ETV Bharat / city

ಚುನಾವಣಾ ಕದನಕ್ಕೆ ತಾತ್ಕಾಲಿಕ ತೆರೆ...ಯಾವ ಜಿಲ್ಲೆಯಲ್ಲಿ ಎಷ್ಟು ಮತದಾನ ? - Voting final ditails

ಲೋಕಸಭಾ ಚುನಾವಣೆ ಮತದಾನ ಈಗಾಗಲೇ ಮುಕ್ತಾಯಗೊಂಡಿದ್ದು, ಕೆಲವೆಡೆ ಶಾಂತಿಯುತವಾಗಿ ಮತದಾನ ಮುಕ್ತಾಯಗೊಂಡರೆ ಇನ್ನೂ ಕೆಲವೆಡೆ ತಾಂತ್ರಿಕ ದೋಷಗಳು ಕಂಡು ಬಂದಿತು.

ಎಲ್ಲಾ ಕ್ಷೇತ್ರದ ಅಭ್ಯರ್ಥಿಗಳ ಹಣೆಬರಹ ಬರೆಯಲಿರುವ ಮತದಾರ ಪ್ರಭು
author img

By

Published : Apr 24, 2019, 9:30 AM IST

Updated : Apr 24, 2019, 10:52 AM IST

ಬೀದರ್​, ಶಿವಮೊಗ್ಗ, ವಿಜಯಪುರ, ಚಿಕ್ಕೋಡಿ: ಈಗಾಗಲೇ ಲೋಕಸಭಾ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಎಲ್ಲ ಕ್ಷೇತ್ರದ ಅಭ್ಯರ್ಥಿಗಳ ಹಣೆಬರಹವನ್ನು ಮತದಾರ ಪ್ರಭು ಇವಿಎಂ ಮತಯಂತ್ರಗಳಲ್ಲಿ ಭದ್ರಪಡಿಸಿದ್ದಾರೆ. ಕೆಲ ಮತಕ್ಷೇತ್ರಗಲ್ಲಿ ಎಷ್ಟು ಪ್ರಮಾಣದಲ್ಲಿ ಮತದಾನ ನಡೆದಿದೆ ಎನ್ನುವ ವಿವರ ಈ ಕೆಳಗಿನಂತಿದೆ.

ಬೀದರ್​ ಲೋಕಸಭಾ ಕ್ಷೇತ್ರ:

ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಶೇ.62.76% ರಷ್ಟು ಮತದಾನವಾಗಿದೆ. ಒಟ್ಟು 17,73,912 ಮತದಾರರ ಪೈಕಿ 5,76,199 ಪುರುಷರು ಹಾಗೂ 5,37,109 ಮಹಿಳೆಯರು ಮತ್ತು ಇತರ ನಾಲ್ವರು ಸೇರಿ 11,13,312 ರಷ್ಟು ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ ಅವರು ತಿಳಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಶೇ.61.16 ರಷ್ಟು ಮತದಾನವಾಗಿದ್ದು, ಈ ಬಾರಿ ಸ್ವಲ್ಪ ಹೆಚ್ಚಾಗಿದೆ. ಬೀದರ್​ ಲೋಕಸಭಾ ಚುನಾವಣೆ ವ್ಯಾಪ್ತಿಯ ಎಂಟು ವಿಧಾನಸಭಾ ಮತಕ್ಷೇತ್ರಗಳ ಶೇಕಡಾವಾರು ಮತದಾನದ ವಿವರ ಈ ಕೆಳಗಿನಂತಿದೆ.

ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.59.94 ರಷ್ಟು ಮತದಾನವಾಗಿದ್ದು, 1,16,147 ಮತದಾರರು ಮತ ಚಲಾಯಿಸಿದ್ದಾರೆ. ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಶೇ.57.01 ರಷ್ಟು ಮತದಾನವಾಗಿದ್ದು, 1,32,516 ಮತದಾರರು ಮತ ಚಲಾಯಿಸಿದ್ದಾರೆ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಶೇ.63.91 ರಷ್ಟು ಮತದಾನವಾಗಿದ್ದು, 1,46,973 ಮತದಾರರು ಮತ ಚಲಾಯಿಸಿದ್ದಾರೆ. ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಶೇ.62.22 ರಷ್ಟು ಮತದಾನವಾಗಿದ್ದು, 1,51,473 ಮತದಾರರು ಮತ ಚಲಾಯಿಸಿದ್ದಾರೆ. ಬೀದರ್​ (ದಕ್ಷಿಣ) ವಿಧಾನಸಭಾ ಕ್ಷೇತ್ರದಲ್ಲಿ ಶೇ.64.76 ರಷ್ಟು ಮತದಾನವಾಗಿದ್ದು, 1,32,016 ಮತದಾರರು ಮತ ಚಲಾಯಿಸಿದ್ದಾರೆ. ಬೀದರ್​ ವಿಧಾನಸಭಾ ಕ್ಷೇತ್ರದಲ್ಲಿ ಶೇ.62.61 ರಷ್ಟು ಮತದಾನವಾಗಿದ್ದು, 1,38,907 ಮತದಾರರು ಮತ ಚಲಾಯಿಸಿದ್ದಾರೆ.

ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.67.11 ರಷ್ಟು ಮತದಾನವಾಗಿದ್ದು, 1,54,513 ಮತದಾರರು ಮತ ಚಲಾಯಿಸಿದ್ದಾರೆ. ಔರಾದ್ ವಿಧಾನಸಭಾ ಕ್ಷೇತ್ರದಲ್ಲಿ ಶೇ.64.47 ರಷ್ಟು ಮತದಾನವಾಗಿದ್ದು, 1,40,767 ಮತದಾರರು ಮತ ಚಲಾಯಿಸಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರ:

ಶಿವಮೊಗ್ಗ ಲೋಕಸಭಾ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ನಿನ್ನೆ ಬೆಳಗ್ಗೆ‌ 7 ಗಂಟೆಯಿಂದ ಪ್ರಾರಂಭವಾದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಗುವ ಮೂಲಕ ಫಲಿತಾಂಶದಂತ ಎಲ್ಲರೂ ಚಿತ್ತ ಹರಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2,021 ಮತಗಟ್ಟೆಯನ್ನು‌ ಸ್ಥಾಪಿಸಲಾಗಿತ್ತು. ಜಿಲ್ಲೆಯಲ್ಲಿ ಸುಮಾರು ಐದು‌ ಸಾವಿರ ಮತಗಟ್ಟೆ ನೇಮಕ ಮಾಡಲಾಗಿತ್ತು. ಅಲ್ಲದೆ ಸುಮಾರು ಎಂಟು‌ ಸಾವಿರದಷ್ಟು ಪೊಲೀಸರನ್ನು ಹಾಗೂ ಬಿಎಸ್ಎಫ್ ಹಾಗೂ ಸಿಆರ್​ಎಫ್​ಗಳನ್ನು ಬಂದೋಬಸ್ತ್​ಗೆ ಬಳಸಿಕೊಳ್ಳಲಾಗಿತ್ತು.

ಜಿಲ್ಲೆಯಲ್ಲಿ ಸದ್ಯದ‌ ವರದಿಯಂತೆ 76.39 ರಷ್ಟು ಮತದಾನವಾಗಿದೆ. 1952 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ 80% ರಷ್ಟು ಮತದಾನವಾಗಿದೆ. ಜಿಲ್ಲಾಧಿಕಾರಿಗಳು ಮತದಾನ ಜಾಗೃತಿಯ ಬಗ್ಗೆ ಸಾಕಷ್ಟು ಕಾರ್ಯಕ್ರಮ ಆಯೋಜನೆ ಮಾಡುವ ಜೊತೆಗೆ ಮನೆಮನೆಗೆ ತೆರಳಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಿದರೂ ನಗರ ಪ್ರದೇಶದ ಮತದಾರ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನಕ್ಕೆ ಬಂದಿಲ್ಲ.‌

