ETV Bharat / city

ಸಂತರ ನಡೆ ಶಾಂತಿ-ಸಾಮಾಜಿಕ ಸಾಂತ್ವನದ ಕಡೆ.. ಎಲ್ಲಾ ಜಾತಿ-ಧರ್ಮದಲ್ಲಿ ಶಾಂತಿ ನೆಲೆಸಲಿ.. ಶ್ರೀ ಮುರುಘಾ ಶರಣರು - swamijis visited the harshas home

ಸಾರ್ವಜನಿಕವಾಗಿ ಶಾಂತಿ ಸಾಮರಸ್ಯ ಬಹಳ ಮುಖ್ಯ. ಹಾಗಾಗಿ, ಎಲ್ಲಾ ಜಾತಿ- ಧರ್ಮದಲ್ಲೂ ಆಂತರಿಕ - ಸಾಮಾಜಿಕ ಶಾಂತಿ ನೆಲೆಗೊಳ್ಳಲಿ ಎಂದು ಅವರು ಹೇಳಿದ್ದಾರೆ..

swamijis-visited-the-harshas-home
ಡಾ.ಶಿವಮೂರ್ತಿ ಮುರುಘಾ ಶರಣ ಶ್ರೀ
author img

By

Published : Feb 26, 2022, 3:53 PM IST

ಶಿವಮೊಗ್ಗ: ಎಲ್ಲಾ ಜಾತಿ-ಧರ್ಮಗಳಲ್ಲಿ ಶಾಂತಿ ನೆಲೆಸಬೇಕು. ಈ ನಿಟ್ಟಿನಲ್ಲಿ ಸಂಘ- ಸಂಸ್ಥೆಗಳಿರಬಹುದು, ಸರಕಾರ ಇರಬಹುದು ಎಲ್ಲರೂ ಸೇರಿಕೊಂಡು ಸಮಾಜದಲ್ಲಿ ಸಾಮರಸ್ಯ ಮತ್ತು ಶಾಂತಿ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕೆಂದು ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣ ಶ್ರೀ ಹೇಳಿದ್ದಾರೆ.

ಇತ್ತೀಚೆಗೆ ಹತ್ಯೆಯಾದ ಹರ್ಷ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತರ ನಡೆ ಸಾಂತ್ವನದ ಕಡೆ. ಹಾಗಾಗಿ, ಎಲ್ಲಾ ಸ್ವಾಮಿಗಳು ಇಲ್ಲಿಗೆ ಬಂದಿದ್ದೇವೆ.

ಹರ್ಷ ತುಂಬಾ ಉತ್ಸಾಹಿ ಯುವಕನಾಗಿದ್ದ ಎಂದರು. ಸಮಾಜದಲ್ಲಿ ಸಂಘರ್ಷ ನಡೆಯಬೇಕು. ಆದರೆ, ಹಿಂಸಾತ್ಮಕ ಸಂಘರ್ಷ ನಡೆಯಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹಿ‌ಂಸಾತ್ಮಕ ಸಂಘರ್ಷದಿಂದ ನಾವು ಹರ್ಷ ಅವರನ್ನು ಕಳೆದುಕೊಂಡಿದ್ದೇವೆ. ಅಂತರಂಗ,ಬಹಿರಂಗದಲ್ಲಿ ರಾಷ್ಟ್ರ ಪ್ರೇಮ ಹೊಂದಿದ್ದ ಹುಡುಗ ಹರ್ಷ.

ಹಾಗಾಗಿ, ಅವರ ಹೆತ್ತವರಿಗೆ,ಸಹೋದರಿಯರಿಗೆ ಧೈರ್ಯ ತುಂಬಿ ಆಶೀರ್ವಾದವನ್ನು ಮಾಡಲು ಬಂದಿರುವುದಾಗಿ ಹೇಳಿದರು. ಸಮಕಾಲೀನ ಸಂತರ ನಡೆ ಶಾಂತಿ,ಸಾಮಾಜಿಕ ಸಾಂತ್ವನದ ಕಡೆ. ಹಾಗಾಗಿ, ನಾವು 12ಕ್ಕೂ ಹೆಚ್ಚು ಸ್ವಾಮೀಜಿಗಳು ಬಂದಿದ್ದೇವೆ. ಇದು ತಮ್ಮ ಕರ್ತವ್ಯ ಕೂಡ ಎಂದು ಶ್ರೀಗಳು ಹೇಳಿದರು.

ಡಾ.ಶಿವಮೂರ್ತಿ ಮುರುಘಾ ಶರಣ ಶ್ರೀ ಮಾತನಾಡುತ್ತಿರುವುದು..

ಸಾರ್ವಜನಿಕವಾಗಿ ಶಾಂತಿ ಸಾಮರಸ್ಯ ಬಹಳ ಮುಖ್ಯ. ಹಾಗಾಗಿ, ಎಲ್ಲಾ ಜಾತಿ- ಧರ್ಮದಲ್ಲೂ ಆಂತರಿಕ - ಸಾಮಾಜಿಕ ಶಾಂತಿ ನೆಲೆಗೊಳ್ಳಲಿ ಎಂದು ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಬಸವ ಕೇಂದ್ರದ ಬಸವ ಮರುಳಸಿದ್ಧ ಸ್ವಾಮಿ,ಮಾದರ ಚೆನ್ನಯ್ಯ ಸ್ವಾಮಿ,ಡಾ.ಶಾಂತವೀರ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಓದಿ : ಹರ್ಷನ ಕೊಲೆ ಪೊಲೀಸರ ವೈಫಲ್ಯದಿಂದ ನಡೆದಿದೆ : ವಾಸುದೇವ ಕಾಮತ್ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.