ETV Bharat / city

ಸಿದ್ದರಾಮಯ್ಯಗೆ ಸಂಪೂರ್ಣ ಹುಚ್ಚು ಹಿಡಿದಿದೆ: ಕೆ.ಎಸ್ ಈಶ್ವರಪ್ಪ ವಾಗ್ದಾಳಿ

ಸಿದ್ದರಾಮಯ್ಯಗೆ ಸಂಪೂರ್ಣ ಹುಚ್ಚು ಹಿಡಿದಿದೆ. ಮುಂಬರುವ ಹಾನಗಲ್​ ಹಾಗೂ ಸಿಂದಗಿ ಉಪ ಚುನಾವಣೆಯಲ್ಲಿ ಬಿಜೆಪಿಯೇ ಗೆಲುವು ಸಾಧಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಭರವಸೆ ವ್ಯಕ್ತಪಡಿಸಿದರು.

ಈಶ್ವರಪ್ಪ
ಈಶ್ವರಪ್ಪ
author img

By

Published : Oct 1, 2021, 10:47 AM IST

ಶಿವಮೊಗ್ಗ: ಕೆಲವರಿಗೆ ಸ್ವಲ್ಪ ಹುಚ್ಚು ಇರುತ್ತದೆ. ಇನ್ನೂ ಕೆಲವರಿಗೆ ಅರ್ಧ ಹುಚ್ಚು ಇರುತ್ತದೆ. ಆದರೆ ಸಿದ್ದರಾಮಯ್ಯಗೆ ಸಂಪೂರ್ಣ ಹುಚ್ಚು ಹಿಡಿದಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಆರ್‌ಎಸ್‌ಎಸ್‌ನವರದ್ದು ತಾಲಿಬಾನ್ ಸಂಸ್ಕೃತಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನ ಹುಚ್ಚು ಯಾವಾಗ ಕಡಿಮೆಯಾಗುತ್ತದೆಯೋ ಆವಾಗ ಅವರ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ಸಿಎಂ ಸ್ಥಾನ ಕಳೆದುಕೊಂಡ ಬಳಿಕ ಸಿದ್ದರಾಮಯ್ಯಗೆ ಹುಚ್ಚು ಹಿಡಿದಿದೆ. ಡಿ.ಕೆ ಶಿವಕುಮಾರ್ ಅಧ್ಯಕ್ಷರಾದ ಮೇಲೆ ಅವರಿಬ್ಬರ ನಡುವೆ ಯುದ್ದ ನಡೆಯುತ್ತಿದೆ. ಹೀಗಾಗಿ‌ ಸಿದ್ದರಾಮಯ್ಯ ಅವರಿಗೆ ಏನು ಮಾಡಬೇಕು ಎಂದು ತೋಚುತ್ತಿಲ್ಲ ಎಂದರು.

ಸಿದ್ದು ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ

ಮೊದಲು ಹಿಂದುಳಿದವರ ಪರ ಕೆಲಸ ಮಾಡುತ್ತೇನೆ ಎಂದು ಘೊಷಣೆ ಮಾಡುತ್ತಿದ್ದರು. ಜಾತಿ ಗಣತಿ ತರುತ್ತೇನೆ ಎಂದು 200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇನೆ ಎಂದಿದ್ದರು. ಆದರೆ‌, ಸಿದ್ದರಾಮಯ್ಯ ಕಾಂತರಾಜ್ ವರದಿ ಏಕೆ ಬಿಡುಗಡೆ ಮಾಡಲಿಲ್ಲ. ವರದಿ‌ ಬಿಡುಗಡೆಗೆ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಒಪ್ಪಲಿಲ್ಲ ಎನ್ನುತ್ತಾರೆ. ಹಾಗಿದ್ದರೆ ಜೆಡಿಎಸ್‌ಗೆ ನೀಡಿದ ಬೆಂಬಲ‌ ವಾಪಸ್ ತೆಗೆದುಕೊಳ್ಳಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಾಬಾ ಬುಡನ್ ಗಿರಿ ಕುರಿತ ತೀರ್ಪು ಸ್ವಾಗತ:

ಬಾಬಾ ಬುಡನ್​ಗಿರಿ ಕುರಿತು ಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತ ಮಾಡುತ್ತೇನೆ. ಅದರಂತೆಯೇ ಹಿಂದೂ ಅರ್ಚಕರನ್ನು ನೇಮಕ ಮಾಡುತ್ತೇವೆ. ದತ್ತಪೀಠದಲ್ಲಿ ಪೂಜೆ ಆಗಬೇಕು ಎಂದು ಬಿಜೆಪಿ ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬಂದಿತ್ತು ಎಂದರು.‌

ಸಿಎಂ ಹಾಗೂ ಕಟೀಲ್​ ನೇತೃತ್ವದಲ್ಲಿ ಉಪ ಚುನಾವಣೆ:

ಮುಂಬರುವ ಹಾನಗಲ್​ ಹಾಗೂ ಸಿಂದಗಿ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಹೈ- ಕಮಾಂಡ್ ಶೀಘ್ರದಲ್ಲಿಯೇ ಸೂಚಿಸಲಿದೆ. ಈ ಚುನಾವಣೆಗಲ್ಲಿ ಸಹ ಬಿಜೆಪಿಯೇ ಗೆಲುವು ಸಾಧಿಸಲಿದೆ. ಈ ಎರಡು ಚುನಾವಣೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್ ನೇತೃತ್ವದಲ್ಲಿ ಎದುರಿಸುತ್ತೇವೆ ಎಂದರು.

ಶಿವಮೊಗ್ಗದಲ್ಲೂ ದಸರಾ ಆಚರಣೆಗೆ ಸಿದ್ಧತೆ:

ಶಿವಮೊಗ್ಗದಲ್ಲಿ ಮೈಸೂರು ಮಾದರಿಯಂತೆ ದಸರಾ ಆಚರಣೆಗೆ ತೀರ್ಮಾನ ಮಾಡಲಾಗಿದೆ. ದಸರಾ ಉತ್ಸವವನ್ನು ಅತ್ಯಂತ ಭಕ್ತಿಯಿಂದ, ಸರಳತೆ ಹಾಗೂ ವೈಭವಯುತವಾಗಿ ಆಚರಿಸಲು ತೀರ್ಮಾನ ಮಾಡಲಾಗಿದೆ. ದಸರಾ ನಿಮಿತ್ತ 9 ದಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು. ಇದೇ ವೇಳೆ, ಜಿಲ್ಲಾಧಿಕಾರಿ ಕಚೇರಿಯ ಎಫ್ ಡಿಎ ಗಿರಿರಾಜ್ ನಾಪತ್ತೆ ಆಗಿರುವುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.