ETV Bharat / city

ತಂದೆ ಬಂಗಾರಪ್ಪರಂತೆ ಮಧು ಬಂಗಾರಪ್ಪ ಕೂಡ ರಾಜ್ಯ ನಾಯಕರಾಗುತ್ತಾರೆ: ಸಿದ್ದರಾಮಯ್ಯ

ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾಗಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ಮಧು ಅವರು ತಮ್ಮ ತಂದೆ ಬಂಗಾರಪ್ಪರಂತೆ ರಾಜ್ಯ ನಾಯಕರಾಗುತ್ತಾರೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ಮಧು ಬಂಗಾರಪ್ಪರನ್ನು ಭೇಟಿ ಮಾಡಿದ ಸಿದ್ದರಾಮಯ್ಯ

author img

By

Published : Oct 23, 2021, 1:58 PM IST

ಶಿವಮೊಗ್ಗ: ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮಧು ಬಂಗಾರಪ್ಪನವರ ಮನೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಸೊರಬ ತಾಲೂಕು ಕುಬಟೂರಿನಲ್ಲಿರುವ ಅವರ ನಿವಾಸಕ್ಕೆ ನಿನ್ನೆ ರಾತ್ರಿ ಭೇಟಿ ಮಾಡಿ ಅಲ್ಲಿಯೇ ವಾಸ್ತವ್ಯ ಹೂಡಿದ್ದರು.

ಮಧು ಬಂಗಾರಪ್ಪರನ್ನು ಭೇಟಿ ಮಾಡಿದ ಸಿದ್ದರಾಮಯ್ಯ

ಇಂದು ಬೆಳಗ್ಗೆ ಮಧು ಬಂಗಾರಪ್ಪನವರ ಜೊತೆ ವಾಕಿಂಗ್ ಮಾಡಿ, ಬೆಳಗಿನ ಉಪಹಾರ ಮುಗಿಸಿ ಅಲ್ಲಿಂದ ಹಾನಗಲ್ ಪ್ರಚಾರಕ್ಕೆ ತೆರಳಿದರು.

ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾಗಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ಮಧು ಅವರು ತಮ್ಮ ತಂದೆ ಬಂಗಾರಪ್ಪರಂತೆ ರಾಜ್ಯ ನಾಯಕರಾಗುತ್ತಾರೆ. ಬಂಗಾರಪ್ಪನವರ ಸ್ಥಾನವನ್ನು ತುಂಬುತ್ತಾರೆ ಎಂದು ಭವಿಷ್ಯ ನುಡಿದರು.

ಹೆಚ್ಚಿನ ಓದಿಗೆ: ‘ಕೊನೆಯವರೆಗೂ ಕಾಂಗ್ರೆಸ್​​ನಲ್ಲೇ ಇರುವೆ’.. ಅಧಿಕೃತವಾಗಿ ಕಾಂಗ್ರೆಸ್ ಸದಸ್ಯತ್ವ ಪಡೆದ ಮಧು ಬಂಗಾರಪ್ಪ

ಮಧು ಅವರನ್ನು ಒಂದು ಬಾರಿ ಶಾಸಕರನ್ನಾಗಿಸಿದ್ದೀರಿ, ಮುಂದಿನ ಬಾರಿ ಮತ್ತೆ ಅವರನ್ನು ಶಾಸಕರನ್ನಾಗಿ ಮಾಡಿ ಎಂದು ವಿನಂತಿಸಿದ ಸಿದ್ದರಾಮಯ್ಯ, ಅಲ್ಲಿಂದ ಬಳಿಕ ಹಾನಗಲ್ ಪ್ರಚಾರಕ್ಕೆ ತೆರಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.