ಶಿವಮೊಗ್ಗ: ಬಾಲ್ಟಪ್ಪ ಗೋಲಿ (ಹಣ ಕಟ್ಟಿ ಆಟ ಆಡುವ) ಆಡುವಾಗ ಇಬ್ಬರ ನಡುವಿನ ಗಲಾಟೆ ವಿಕೋಪಕ್ಕೆ ತಿರುಗಿ ಬೈಕ್ ಹಾಗೂ ಕಾರು ಜಖಂಗೊಂಡಿವೆ. ಶಿವಮೊಗ್ಗ ತಾಲೂಕು ಕೋಟೆಗಂಗೂರು ಗ್ರಾಮದ ಹಮಾಲಿ ಕಾಲೋನಿಯಲ್ಲಿ ಘಟನೆ ನಡೆದಿದೆ.
ನಿನ್ನೆ(ಭಾನುವಾರ) ಸಂಜೆ ಸೋಮಿನಕೊಪ್ಪ ಬಡಾವಣೆಯಲ್ಲಿ ವಿಜಯ್, ಭಾಸ್ಕರ್ ಹಾಗೂ ಮೊಹ್ಮದ್ ಖಿಝರ್ ಸೇರಿದಂತೆ ಹತ್ತಾರು ಜನ ಬಾಲ್ಟಪ್ಪ ಗೋಲಿ ಆಟವಾಡುತ್ತಿದ್ದರು. ಈ ಸಂದರ್ಭದಲ್ಲಿ ಗಲಾಟೆಯಾಗಿ ಭಾಸ್ಕರ್ ಎಂಬಾತ ಲಾಂಗ್ ತಂದು ರಸ್ತೆಯಲ್ಲಿ ಬೀಸಿದ್ದಾನೆ. ಇದರಿಂದ ಮೊಹ್ಮದ್ ಕೈಗೆ ಗಾಯವಾಗಿದೆ. ಬಳಿಕ ಭಾಸ್ಕರ್ ಅಲ್ಲಿಂದ ಪರಾರಿಯಾಗಿದ್ದ. ಮೊಹ್ಮದ್, ಭಾಸ್ಕರ್ನನ್ನು ಹುಡುಕಿಕೊಂಡು ಕೋಟೆಗಂಗೂರಿನ ಹಮಾಲಿ ಕಾಲೋನಿ ಹೋಗಿದ್ದಾನೆ. ಅಲ್ಲಿ ಆತ ಸಿಗಲಿಲ್ಲ. ಇದರಿಂದ ಕೋಪಗೊಂಡ ಮೊಹ್ಮದ್ ಅದೇ ಮಾರ್ಗದಲ್ಲಿ ಬರುತ್ತಿದ್ದ ಲೋಕೇಶ್ ಎಂಬುವರ ಕಾರಿನ ಮೇಲೆ ದಾಳಿ ನಡೆಸಿ ಜಖಂಗೊಳಿಸಿದ್ದಾನೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೋತಿಗಳ ದಾಳಿ ತಪ್ಪಿಸಲು ಹೋಗಿ ಕಟ್ಟಡದಿಂದ ಬಿದ್ದು ಬಾಲಕ ಸಾವು