ಶಿವಮೊಗ್ಗ: ಲಾಕ್ಡೌನ್ ಯಶಸ್ವಿ ಮಾಡಲು ಪೊಲೀಸ್ ಇಲಾಖೆ ಏನೆಲ್ಲಾ ಸರ್ಕಸ್ ಮಾಡಿದರೂ ಸಹ ಜನ ಸುಮ್ಮನೆ ರಸ್ತೆಗೆ ಬರುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಪ್ರಮುಖ ಸರ್ಕಲ್ಗಳಲ್ಲಿ ಸೆಕ್ಟರ್ ಲಾಕ್ ಹಾಕಿದ್ರೂ ಸಹ ಜನ ಬೀದಿಗಿಳಿಯುತ್ತಿದ್ದು, ಅಂತಹವರಿಗೆ ಪೊಲೀಸರು ಬುದ್ಧಿ ಕಲಿಸಲು ದಂಡ ಹಾಕುತ್ತಿದ್ದಾರೆ.
ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಭಾಗಗಳಲ್ಲಿಯೂ ಸಹ ಪೊಲೀಸರು ಅನವಶ್ಯಕವಾಗಿ ತಿರುಗಾಡುತ್ತಿದ್ದವರನ್ನು ಹಿಡಿದು ವಿಚಾರಿಸಿ ದಂಡ ಹಾಕುತ್ತಿದ್ದಾರೆ. ದಂಡ ನೀಡದೆ ಇದ್ದಲ್ಲಿ ಬೈಕ್ಗಳನ್ನು ಜಪ್ತಿ ಮಾಡುತ್ತಿದ್ದಾರೆ. ಇದರಿಂದ ಸುಮ್ಮನೆ ಸುತ್ತಿ ಲಾಕ್ಡೌನ್ ವಿಫಲಗೊಳಿಸುವವರಿಗೆ ತಕ್ಕ ಪಾಠ ಕಲಿಸುತ್ತಿದ್ದಾರೆ.