ವಿಜಯಪುರ ಲೋಕಸಭಾ ಕ್ಷೇತ್ರ:

ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಶೇ. 61.70 ರಷ್ಟು ಮತದಾನವಾಗಿದೆ. ಇನ್ನು ವಿಧಾನಸಭೆ ಕ್ಷೇತ್ರವಾರು ಗಮನಿಸಿದರೆ, ಮುದ್ದೇಬಿಹಾಳ- ಶೇ. 59.51 , ದೇವರ ಹಿಪ್ಪರಗಿ- ಶೇ. 58.36 , ಬಸವನ ಬಾಗೇವಾಡಿ- ಶೇ.66.02 , ಬಬಲೇಶ್ವರ- ಶೇ. 67.33 , ವಿಜಯಪುರ ನಗರ- ಶೇ. 56.89, ನಾಗಠಾಣ(ಎಸ್ಸಿ)- ಶೇ 63.70 , ಇಂಡಿ- ಶೇ. 62.61, ಸಿಂದಗಿ-ಶೇ. 59.83 ರಷ್ಟು ಮತದಾನವಾಗಿದೆ.

ಬೆಳಗ್ಗೆಯಿಂದಲೇ ಇಂಡಿ, ಚಡಚಣ, ಮುದ್ದೇಬಿಹಾಳ, ನಾಲತವಾಡ ಸೇರಿದಂತೆ ಹಲವು ಕಡೆ ಮತಯಂತ್ರಗಳಲ್ಲಿ ದೋಷ ಕಂಡು ಬಂತು. ಇದನ್ನು ನಿಭಾಯಿಸಲು ಚುನಾವಣೆ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಕೆಲವು ಕಡೆ ಬ್ಯಾಲೆಟ್ ಪೇಪರ್​ನಲ್ಲಿ ಕಾಂಗ್ರೆಸ್ ಚಿಹ್ನೆ ಇಲ್ಲದ ಕಾರಣ ಕಾಂಗ್ರೆಸ್ ಕಾರ್ಯಕರ್ತರು ವಾದಕ್ಕೆ ಇಳಿದರು.

ಚಿಕ್ಕೋಡಿ ಲೋಕಸಭಾ ಕ್ಷೇತ್ರ:

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಹಣೆಬರಹವನ್ನು ಮತದಾರ ಪ್ರಭು ಇವಿಎಂ ಮತಯಂತ್ರಗಳಲ್ಲಿ ಭದ್ರಪಡಿಸಿದ್ದು, ಚಿಕ್ಕೋಡಿ ಲೋಕಸಭಾ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಮತಕ್ಷೇತ್ರಗಳ ಒಟ್ಟು ಮತದಾನ ಶೇಕಡಾ ನಡೆದಿರುವ ವಿವರ ಹೀಗಿದೆ.

ಸದಲಗಾ - ಶೇ. 80.79, ನಿಪ್ಪಾಣಿ - ಶೇ77.71, ಅಥಣಿ - ಶೇ 73.93, ಕಾಗವಾಡ - ಶೇ. 75.31, ಕುಡಚಿ - ಶೇ.69.16, ರಾಯಬಾಗ - ಶೇ. 71.74, ಹುಕ್ಕೇರಿ - ಶೇ. 72.11, ಯಮಕನಮರಡಿ - ಶೇ. 80.30, ಒಟ್ಟು ಮತದಾನ ಪ್ರತಿಶತ - ಶೇ. 75.42 ರಷ್ಟು ಮತದಾನ ಆಗಿದೆ.

ಇನ್ನೂ ಉಭಯ ಪಕ್ಷಗಳ ಅಭ್ಯರ್ಥಿಗಳು ಕೂಡ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದು ಮತ ಎಣಿಕೆಯ ನಂತರ ಮತದಾರರ ಒಲವು ಯಾರ ಪರವಾಗಿದೆ, ಯಾರು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಅನ್ನುವುದು ಮಾತ್ರ ಫಲಿತಾಂಶದ ದಿನವೇ ತಿಳಿದು ಬರಬೇಕಿದೆ.

