ಶಿವಮೊಗ್ಗ: ನಾಯಿ ಮರಿಯನ್ನು ನುಂಗಿದ್ದ ನಾಗರಹಾವನ್ನು ರಕ್ಷಿಸಿರುವ ಘಟನೆ ಇಲ್ಲಿನ ವಿದ್ಯಾನಗರದಲ್ಲಿ ನಡೆದಿದೆ. ಮನೆಯ ಗೇಟಿನ ಬಳಿ ಮಲಗಿದ್ದ ನಾಗರ ಹಾವನ್ನು ಕಂಡ ಮನೆಯ ಮಾಲೀಕರು ಸ್ನೇಕ್ ಕಿರಣ್ ಅವರಿಗೆ ಫೋನಾಯಿಸಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಕಿರಣ್ ಅವರು ಹಾವನ್ನು ಹಿಡಿದು ರಕ್ಷಿಸಿದ್ದಾರೆ.
ವಿದ್ಯಾನಗರದ ನಿವಾಸಿಯಾದ ಚಂದ್ರಪ್ಪ ಎಂಬುವರ ಮನೆಗೆ ನಾಗರಹಾವು ಬಂದಿತ್ತು. ಸುಮಾರು 4 ಅಡಿ ಉದ್ದವಿದ್ದ ಹಾವು ಮನೆಯ ಗೇಟಿನ ಬಳಿ ಮಲಗಿರುವುದನ್ನು ಕಂಡ ಮನೆಯ ಮಾಲೀಕರು ಸ್ನೇಕ್ ಕಿರಣ್‌ಗೆ ಫೋನ್ ಮಾಡಿದ್ದಾರೆ. ಹಾವು, ನಾಯಿಮರಿಯನ್ನು ನುಂಗಿದ್ದು, ನಾಯಿ ಮರಿಯನ್ನು ಹೊರಗೆ ತೆಗೆಯಲಾಯಿತು. ಬಳಿಕ ಸ್ನೇಕ್ ಕಿರಣ್ ನಾಗರ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.
ಓದಿ : ನನ್ಗೆ ಸ್ವಾಮೀಜಿಗಳ ಮೇಲೆ ಗೌರವವಿದೆ, ನೀವ್ ಯಾವ್ದ್ ಯಾವ್ದಕ್ಕೋ ಲಿಂಕ್ ಮಾಡ್ಬೇಡಿ.. ಮಾಧ್ಯಮದವರ ಮೇಲೆ ಸಿದ್ದು ಗರಂ