ETV Bharat / city

ನಾಳೆಯಿಂದ ಶಿವಮೊಗ್ಗ - ಬೆಂಗಳೂರು ರೈಲು ಸೇವೆ ಪುನಾರಂಭ: ರೈಲುಗಳ ವಿವರ ಇಂತಿದೆ..!

ಮಾರಾಣಾಂತಿಕ ಕೊರೊನಾ ಹಿನ್ನೆಲೆ ಸ್ಥಗಿತವಾಗಿದ್ದ ಶಿವಮೊಗ್ಗ - ಬೆಂಗಳೂರು ನಡುವಿನ ರೈಲು ಸಂಚಾರ ನಾಳೆಯಿಂದ ಪುನಾರಂಭವಾಗಲಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

shimoga-bangalore-train-service-start-from-tomorrow
ರೈಲು ಸೇವೆ ಪುನರಾರಂಭ
author img

By

Published : Aug 31, 2021, 10:41 PM IST

ಶಿವಮೊಗ್ಗ: ಕೋವಿಡ್ ನಿಂದ ಸ್ಥಗಿತವಾಗಿದ್ದ ಶಿವಮೊಗ್ಗ - ಬೆಂಗಳೂರಿನ ನಡುವಿನ ರೈಲು ಸಂಚಾರ ನಾಳೆಯಿಂದ ಪುನಾರಂಭವಾಗಲಿದೆ.‌

ತಾಳಗುಪ್ಪ- ಬೆಂಗಳೂರು ಗಾಡಿ ಸಂಖ್ಯೆ 07349/07350 ಪ್ಯಾಸೆಂಜರ್ ರೈಲು ಪ್ರಾರಂಭವಾಗಲಿದೆ. ಇದರ ಜೊತೆಗೆ ವಾರಕ್ಕೆ ಮೂರು ದಿನ ಸೋಮವಾರ, ಬುಧವಾರ ಹಾಗೂ ಶನಿವಾರ ರೈಲು ಸಂಚಾರ ಮಾಡುತ್ತಿದ್ದ, 07311/07312 ಯಶವಂತಪುರ- ಶಿವಮೊಗ್ಗ ‌ರೈಲು ಸಂಚಾರ ಮಾಡಲಿದೆ.

ಇದರ ಜೊತೆಗೆ‌ ಅರಸಾಳು ರೈಲು ನಿಲ್ದಾಣದಲ್ಲಿ 06227/06228 ಮೈಸೂರು - ತಾಳಗುಪ್ಪ ರೈಲು ಎಕ್ಸ್​ಪ್ರೆಸ್ ರೈಲು ನಿಲುಗಡೆ ಆಗಲಿದೆ. ಶಿವಮೊಗ್ಗ-ಯಶವಂತಪುರ- ಶಿವಮೊಗ್ಗ ಜನಶತಾಬ್ದಿ ಎಕ್ಸ್​ಪ್ರೆಸ್ ರೈಲು ಸೇವೆಯನ್ನು ಮೆಜಸ್ಟಿಕ್ ವರೆಗೆ ವಿಸ್ತರಿಸಲಾಗಿದೆ. ಶಿವಮೊಗ್ಗದಿಂದ ಹೊರಟ ರೈಲು ಬೆಂಗಳೂರಿಗೆ ತಲುಪಿದಾಗ ಅನಾನುಕೂಲವಾಗುವುದನ್ನು ತಪ್ಪಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.