ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಶಿವಮೊಗ್ಗ ಯುವ ಕಾಂಗ್ರೆಸ್ ಪೊಲೀಸರಿಗೆ ದೂರು ನೀಡಿದೆ. ಗೃಹ ಸಚಿವರು ಬೆಂಗಳೂರಿನ ಯುವಕ ಚಂದ್ರು ಕೊಲೆ ಪ್ರಕರಣದಲ್ಲಿ ಮೊದಲು ಉರ್ದು ಭಾಷೆ ಬಗ್ಗೆ ಹೇಳಿಕೆ ನೀಡಿದ್ರು. ನಂತರ ಎರಡು ಬೈಕ್ನವರ ನಡುವೆ ನಡೆದ ಗಲಾಟೆಯಾಗಿದೆ ಎಂದು ಹೇಳುವ ಮೂಲಕ ರಾಜ್ಯದಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡಿದ್ದಾರೆ. ಉನ್ನತ ಹುದ್ದೆಯಲ್ಲಿರುವವರು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಇದರಿಂದ ರಾಜ್ಯದ ಶಾಂತಿಗೆ ಭಂಗವುಂಟಾಗುವ ಸಾಧ್ಯತೆ ಇದೆ. ಹಾಗಾಗಿ ಗೃಹ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಯನಗರ ಪೊಲೀಸರಿಗೆ ದೂರು ನೀಡಿದರು.
ಇದನ್ನೂ ಓದಿ: ಶಕ್ತಿಧಾಮಕ್ಕೆ ಸರ್ಕಾರ ₹5 ಕೋಟಿ ನೀಡಲಿದೆ: ಸಿಎಂ ಬೊಮ್ಮಾಯಿ
ಗೃಹ ಸಚಿವ ವಿರುದ್ಧ ದೂರು ನೀಡಲು ಹೋದ ಯುವ ಕಾಂಗ್ರೆಸ್ಸಿಗರು ಹಾಗೂ ಜಯನಗರ ಪೊಲೀಸ್ ಠಾಣೆಯ ಪಿಐ ಮಾದಪ್ಪನವರ ನಡುವೆ ಕೆಲಹೊತ್ತು ವಾಗ್ವಾದ ನಡೆಯಿತು. ಪೊಲೀಸ್ ಇನ್ಸ್‌ಪೆಕ್ಟರ್ ದೂರು ಸ್ವೀಕರಿಸುವುದಿಲ್ಲ ಎಂಬ ಹೇಳಿಕೆಯಿಂದ ಮೊದಲು ಕೆರಳಿದ ಕಾಂಗ್ರಸ್ಸಿಗರು ಯಾಕೆ ದೂರು ತೆಗೆದುಕೊಳ್ಳುವುದಿಲ್ಲ ಎಂದು ಪ್ರಶ್ನೆ ಮಾಡಿದರು. ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸರು ದೂರು ಸ್ವೀಕರಿಸಿದರು.