ETV Bharat / city

ಶಿವಮೊಗ್ಗ: ವಾಕಿಂಗ್​​​​​​​​ ಬಂದವರನ್ನು ಠಾಣೆಗೆ ಕರೆತಂದು ವ್ಯಾಯಾಮ ಮಾಡಿಸಿದ ಡಿವೈಎಸ್​​ಪಿ! - Shivamogga Bike Siege News

ಡಿವೈಎಸ್​​ಪಿ ಪ್ರಶಾಂತ್ ಮುನ್ನೂಳಿ, ಶಿವಮೊಗ್ಗದ ವಿವಿಧೆಡೆ ವಾಕಿಂಗ್ ಮಾಡಲು ಬಂದಿದ್ದವರನ್ನು ಜಯನಗರ ಪೊಲೀಸ್ ಠಾಣೆಗೆ ಕರೆತಂದು ವ್ಯಾಯಾಮ ಮಾಡಿಸಿದ್ದಾರೆ. ಜೊತೆಗೆ ನೆಹರು ಕ್ರಿಂಡಾಗಣದಲ್ಲಿ ವಾಕಿಂಗ್ ಮಾಡಲು ಬೈಕ್​ನಲ್ಲಿ ಬಂದಿದ್ದ ಇಪ್ಪತ್ತಕ್ಕೂ ಹೆಚ್ಚು ಜನರ ಬೈಕ್​ಗಳನ್ನು ಸೀಜ್ ಮಾಡಿದ್ದಾರೆ.

Shivamogga
ವಾಕಿಂಗ್​​​​​​​​ ಬಂದವರನ್ನು ಠಾಣೆಗೆ ಕರೆತಂದು ವ್ಯಾಯಾಮ ಮಾಡಿಸಿದ ಡಿವೈಎಸ್​​ಪಿ
author img

By

Published : Jun 2, 2021, 11:57 AM IST

ಶಿವಮೊಗ್ಗ: ನಗರದ ನೆಹರು ಕ್ರೀಡಾಂಗಣ, ಆರ್​ಟಿ‌ಒ ರಸ್ತೆ ಸೇರಿದಂತೆ ಇತರೆಡೆ ಲಾಕ್​ಡೌನ್ ನಿಯಮ ಉಲ್ಲಂಘಿಸಿ ವಾಕಿಂಗ್ ಮಾಡಲು ಬಂದಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ವಾಕಿಂಗ್​​​​​​​​ ಬಂದವರನ್ನು ಠಾಣೆಗೆ ಕರೆತಂದು ವ್ಯಾಯಾಮ ಮಾಡಿಸಿದ ಡಿವೈಎಸ್​​ಪಿ

ಡಿವೈಎಸ್​​ಪಿ ಪ್ರಶಾಂತ್ ಮುನ್ನೂಳಿ ಅವರು ನಗರದ ವಿವಿಧೆಡೆ ವಾಕಿಂಗ್ ಮಾಡಲು ಬಂದಿದ್ದವರನ್ನು ಜಯನಗರ ಪೊಲೀಸ್ ಠಾಣೆಗೆ ಕರೆತಂದು ವ್ಯಾಯಾಮ ಮಾಡಿಸಿದ್ದಾರೆ. ಜೊತೆಗೆ ನೆಹರು ಕ್ರಿಂಡಾಗಣದಲ್ಲಿ ವಾಕಿಂಗ್ ಮಾಡಲು ಬೈಕ್​ನಲ್ಲಿ ಬಂದಿದ್ದ ಇಪ್ಪತ್ತಕ್ಕೂ ಹೆಚ್ಚು ಜನರ ಬೈಕ್​ಗಳನ್ನು ಸೀಜ್ ಮಾಡಿದ್ದಾರೆ.

ಬಳಿಕ ಮಾತನಾಡಿದ ಡಿವೈಎಸ್​​ಪಿ, ಇನ್ನೂ ಒಂದು ವಾರ ನಿಮ್ಮ ಬೈಕ್​ಗಳನ್ನು ಕೊಡುವುದಿಲ್ಲ. ಯಾರೂ ತಮ್ಮ ಬೈಕ್ ನೀಡಿ‌ ಎಂದು ಕೇಳಬೇಡಿ. ನಿಮ್ಮ‌ ಆರೋಗ್ಯದ ದೃಷ್ಟಿಯಿಂದಲೇ ಲಾಕ್​ಡೌನ್ ನಡೆಸಲಾಗುತ್ತಿದೆ. ದಯವಿಟ್ಟು ಕ್ಷಮಿಸಿ ಎಂದು ಕೈ ಮುಗಿದು ವಿನಂತಿಸಿಕೊಂಡರು.

ಇದನ್ನೂ ಓದಿ: ಸಿಎಂ ನೇತೃತ್ವದಲ್ಲಿ ಸಂಜೆ ಮಹತ್ವದ ಸಭೆ: ಲಾಕ್​​ಡೌನ್ ವಿಸ್ತರಣೆ ಭವಿಷ್ಯ ಇಂದೇ ನಿರ್ಧಾರ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.