ETV Bharat / city

ಕುಡಿದ ಮತ್ತಿನಲ್ಲಿ ಕುತ್ತಿಗೆ ಮೇಲೆ ಕಾಲಿಟ್ಟು ತಾಯಿಯನ್ನೇ ಕೊಂದ ಪಾಪಿ ಮಗ - mother murder news

ಕುಡಿದ ಮತ್ತಿನಲ್ಲಿ ಪುತ್ರನೇ ತಾಯಿಯ ಕುತ್ತಿಗೆ ಮೇಲೆ ಕಾಲಿಟ್ಟು ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬುಳ್ಳಾಪುರದಲ್ಲಿ ನಡೆದಿದೆ.

ಕೊಲೆ
murder
author img

By

Published : Sep 15, 2021, 7:08 AM IST

Updated : Sep 15, 2021, 7:59 AM IST

ಶಿವಮೊಗ್ಗ: ಕುಡಿದ ಮತ್ತಿನಲ್ಲಿ ತಾಯಿಯ ಕುತ್ತಿಗೆ ಮೇಲೆ ಕಾಲಿಟ್ಟು ಮಗನೇ ಕೊಲೆ ಮಾಡಿರುವ ಘಟನೆ ತಾಲೂಕಿನ ಬುಳ್ಳಾಪುರದಲ್ಲಿ ನಡೆದಿದೆ. ಬುಳ್ಳಾಪುರದ‌ ನಿವಾಸಿ ವನಜಾಕ್ಷಿ (45) ಮಗನಿಂದಲೇ ಮೃತರಾದ ತಾಯಿ. ಮಗ ದೇವರಾಜ ನಾಯ್ಕ(27) ಕುಡಿದು ತಾಯಿಯ ಜೊತೆ ಜಗಳ ಮಾಡಿದ್ದಾನೆ. ಈ ವೇಳೆ, ಜಗಳ ತಾರಕಕ್ಕೆ ಹೋಗಿದ್ದು, ಕೆಳಗೆ ಬಿದ್ದ ವನಜಾಕ್ಷಿ ಕುತ್ತಿಗೆ ಮೇಲೆ ಕಾಲಿಟ್ಟು ದೇವರಾಜ ಜೋರಾಗಿ ತುಳಿದಿದ್ದಾನೆ. ಪರಿಣಾಮ ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಇದನ್ನು ಓದಿ: ಯಾದಗಿರಿಯಲ್ಲಿ ಪೈಶಾಚಿಕ ಕೃತ್ಯ: ಮಹಿಳೆಯನ್ನ ನಗ್ನಗೊಳಿಸಿ ಮನ ಬಂದಂತೆ ಥಳಿಸಿದ ದುರುಳರು

ವನಜಾಕ್ಷಿ, ದೇವರಾಜ್ ಹಾಗೂ ಆಕೆಯ ಗಂಡ ಲೋಕೇಶ್ ನಾಯ್ಕ ಮೂವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ನಿತ್ಯ ಮೂವರು ಕುಡಿದು ಗಲಾಟೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ಕುರಿತು ಮಗನ ವಿರುದ್ಧ ಲೋಕೇಶ್ ನಾಯ್ಕ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಇದನ್ನು ಓದಿ: ಅಪ್ರಾಪ್ತೆಯೊಂದಿಗೆ ಪ್ರೀತಿಸುವ ನಾಟಕವಾಡಿ ಅತ್ಯಾಚಾರ ಆರೋಪ: ಯುವಕ ಅಂದರ್​​!

Last Updated : Sep 15, 2021, 7:59 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.