ETV Bharat / city

ದೇಶ ವಿರೋಧಿ ಘೋಷಣೆ ಕೂಗಿದ ಅಮೂಲ್ಯ-ಆರ್ದ್ರಾ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ - ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ

ದೇಶ ವಿರೋಧಿ ಘೋಷಣೆ ಹಾಕಿದ ದೇಶದ್ರೋಹಿ ಅಮೂಲ್ಯ ಹಾಗೂ ಆರ್ದ್ರಾ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು.

protest-to-take-legal-action-on-amulya-and-aridra

author img

By

Published : Feb 22, 2020, 6:11 PM IST

ಚಿಕ್ಕಮಗಳೂರು/ಶಿವಮೊಗ್ಗ: ದೇಶ ವಿರೋಧಿ ಘೋಷಣೆ ಕೂಗಿದ ಅಮೂಲ್ಯಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಘಟಕ ಪ್ರತಿಭಟನೆ ನಡೆಸಿತು. ನಗರದ ತಾಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ಮಾಡಿದ ಬಿಜೆಪಿ ಕಾರ್ಯಕರ್ತರು, ಅಮೂಲ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪಾಕಿಸ್ತಾನದ ಪರ ಘೋಷಣೆ ಕೂಗಿದ ಅಮೂಲ್ಯಳನ್ನು ಗಲ್ಲಿಗೇರಿಸುವ ಮೂಲಕ ದೇಶದ್ರೋಹಿಗಳಿಗೆ ತಕ್ಕ ಸಂದೇಶ ರವಾನಿಸಬೇಕು. ವೋಟ್ ಬ್ಯಾಂಕ್ ರಾಜಕಾರಣವನ್ನು ಬದಿಗಿಟ್ಟು ದೇಶದ ಉನ್ನತಿಗಾಗಿ ಮಾಡಲಾದ ಕಾಯ್ದೆಯನ್ನು ಪ್ರತಿಯೊಬ್ಬ ಭಾರತೀಯರು ಗೌರವಿಸಬೇಕು. ಆದರೆ ಇದರ ವಿರುದ್ಧ ನಡೆಯುವ ಸಭೆಗಳು ದೇಶ ವಿರೋಧಿಗಳಿಗೆ ಉತ್ತಮ ವೇದಿಕೆಯಾಗಿವೆ. ಪಾಕಿಸ್ತಾನದ ಬಗ್ಗೆ ಕಾಳಜಿ ಇದ್ದರೆ ಪಾಕಿಸ್ತಾನಕ್ಕೆ ಹೋಗಲಿ. ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡವರಿಗೆ ಬೆಂಬಲ ನೀಡುವವರನ್ನೆಲ್ಲ ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.

ದೇಶ ವಿರೋಧಿ ಘೋಷಣೆ ಕೂಗಿದವರ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ದೇಶ ವಿರೋಧಿ ಘೋಷಣೆ ಹಾಕಿದ ದೇಶದ್ರೋಹಿ ಅಮೂಲ್ಯ ಹಾಗೂ ಆರ್ದ್ರಾ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಹಾಗೂ ಪ್ರವಾದಿ ಪೈಗಂಬರರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಮಧುಗಿರಿ ಮೋದಿಯನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಶಿವಮೊಗ್ಗದ ಸಾಗರದ ಕರ್ನಾಟಕ ಅಂಜುಮನ್ ತಂಜಿಮ್ ಸೋಶಿಯಲ್ ಮೊಮೆಂಟ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಸಾಗರದ ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಮಿತಿ ಸದಸ್ಯರು, ಸಾಗರದ ಡಿವೈಎಸ್ಪಿ ಮುಖಾಂತರ ಬೆಂಗಳೂರು ಪೊಲೀಸ್ ಕಮಿಷನರ್ ಅವರಿಗೆ ಮನವಿ ಸಲ್ಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.