Intro:ಬೀದರ ಲೋಕಸಭಾ ಚುನಾವಣೆ ಶಾಂತಿಯುತ ಶೇ.62.76 ಮತದಾನ...!

ಬೀದರ:
ಲೋಕಸಭಾ ಚುನಾವಣೆಗೆ ಶೇ.62.76ರಷ್ಟು ಮತದಾನವಾಗಿದೆ. ಒಟ್ಟು 17,73,912 ಮತದಾರರ ಪೈಕಿ 5,76,199 ಪುರುಷರು ಹಾಗೂ 5,37,109 ಮಹಿಳೆಯರು ಮತ್ತು ಇತರೆ ನಾಲ್ವರು ಸೇರಿ 11,13,312 ರಷ್ಟು ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ ಅವರು ತಿಳಿಸಿದ್ದಾರೆ.

ಕಳೇದ ಚುನಾವಣೆಯಲ್ಲಿ ಶೇ.61.16 ರಷ್ಟು ಮತದಾನವಾಗಿದ್ದು ಈ ಬಾರಿ ಸ್ವಲ್ಪ ಮಟ್ಟದಲ್ಲಿ ಹೆಚ್ಚಾಗಿದೆ. ಹೊಸ ಮತದಾರರ ಸಂಖ್ಯೆ ಹೆಚ್ಚಾದರು ಕೂಡ ನೀರಿಕ್ಷೆ ಮಟ್ಟದಲ್ಲಿ ಮತದಾನವಾಗದಿರುವುದು ಕಂಡು ಬಂದಿದೆ.

ಬೀದರ ಲೋಕಸಭಾ ಚುನಾವಣೆ ವ್ಯಾಪ್ತಿಯ ಎಂಟು ವಿಧಾನಸಭಾ ಮತಕ್ಷೇತ್ರಗಳ ಶೇಕಡಾವಾರು ಮತದಾನದ ವಿವರ ಈ ಕೆಳಗಿನಂತಿದೆ.

* ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.59.94 ರಷ್ಟು ಮತದಾನವಾಗಿದ್ದು, 1,16,147 ಮತದಾರರು ಮತ ಚಲಾಯಿಸಿದ್ದಾರೆ.

* ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಶೇ.57.01 ರಷ್ಟು ಮತದಾನವಾಗಿದ್ದು, 1,32,516 ಮತದಾರರು ಮತ ಚಲಾಯಿಸಿದ್ದಾರೆ.

* ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಶೇ.63.91 ರಷ್ಟು ಮತದಾನವಾಗಿದ್ದು, 1,46,973 ಮತದಾರರು ಮತ ಚಲಾಯಿಸಿದ್ದಾರೆ.

* ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಶೇ.62.22 ರಷ್ಟು ಮತದಾನವಾಗಿದ್ದು, 1,51,473 ಮತದಾರರು ಮತ ಚಲಾಯಿಸಿದ್ದಾರೆ.

* ಬೀದರ (ದಕ್ಷಿಣ) ವಿಧಾನಸಭಾ ಕ್ಷೇತ್ರದಲ್ಲಿ ಶೇ.64.76 ರಷ್ಟು ಮತದಾನವಾಗಿದ್ದು, 1,32,016 ಮತದಾರರು ಮತ ಚಲಾಯಿಸಿದ್ದಾರೆ.

* ಬೀದರ ವಿಧಾನಸಭಾ ಕ್ಷೇತ್ರದಲ್ಲಿ ಶೇ.62.61 ರಷ್ಟು ಮತದಾನವಾಗಿದ್ದು, 1,38,907 ಮತದಾರರು ಮತ ಚಲಾಯಿಸಿದ್ದಾರೆ.

* ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.67.11 ರಷ್ಟು ಮತದಾನವಾಗಿದ್ದು, 1,54,513 ಮತದಾರರು ಮತ ಚಲಾಯಿಸಿದ್ದಾರೆ.

* ಔರಾದ್ ವಿಧಾನಸಭಾ ಕ್ಷೇತ್ರದಲ್ಲಿ ಶೇ.64.47 ರಷ್ಟು ಮತದಾನವಾಗಿದ್ದು, 1,40,767 ಮತದಾರರು ಮತ ಚಲಾಯಿಸಿದ್ದಾರೆ.
ಗಮನ ಸೆಳೆದ ಮತಗಟ್ಟೆಗಳು: ಜಿಲ್ಲೆಯಲ್ಲಿ ಒಟ್ಟು 30 ಸಖಿ ಮತಗಟ್ಟೆಗಳನ್ನು ತೆರೆಯಲಾಗಿತ್ತು. ಬೀದರ ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ಸ್ಥಾಪಿಸಿದ್ದ ಮಾದರಿ ಮತದಾನ ಕೇಂದ್ರ ಸ್ವಾಗತ ಕಮಾನು, ಬಲೂನುಗಳು, ತಳಿರುತೋರಣ, ಚಿತ್ತಾರದ ಪರದೆಗಳೊಂದಿಗೆ ಗಮನ ಸೆಳೆಯಿತು.
ಹಿರಿಯರು-ವಿಕಲಚೇತನರಲ್ಲಿ ಉತ್ಸಾಹ: ವಯೋವೃದ್ಧರು ಮತ್ತು ವಿಶೇಷಚೇತನರು ಮತದಾನ ಕೇಂದ್ರಕ್ಕೆ ಬಂದು ಮತಚಲಾಯಿಸಿದ್ದು ಕಂಡುಬಂದಿತು. ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿತ್ತು. ಇವರಿಗೆ ಸ್ವಯಂ ಸೇವಕರ ನೆರವು ನೀಡಿದರು.

ಹರುಷದಿಂದ ಬಂದ ಫಸ್ಟ್ ಓಟರ್ಸ್:

22835 ಪುರುಷರು, 16423 ಮಹಿಳೆಯರು ಹಾಗೂ 8 ಜನ ಇತರೆ ಸೇರಿ ಜಿಲ್ಲೆಯಲ್ಲಿ 38,266ರಷ್ಟು ಯುವ ಮತದಾರರು ಇದ್ದು, ಮತದಾನ ದಿನದಂದು ಕೆಲವು ಮತಗಟ್ಟೆಗಳಲ್ಲಿ ಮೊದಲ ಬಾರಿಗೆ ತಮ್ಮ ಮತಹಕ್ಕನ್ನು ಚಲಾಯಿಸಲು ಬಂದಂತಹ ಯುವತಿಯರಲ್ಲಿ ಉತ್ಸಾಹ ಕಂಡು ಬಂದಿತು. ಸರದಿ ಸಾಲಿನಲ್ಲಿ ನಿಂತು ಓಟು ಹಾಕಿದರು.

ಮೇ.23ರಂದು ಮತಎಣಿಕೆ:

ಎಲ್ಲಾ ಮತಗಟ್ಟೆಗಳ ಮತಯಂತ್ರಗಳು ಆಯಾ ವಿಧಾನಸಭಾ ಕ್ಷೇತ್ರಗಳ ಡಿಮಸ್ಟರಿಂಗ್ ಕೇಂದ್ರ ತಲುಪುತ್ತಿದ್ದು, ಎಲ್ಲಾ ಕ್ರೋಡೀಕರಣಗೊಂಡು ನಗರದ ಬಿವ್ಹಿಬಿ ಕಾಲೇಜಿನಲ್ಲಿ ಮೇ.23ರಂದು ಮತ ಎಣಿಕೆ ನಡೆಯಲಿದೆ.Body:ಅನೀಲConclusion:ಬೀದರ್
Last Updated : Apr 24, 2019, 10:52 AM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.