ಶಿವಮೊಗ್ಗ: ಆಕ್ಸಿಜನ್ ಸೋರಿಕೆ ಉಂಟಾಗಿ ಕೆಲ ಕಾಲ ಆತಂಕ ಸೃಷ್ಟಿಯಾದ ಘಟನೆ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಜಿಲ್ಲಾಸ್ಪತ್ರೆ ಕಟ್ಟಡದ ಮೊದಲ ಮಹಡಿಯಲ್ಲಿ ಆಕ್ಸಿಜನ್ ಸೋರಿಕೆಯಾಗಿದೆ. ಇದರಿಂದ ದಟ್ಟ ಹೊಗೆ ಆವರಿಸಿತ್ತು. ಆಸ್ಪತ್ರೆ ಮುಂಭಾಗವೇ ಅಗ್ನಿಶಾಮಕದಳದ ಕಚೇರಿ ಇರುವುದರಿಂದ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಆಕ್ಸಿಜನ್ ಸೋರಿಕೆ ನಿಲ್ಲಿಸಿದ್ದಾರೆ.
ಆಸ್ಪತ್ರೆಯ ನೆಲಮಾಳಿಗೆಯಲ್ಲಿರುವ ಎಂಆರ್ಐ ಸ್ಕ್ಯಾನಿಂಗ್ ರೂಮ್ ಗೆ ಆಕ್ಸಿಜನ್ ಸಿಲಿಂಡರ್ ಸಮೇತ ರೋಗಿಯನ್ನು ಕರೆದೊಯ್ಯಲಾಗಿತ್ತು. ಈ ವೇಳೆ ಸಿಲಿಂಡರ್ ಬಿದ್ದು ಆಮ್ಲಜನಕ ಸೋರಿಕೆಯಾಗಿದೆ. ಸ್ಕ್ಯಾನಿಂಗ್ ರೂಮ್ನ ಎಸಿ ಪೈಪ್ನಿಂದ ಆಮ್ಲಜನಕ ದಟ್ಟವಾಗಿ ಹೊರಗೆ ಒಂದಿದೆ. ಇದರಿಂದ ಕೆಲ ಕಾಲ ಆಸ್ಪತ್ರೆಯ ಆವರಣದಲ್ಲಿ ಆತಂಕ ಸೃಷ್ಟಿಯಾಗಿತ್ತು.