ETV Bharat / city

ಉಕ್ರೇನ್ ಯುದ್ದ ಭೂಮಿಯಿಂದ ಸುರಕ್ಷಿತವಾಗಿ ವಾಪಸ್ ಆದ ಸಾಗರದ ಮನೀಷಾ ಲೋಬೊ - ಉಕ್ರೇನ್​ನಿಂದ ಬಂದ ಶಿವಮೊಗ್ಗ ವಿದ್ಯಾರ್ಥಿನಿ

ಉಕ್ರೇನ್​ ಮೇಲೆ ರಷ್ಯಾ ಸೇನೆ ದಾಳಿ ನಡೆಸಿದ ಪರಿಣಾಮ ಬಂಕರ್​ನಲ್ಲಿ ಆಶ್ರಯ ಪಡೆದಿದ್ದ ಸಾಗರ ಪಟ್ಟಣದ ನಿವಾಸಿ ಮನೀಷಾ ಇದೀಗ ಸುರಕ್ಷಿತವಾಗಿ ಮನೆಗೆ ಬಂದಿದ್ದಾರೆ.

ಉಕ್ರೇನ್​ನಿಂದ ವಾಪಸ್ ಆದ ಸಾಗರದ ವಿದ್ಯಾರ್ಥಿನಿ

author img

By

Published : Mar 3, 2022, 1:54 PM IST

ಶಿವಮೊಗ್ಗ: ಉಕ್ರೇನ್​ನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ನಿವಾಸಿ ಮನೀಷಾ ಲೋಬೊ ಸುರಕ್ಷಿತವಾಗಿ ಮನೆ ತಲುಪಿದ್ದಾರೆ.

ಕಳೆದ ಐದು ವರ್ಷಗಳಿಂದ ಉಕ್ರೇನ್​ನಲ್ಲಿ ಮನೀಷಾ ವ್ಯಾಸಂಗ ಮಾಡುತ್ತಿದ್ದರು. ಮನೀಷಾ ವಾಸವಾಗಿದ್ದ ಕೀವ್ ಸಿಟಿಯ ಮೇಲೆ ರಷ್ಯಾ ಸೇನೆ ದಾಳಿ ನಡೆಸಿದ ಪರಿಣಾಮ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಇಷ್ಟು ದಿನ ಬಂಕರ್​ನಲ್ಲಿ ಆಶ್ರಯ ಪಡೆದಿದ್ದ ಮನೀಷಾ ನೂರಾರು ಕಿ.ಮೀ ದೂರ ಕೆಟ್ಟ ಹವಾಮಾನದಲ್ಲಿಯೂ ಕಾಲ್ನಡಿಗೆಯಲ್ಲಿ ಸಾಗಿ, ರಿಸ್ಕ್ ತೆಗೆದುಕೊಂಡು ಗಡಿ ದಾಟಿ ಭಾರತ ಸರ್ಕಾರದ ಸಹಾಯದಿಂದ ಇದೀಗ ಮರಳಿ ಬಂದಿದ್ದಾರೆ.

ಉಕ್ರೇನ್​ನಿಂದ ವಾಪಸ್ ಆದ ಸಾಗರದ ವಿದ್ಯಾರ್ಥಿನಿ

ಇದನ್ನೂ ಓದಿ: ಉಕ್ರೇನ್​ನಲ್ಲಿ ಮೃತಪಟ್ಟ ನವೀನ್... ಮೂರನೇ ದಿನದ ಕಾರ್ಯ ನೆರವೇರಿಸಿದ ಕುಟುಂಬಸ್ಥರು

ವಿದೇಶಾಂಗ ಇಲಾಖೆ ಹಾಗೂ ಸಂಬಂಧ ಪಟ್ಟ ಏಜೆಂಟರ್​ಗಳು ಬಂಕರ್​ನಲ್ಲಿಯೇ ಇರಿ ಎಂದು ಹೇಳಿದ್ದರು. ಆದರೆ ಅಲ್ಲೂ ಸಹ ಊಟ, ನೀರಿನ ಸಮಸ್ಯೆ ಉಂಟಾಗಿತ್ತು. ಇದರಿಂದ ಎಲ್ಲರೂ ಜೀವವನ್ನು ಕೈಯಲ್ಲಿಟ್ಟುಕೊಂಡು ಲವ್ಯೂ ಎನ್ನುವ ಸಿಟಿಗೆ ಬಂದು ಅಲ್ಲಿಂದ ಪೊಲ್ಯಾಂಡ್​ಗೆ ತಲುಪಿ, ಅಲ್ಲಿನ ಭಾರತೀಯ ಅಧಿಕಾರಿಗಳನ್ನು ಹುಡುಕಿದ್ದೆವು. ಭಾರತ ಸರ್ಕಾರದ ಸಹಾಯದಿಂದ ಪೋಲ್ಯಾಂಡ್​ನಿಂದ ದೆಹಲಿಗೆ, ದೆಹಲಿಯಿಂದ ಬೆಂಗಳೂರಿಗೆ ಬರಲು ಸಾಧ್ಯವಾಯಿತು ಎಂದು ಮನೀಷಾ ತಿಳಿಸಿದ್ದಾರೆ. ಮಗಳು ಸುರಕ್ಷಿತವಾಗಿ ಮನೆ ತಲುಪಿದ್ದಕ್ಕೆ ಆಕೆಯ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.