಚಂದ್ರಗುತ್ತಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ.
ಇದನ್ನೂ ಓದಿ: ಕುಂಚೇನಹಳ್ಳಿ ಕೆರೆ ತುಂಬಿ ಮನೆಗಳು ಜಲಾವೃತ: ಅಧಿಕಾರಿಗಳಿಗೆ ಶಾಪ ಹಾಕಿದ ಗ್ರಾಮಸ್ಥರು