ಶಿವಮೊಗ್ಗ: ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನ ಪಠ್ಯ ಪುಸ್ತಕದಲ್ಲಿ ಅಪಮಾನ ಮಾಡಿರುವವರ ಮೇಲೆ ದೇಶ ದ್ರೋಹದ ದೂರು ದಾಖಲಿಸುವಂತೆ ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಟಿಎಸ್ಬಿ ಶ್ರೇಟ್ಠಿ ವೃತ್ತದಲ್ಲಿ ಮಾದಿಗ ಮೀಸಲಾತಿ ಸಮಿತಿಯು ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಮಾತನಾಡಿದ ಶಿಕ್ಷಣ ಇಲಾಖೆಯ ನಿರ್ದೇಶಕರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿತು. ಶಾಲೆಗಳಲ್ಲಿ ಸಂವಿಧಾನ ದಿನಾಚರಣೆ ಆಚರಿಸುವ ಸುತ್ತೂಲೆಯ ಮಾರ್ಗದರ್ಶಿ ಕೈಪಿಡಿಯನ್ನು ಹೊರ ತಂದಿದ್ದು, ಇದರಲ್ಲಿ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಒಬ್ಬರೆ ಬರೆದಿಲ್ಲ. ಸಂವಿಧಾನವು ಅನೇಕ ಮಹಾನ್ ಪುರುಷ ಹಾಗೂ ಮಹಿಳೆಯರು ಸೇರಿ ಮಾಡಿರುವ ಸಾಮೂಹಿಕ ಪ್ರಯತ್ನದ ಎಂದು ಉಲ್ಲೇಖಿಸಲಾಗಿದೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಶಿಕ್ಷಣ ಇಲಾಖೆಯ ನಿರ್ದೇಶಕರ ವಿರುದ್ದ ದೇಶದ್ರೋಹದ ದೂರು ದಾಖಲಿಸಿ, ಮಂತ್ರಿ ಸ್ಥಾನದಿಂದ ಕಿತ್ತು ಹಾಕಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಭಾನುಪ್ರಸಾದ್ ಸೇರಿ ಇತರರು ಹಾಜರಿದ್ದರು.