ETV Bharat / city

ಪಶು ಆಹಾರ ಮಂಜೂರಿಗೆ ಲಂಚ: ವಿಡಿಯೋದಲ್ಲಿ ವೈದ್ಯನ ಬಣ್ಣ ಬಯಲು

author img

By

Published : May 16, 2019, 5:14 PM IST

ಶಿಕಾರಿಪುರ ತಾಲೂಕಿನ ಸಾಲೂರು ಗ್ರಾಮದ ಪಶು ವೈದ್ಯಾಧಿಕಾರಿ ಕುಮಾರನಾಯ್ಕ ಎಂಬವರು ಪಶು ಆಹಾರ ಮಂಜೂರು ಮಾಡಲು ಲಂಚ ಪಡೆಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಶಿವಮೊಗ್ಗ

ಶಿವಮೊಗ್ಗ: ಪಶು ಆಹಾರ ಮಂಜೂರು ಮಾಡಲು ಸರ್ಕಾರಿ ಪಶು ವೈದ್ಯಾಧಿಕಾರಿ ಲಂಚ ಪಡೆದಿರುವ ವಿಡಿಯೋ ಈ ಟಿವಿ ಭಾರತಕ್ಕೆ ಲಭ್ಯವಾಗಿದೆ.

ಶಿಕಾರಿಪುರ ತಾಲೂಕಿನ ಸಾಲೂರು ಗ್ರಾಮದ ಪಶು ವೈದ್ಯಾಧಿಕಾರಿ ಕುಮಾರನಾಯ್ಕ ಎಂಬವರು ಲಂಚ ಪಡೆಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಆಗಿದ್ದೇನು?

ಹೈನುಗಾರಿಕೆ ಯೋಜನೆಯಡಿ ಪಶು ಆಹಾರ ಮಂಜೂರು ಮಾಡಲು ಕುಮಾರನಾಯ್ಕ ಲಂಚ ಬೇಡಿಕೆ ಇಟ್ಟಿದ್ದರು. ಮಂಜೂರಾತಿಗೆ ತಾನು ಸಹಿ ಮಾಡಲು 1.500 ರೂ ನೀಡಬೇಕೆಂದು ಕೇಳಿದ್ದರು ಎನ್ನಲಾಗಿದೆ.

ಶಿವಮೊಗ್ಗ

ಆದರೆ ಫಲಾನುಭವಿ ಕಡಿಮೆ ಹಣ ನೀಡಲು ಹೋದಾಗ, ನೀನು ಕಳೆದ ಸಲ ಕಡಿಮೆ ನೀಡಿದ್ದೀಯಾ. ಈ ಬಾರಿ‌ಕ್ಕಿಂತ 1.500 ರೂಗಿಂತ ಕಡಿಮೆ ನೀಡದರೆ ನಾನು ಸಹಿ ಹಾಕುವುದಿಲ್ಲ ಎಂದು ಹೇಳುತ್ತಿರುವುದು ವಿಡಿಯೋದಲ್ಲಿದೆ.

ಹೀಗೆಯೆ ಹಣ ನೀಡಿದ್ರೆ ಮಾತ್ರ ಸ್ಥಳದಲ್ಲೇ ಸೀಲು, ಸಹಿ ಹಾಕಿ, ಆರ್ಡರ್ ಕಾಪಿ ನೀಡುತ್ತಾರೆ. ಸಾಲೂರು ಆಸ್ಪತ್ರೆಗೆ ಹಾಗೂ ರೈತರಿಗೆ ಪಶು ಇಲಾಖೆಯಿಂದ ನೀಡಲಾಗುವ ಎಲ್ಲಾ ಯೋಜನೆಗಳಿಗೂ ಹಣ ಪಡೆಯಲಾಗುತ್ತಿದೆ ಎಂದು ಆರೋಪಿಸಾಗಿದೆ.

ಈ ಬಗ್ಗೆ ವೈದ್ಯ ಕುಮಾರನಾಯ್ಕರನ್ನು ಈ ಟಿವಿ ಭಾರತ ಸಂಪರ್ಕಿಸಿದಾಗ, ನಾನು ಸಾಲ ಕೊಟ್ಟಿದ್ದೆ, ಅದೇ ಹಣ ಪಡೆದಿದ್ದೆನೆ ಎಂದು ಸಮಾಜಾಯಿಸಿ ನೀಡಿದ್ದಾರೆ.

ಆದರೆ ಜಿಲ್ಲಾ ಪಶುಸಂಗೋಪನ ನಿರ್ದೇಶಕರು ಈ ವೈದ್ಯಾಧಿಕಾರಿ ಮೇಲೆ ಕ್ರಮ ಕೈಗೊಂಡು, ಅಮಾನತು ಮಾಡಬೇಕು ಎಂದು ಗ್ರಾಮಸ್ಥರು‌ ಆಗ್ರಹಿಸಿದ್ದಾರೆ.

Intro:ಸರ್ಕಾರಿ ಪಶು ವ್ಯದ್ಯನಿಂದ ಲಂಚ ವಸೂಲಿಯ ವಿಡಿಯೋ.

