ETV Bharat / city

ಶಿವಮೊಗ್ಗ ಚಾಕು ಇರಿತ ಪ್ರಕರಣ: ಆರೋಪಿಗಳಿಗೆ ಎರಡು ದಿನ ಪೊಲೀಸ್ ಕಸ್ಟಡಿ

ಆರೋಪಿಗಳಾದ ನದೀಮ್, ರೆಹಮಾನ್ ಹಾಗೂ ತನ್ವೀರ್​ನನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಶಿವಮೊಗ್ಗದ 5ನೇ ಜೆಎಂಎಫ್​ಸಿ‌ ನ್ಯಾಯಾಲಯ ಆದೇಶಿಸಿದೆ.

shivamogga-stabbed-case-two-days-police-custody-for-accused
ಶಿವಮೊಗ್ಗ ಚಾಕು ಇರಿತ ಪ್ರಕರಣ: ಆರೋಪಿಗಳಿಗೆ ಎರಡು ದಿನ ಪೊಲೀಸ್ ಕಸ್ಟಡಿ
author img

By

Published : Aug 16, 2022, 8:06 PM IST

ಶಿವಮೊಗ್ಗ: ನಗರದ ಗಾಂಧಿ ಬಜಾರ್​ನಲ್ಲಿ ಸೋಮವಾರ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕುವಿನಿಂದ ಇರಿದ ಪ್ರಕರಣದಲ್ಲಿ ಬಂಧಿತರಾದ ಮೂವರನ್ನು ಎರಡು ದಿನಗಳ ಅವಧಿಗೆ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ. ಐದನೇ ಜೆಎಂಎಫ್​ಸಿ‌ ನ್ಯಾಯಾಲಯದ ನ್ಯಾಯಾಧೀಶ ಶಿವಕುಮಾರ್ ಅವರು ಆರೋಪಿಗಳಾದ ನದೀಮ್, ರೆಹಮಾನ್ ಹಾಗೂ ತನ್ವೀರ್​ನನ್ನು ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದರು.

ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಹಲ್ಲೆ.. ಭದ್ರಾವತಿಯಲ್ಲಿ ಡಿಚ್ಚಿ ಮುಬಾರಕ್​ನಿಂದ ಯುವಕನ ಮೇಲೆ ಹಲ್ಲೆ

ಆರೋಪಿಗಳನ್ನು ಐದು ದಿನ ವಶಕ್ಕೆ ನೀಡಿದರೆ ವಿಚಾರಣೆ ನಡೆಸಲು ಸಹಕಾರಿ ಆಗುತ್ತದೆ ಎಂದು ದೊಡ್ಡಪೇಟೆ ಪೊಲೀಸರು ಮನವಿ ಮಾಡಿದರು. ಆದರೆ, ನ್ಯಾಯಧೀಶರು ಕೇವಲ ಎರಡು ದಿನದಲ್ಲಿ ವಿಚಾರಣೆ ನಡೆಸಿ ಮುಗಿಸುವಂತೆ ಸೂಚಿಸಿದರು.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಯುವಕನಿಗೆ ಚಾಕು ಇರಿತ.. ಪ್ರಮುಖ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

ಇನ್ನೋರ್ವ ಆರೋಪಿ ಜಬೀ ಕಾಲಿಗೆ ಗುಂಡೇಟು ಬಿದ್ದು ಆತ ಮೆಗ್ಗಾನ್ ಆಸ್ಪತ್ರೆಯ ಜೈಲ್​ ವಾರ್ಡ್​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದರಿಂದ ಮೂವರು ಆರೋಪಿಗಳನ್ನು ಮಾತ್ರ ಕೋರ್ಟ್​ಗೆ ಹಾಜರುಪಡಿಸಲಾಗಿತ್ತು.

ಇದನ್ನೂ ಓದಿ: ಶಿವಮೊಗ್ಗ ಚೂರಿ ಇರಿತ ಪ್ರಕರಣ.. ಪೊಲೀಸರ ಪಥಸಂಚಲನದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.