ETV Bharat / city

ವರುಣಾರ್ಭಟಕ್ಕೆ ಕೆರೆಯಂತಾದ ಶಿವಮೊಗ್ಗ ಕ್ರಿಕೆಟ್ ಸ್ಟೇಡಿಯಂ..! - ನವುಲೇ ಕ್ರಿಕೆಟ್​ ಸ್ಟೇಡಿಯಂ ಜಲಾವೃತ

ರಣಜಿ ಪಂದ್ಯಗಳಿಗೆ ಸಾಕ್ಷಿಯಾಗಿದ್ದ ಶಿವಮೊಗ್ಗ ನಗರದ ಹೊರದಲ್ಲಿರುವ ಕೆಎಸ್​​ಸಿಎ ಕ್ರಿಕೆಟ್​ ಸ್ಟೇಡಿಯಂ ಧಾರಾಕಾರ ಮಳೆಯಿಂದ ಜಲಾವೃತಗೊಂಡಿದೆ. ನವುಲೇ ಕೆರೆಯಲ್ಲಿ ಕ್ರೀಡಾಂಗಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಕೆರೆಗೆ ಸೇರಬೇಕಿದ್ದ ನೀರು ಮೈದಾನಕ್ಕೆ ಹರಿದು ಬರುತ್ತಿದೆ.

shivamogga-ksca-cricket-stadium-filled-with-rain-water
ಶಿವಮೊಗ್ಗ ಕ್ರಿಕೆಟ್ ಸ್ಟೇಡಿಯಂ
author img

By

Published : Jul 24, 2021, 5:33 PM IST

ಶಿವಮೊಗ್ಗ: ಕಳೆದ ಎರಡು ದಿನದಿಂದ ಸುರಿಯುತ್ತಿರುವ ಭಾರಿ ಮಳೆಗೆ ನಗರದ ಹೊರ ವಲದಲ್ಲಿರುವ ಕೆ.ಎಸ್.ಸಿ.ಎ ಕ್ರಿಕೆಟ್ ಸ್ಟೇಡಿಯಂ ಸಂಪೂರ್ಣ ಜಲಾವೃತಗೊಂಡು ಕೆರೆಯಂತಾಗಿದೆ. ಕೆರೆ ಸ್ಥಳದಲ್ಲಿ ಕ್ರಿಡಾಂಗಣ ನಿರ್ಮಾಣ ಮಾಡಿರುವ ಹಿನ್ನೆಲೆಯಲ್ಲಿ ಮೈದಾನದಲ್ಲಿ ನೀರು ನಿಂತಿದೆ.

ವರುಣಾರ್ಭಟಕ್ಕೆ ಕೆರೆಯಂತಾದ ಶಿವಮೊಗ್ಗ ಕ್ರಿಕೆಟ್ ಸ್ಟೇಡಿಯಂ

26 ಎಕರೆ ವಿಸ್ತೀರ್ಣದಲ್ಲಿರುವ ಈ ಕ್ರೀಡಾಂಗಣದಲ್ಲಿ ಅನೇಕ ರಣಜಿ ಪಂದ್ಯಗಳು ನಡೆದಿವೆ. ನಿನ್ನೆ ಸುರಿದ ಮಳೆಯಿಂದಾಗಿ ಮೈದಾನ ಸಂಪೂರ್ಣ ಜಲಾವೃತಗೊಂಡು ಕೆರೆಯಂತೆ ಕಾಣುತ್ತಿದೆ. ಈ ಹಿಂದೆ 47 ಎಕರೆ ವಿಸ್ತೀರ್ಣದ ನವುಲೇ ಕೆರೆ ಇಲ್ಲಿತ್ತು. ಸದ್ಯ ಅದೇ ಜಾಗದಲ್ಲಿ 27 ಎಕರೆ ಭೂಮಿಯನ್ನು ಕೆ.ಎಸ್.ಸಿ.ಎಗೆ ಮಾರಾಟ ಮಾಡಲಾಗಿದೆ. ಉಳಿದ ಕೆರೆ ಜಾಗದ ಮಧ್ಯದಲ್ಲಿ ಶಿವಮೊಗ್ಗದಿಂದ ಹಾನಗಲ್​ಗೆ ಹೋಗುವ ಹೆದ್ದಾರಿಯೂ ಸಹ ಇದೆ.

ಕೆರೆ ಒತ್ತುವರಿಯಾಗಿರುವ ಜಾಗದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಿರುವ ಕಾರಣ ಕೆರೆಗೆ ಬರುವ ನೀರೆಲ್ಲ ಮೈದಾನಕ್ಕೆ ನುಗ್ಗುತ್ತಿದೆ. ಕಳೆದ ಭಾರಿಯೂ ಸಹ ಕ್ರೀಡಾಂಗಣ ಸಂಪೂರ್ಣ ಜಲಾವೃತಗೊಂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.