ಶಿವಮೊಗ್ಗ: ಬೀಟೆ ಮರಗಳ ಕಳ್ಳತನ ಜಿಲ್ಲೆಯಲ್ಲಿ ರಾಜಾರೋಷವಾಗಿ ನಡೀತಾ ಇದ್ರೂ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಂಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಳೆದ ರಾತ್ರಿ ಆಯನೂರು ಬಳಿಯ ಇಟ್ಟಿಗೆಹಳ್ಳಿ ಗ್ರಾಮದಲ್ಲಿ ನಾಲ್ಕು ಮರಗಳನ್ನು ಕಳ್ಳತನ ಮಾಡಲಾಗಿದೆ. ಸಣ್ಣ ಸಣ್ಣ ರೆಂಬೆಗಳನ್ನು ಬಿಟ್ಟು ನಾಟ ದೋಚಿಕೊಂಡು ಖದೀಮರು ಹೋಗಿದ್ದಾರೆ. ಇದೇ ರೀತಿ ಅರಣ್ಯ ಪ್ರದೇಶದಲ್ಲೂ ಸಹ ಮರಗಳ ಕಡಿತಲೆ ನಡೆದರೂ ಸಹ ಇಲಾಖೆ ಕಣ್ಮುಚ್ಚಿ ಕುಳಿತುಕೊಂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಲ್ಲದೇ ಇಲಾಖೆಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದರೂ ಅರಣ್ಯ ಇಲಾಖೆಯವರು ತಲೆ ಕಡೆಸಿಕೊಂಡಿಲ್ಲ. ಗ್ರಾಮಸ್ಥರೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಅಧಿಕಾರಿಗಳು ಸರಿಯಾದ ಸಮಯಕ್ಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.