ಶಿವಮೊಗ್ಗ: ಪೊಲೀಸರು ಲಾಕ್ಡೌನ್ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುವ ವಾಹನಗಳನ್ನು ವಶಕ್ಕೆ ಪಡೆದು ದಂಡ ವಸೂಲಿ ಮಾಡುತ್ತಿದ್ದಾರೆ. ಹೀಗಾಗಿ, ಶಿವಮೊಗ್ಗ ಜನತೆ ಅಗತ್ಯ ವಸ್ತುಗಳ ಖರೀದಿಗೆ ವಾಹನಗಳನ್ನು ಬಿಟ್ಟು, ಸೈಕಲ್ ಏರಿದ್ದಾರೆ.
ನಗರದ ಬಹುತೇಕ ಜನರು ಬೈಕ್, ಕಾರುಗಳನ್ನು ಬಿಟ್ಟು ಸೈಕಲ್ನಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬರುತ್ತಿದ್ದಾರೆ. ವಿಶೇಷ ಎಂದರೆ ವಿನೋಬ ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಉಮೇಶ್ ಕುಮಾರ್ ಸಹ ಮನೆಯಿಂದ ಕಚೇರಿಗೆ ಸೈಕಲ್ನಲ್ಲೇ ಬರುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಆರೋಗ್ಯದ ದೃಷ್ಟಿಯಿಂದ ಸೈಕಲ್ನಲ್ಲಿ ಓಡಾಡುವುದು ಉತ್ತಮ. ಹಾಗಾಗಿ ಸೈಕಲ್ನಲ್ಲೇ ಓಡಾಡುತ್ತೇವೆ ಎಂದಿದ್ದಾರೆ.
ಓದಿ: ಸಿಗದ ಆಂಬ್ಯುಲೆನ್ಸ್: ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಬೈಕ್ ಮೇಲೆಯೇ ಕೊಂಡೊಯ್ದರು!