ಶಿವಮೊಗ್ಗ: ಪಶು ಇಲಾಖೆಯ ಹೈನುಗಾರಿಕೆ ಯೋಜನೆಯ ಪಶು ಆಹಾರ ಮಂಜೂರಿಗೆ ಸರ್ಕಾರಿ ಪಶು ವೈದ್ಯಾಧಿಕಾರಿ ಕುಮಾರನಾಯ್ಕರವರು ಲಂಚ ಸ್ವೀಕರ ಮಾಡುವ ವಿಡಿಯೋ ಈ ಟಿವಿ ಭಾರತ್ ಗೆ ಲಭ್ಯವಾಗಿದೆ. ಶಿಕಾರಿಪುರ ತಾಲೂಕಿನ ಸಾಲೂರು ಗ್ರಾಮದ ಪಶು ವೈದ್ಯಾಧಿಕಾರಿಯಾಗಿರು ಕುಮಾರನಾಯ್ಕರವರು ಫಲಾನುಭವಿಯಿಂದ 1.500 ರೂ ಲಂಚ ಪಡೆಯುವ ವಿಡಿಯೋ ಲಭ್ಯವಾಗಿದೆ.Body:ಈ ವಿಡಿಯೋದಲ್ಲಿ ಪಶು ಆಹಾರ ವಿತರಣೆ ಮಾಡಲು 1.500 ರೂ ಪಡೆಯಲಾಗುತ್ತಿದೆ. ಇಲ್ಲಿ ವೈದ್ಯ ಕುಮಾರನಾಯ್ಕರವರು ತಾನು ಸಹಿ ಹಾಕಲು 1.500 ರೂ ನೀಡಲೆ ಬೇಕು ಎಂದು ಡಿಮ್ಯೊಂಡ್ ಇಟ್ಟಿದ್ದಾರೆ. ಫಲಾನುಭಿವಿಯು ಕಡಿಮೆ ಹಣ ನೀಡಲು ಹೋದ್ರೆ, ನೀನು ಕಳೆದ ಸಲವೇ ಕಡಿಮೆ ನೀಡಿದ್ದೀಯಾ..ಈ ಬಾರಿ‌1.500 ರೂ ಕ್ಕಿಂತ ಕಡಿಮೆ ನೀಡದರೆ ನಾನು ಸಹಿ ಹಾಕುವುದಿಲ್ಲ ಎಂದು ಹೇಳುತ್ತಿದ್ದಾರೆ. ಹೈನುಗಾರಿಕೆಯನ್ನು ಬಡವರು, ಮಹಿಳೆಯರು, ವಿಧವೆಯರು ಮಾಡಿಕೊಂಡಿದ್ದಾರೆ.Conclusion:ಹೈನುಗಾರಿಕೆಯನ್ನು ಬಡವರು, ಮಹಿಳೆಯರು, ವಿಧವೆಯರು ಮಾಡಿಕೊಂಡಿದ್ದಾರೆ.
ವೈದ್ಯ ಕುಮಾರನಾಯ್ಕ ರವರಿಗೆ ಹಣ ನೀಡಿದ್ರೆ, ಸ್ಥಳದಲ್ಲೇ ಸೀಲು, ಸಹಿ ಹಾಕಿ, ಅಲ್ಲೆ ಆರ್ಡರ್ ಕಾಫಿ ನೀಡುತ್ತಿದ್ದಾರೆ. ಸಾಲೂರು ಆಸ್ಪತ್ರೆಯ ಹಾಗೂ ವಿಭಾಗದ ರೈತರಿಗೆ ಪಶು ಇಲಾಖೆಯಿಂದ ನೀಡುವ ಎಲ್ಲಾ ಯೋಜನೆಗೂ ಹಣವಿಲ್ಲದೇ ಜನರಿಗೆ ಸಿಗುವುದಿಲ್ಲ. ಹಣಕ್ಕಾಗಿ ಸಾವಿನ ಮನೆಯನ್ನು ಬಿಡದೇ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.ಈ ಕುರಿತು ವೈದ್ಯ ಕುಮಾರನಾಯ್ಕರನ್ನು ಈ ಟಿವಿ ಭಾರತ್ ಸಂಪರ್ಕಿಸಿದಾಗ ನಾನು ಸಾಲ ಕೊಟ್ಟಿದ್ದೆ, ಸಾಲದ ಹಣ ಪಡೆದಿದ್ದೆನೆ ಎಂದು ಸಮಾಜಾಯಿಸಿ ನೀಡಿದ್ದಾರೆ. ಇಂತಹ ಭ್ರಷ್ಟ ವ್ಯದ್ಯರನ್ನು ಜಿಲ್ಲಾ ಪಶು ಸಂಗೋಪನ ನಿರ್ದೇಶಕರು ಅಮಾನತು ಮಾಡಬೇಕು ಎಂದು ಗ್ರಾಮಸ್ಥರು‌ ಆಗ್ರಹಿಸಿದ್ದಾರೆ.

ವಿಡಿಯೋ ಕಳುಹಿಸಲಾಗಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.