ETV Bharat / city

ಪೆಗಾಸಸ್ ವಿಚಾರದಲ್ಲಿ ವಿರೋಧ ಪಕ್ಷಗಳು ಕಾಲಹರಣ ಮಾಡುತ್ತಿವೆ : ಸಂಸದ ರಾಘವೇಂದ್ರ ಕಿಡಿ - ಲೋಕಸಭೆಯ ಅಧಿವೇಶನ

ಪಾರ್ಲಿಮೆಂಟ್ ಇರುವುದೇ ಚರ್ಚೆ ಮಾಡಲು. ಆದರೆ, ಚರ್ಚೆ ಮಾಡದೆ ಕಾಲಹರಣ ಮಾಡುತ್ತಿದ್ದಾರೆ. ಪ್ರಶ್ನಾವಳಿ ಅವಧಿ ಬಿಟ್ಟರೆ ಏನೂ ನಡೆಯುತ್ತಿಲ್ಲ. ವಿರೋಧ ಪಕ್ಷಗಳ ನಡವಳಿಕೆ ವಿರುದ್ಧ ಸಾಕಷ್ಟು ಜನವಿರೋಧಿ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿ ನಡವಳಿಕೆಯನ್ನು ಬಿಜೆಪಿ ವಿರೋಧಿಸುತ್ತದೆ..‌

ಸಂಸದ ರಾಘವೇಂದ್ರ
ಸಂಸದ ರಾಘವೇಂದ್ರ
author img

By

Published : Aug 7, 2021, 4:03 PM IST

ಶಿವಮೊಗ್ಗ : ಲೋಕಸಭೆಯಲ್ಲಿ ಮಸೂದೆಗಳ ಬಗ್ಗೆ ಚರ್ಚೆ ನಡೆಸದೆ ವಿರೋಧ ಪಕ್ಷಗಳು ವಿನಾಕಾರಣ ಕಾಲಹರಣ ಮಾಡುತ್ತಿವೆ ಎಂದು ಸಂಸದ ಬಿ ವೈ ರಾಘವೇಂದ್ರ ಕಿಡಿ ಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಲೋಕಸಭೆಯ ಅಧಿವೇಶನವನ್ನು ನಡೆಸಲು ಬಿಡದೆ ವಿರೋಧ ಪಕ್ಷಗಳು ಚರ್ಚೆ ನಡೆಸದೆ ಪಲಾಯನ ನಡೆಸುತ್ತಿವೆ.

ಇದನ್ನು ಜನ ಗಮನಿಸುತ್ತಿದ್ದಾರೆ. ವಿರೋಧ ಪಕ್ಷಗಳು ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ವರ್ತಿಸುತ್ತಿವೆ. ಮೋದಿ ಅಭಿವೃದ್ದಿ ಕಾರ್ಯವನ್ನು ಸಹಿಸದೆ ವಿರೋಧ ಪಕ್ಷಗಳು ಪೆಗಾಸಸ್ ಭೂತವನ್ನು ಬಿಡುವ ಯತ್ನವನ್ನು ಮಾಡುತ್ತಿದ್ದಾರೆ ಎಂದರು.

ಪಾರ್ಲಿಮೆಂಟ್ ಇರುವುದೇ ಚರ್ಚೆ ಮಾಡಲು. ಆದರೆ, ಚರ್ಚೆ ಮಾಡದೆ ಕಾಲಹರಣ ಮಾಡುತ್ತಿದ್ದಾರೆ. ಪ್ರಶ್ನಾವಳಿ ಅವಧಿ ಬಿಟ್ಟರೆ ಏನೂ ನಡೆಯುತ್ತಿಲ್ಲ. ವಿರೋಧ ಪಕ್ಷಗಳ ನಡವಳಿಕೆ ವಿರುದ್ಧ ಸಾಕಷ್ಟು ಜನವಿರೋಧಿ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿ ನಡವಳಿಕೆಯನ್ನು ಬಿಜೆಪಿ ವಿರೋಧಿಸುತ್ತದೆ ಎಂದರು.‌

ವಿರೋಧ ಪಕ್ಷಗಳು ಸಂಸತ್‌ನಲ್ಲಿ ನಡೆದುಕೊಳ್ತಿರುವ ರೀತಿಗೆ ಸಂಸದ ರಾಘವೇಂದ್ರ ಕಿಡಿ..

ನಮ್ಮ ಪಕ್ಷಕ್ಕೆ ಬಹುಮತ ಇದ್ದರೂ ಸಹ ಮಸೂದೆಗಳು ಸದನದಲ್ಲಿ ಚರ್ಚೆಗೆ ಬರಲಿ ಎಂಬ ಉದ್ದೇಶದಿಂದ ಪ್ರಧಾನಿಗಳು ಅವಕಾಶ ಮಾಡಿಕೊಟ್ಟರು. ಆದರೆ, ಅದನ್ನು ವಿರೋಧ ಪಕ್ಷಗಳು ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದರು.

ಮೇಕೆದಾಟು ಯೋಜನೆ ನದಿ ನೀರು ಹಂಚಿಕೆಯಂತೆ ನಡೆಯಲಿ : ಮೇಕೆದಾಟು ಯೋಜನೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅದು ಸುಪ್ರೀಂಕೋರ್ಟ್ ತೀರ್ಪಿನಂತೆ ನಡೆಯಲಿದೆ. ಕಾವೇರಿ ನದಿ ನೀರು ಹಂಚಿಕೆಯನ್ನು ಸರಿಯಾಗಿ ಮಾಡಬೇಕೆಂದು ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.