ETV Bharat / city

ಶಿವಮೊಗ್ಗ: ಕರ್ತವ್ಯದಲ್ಲಿದ್ದ ಎಎಸ್​ಐ ಹೃದಯಾಘಾತದಿಂದ ಸಾವು - ಶಿವಮೊಗ್ಗ ಪೊಲೀಸ್​ ಇಲಾಖೆ

ಕರ್ತವ್ಯದಲ್ಲಿದ್ದ ಎಎಸ್​ಐ ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

On duty ASI died due heart attack in Shivamogga, Shivamogga police department, Shivamogga news, ಶಿವಮೊಗ್ಗದಲ್ಲಿ ಕರ್ತವ್ಯದಲ್ಲಿದ್ದ ಎಎಸ್​ಐ ಹೃದಯಾಘಾತದಿಂದ ಸಾವು, ಶಿವಮೊಗ್ಗ ಪೊಲೀಸ್​ ಇಲಾಖೆ, ಶಿವಮೊಗ್ಗ ಸುದ್ದಿ,
ಶಿವಮೊಗ್ಗ: ಕರ್ತವ್ಯದಲ್ಲಿದ್ದ ಎಎಸ್​ಐ ಹೃದಯಾಘಾತದಿಂದ ಸಾವು
author img

By

Published : Jan 28, 2022, 9:19 AM IST

ಶಿವಮೊಗ್ಗ: ದೊಡ್ಡಪೇಟೆ ಪೊಲೀಸ್ ಠಾಣೆಯ ಎಎಸ್​ಐ ಸುರೇಶ್ (49) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ದೊಡ್ಡಪೇಟೆ ಎಎಸ್​ಐ ಸುರೇಶ್ ನಿನ್ನೆ ಬೆಳಗಿನ ಜಾವ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಅವರು ಕಳೆದ ಎರಡು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಿಗ್ಗಾದ ನಿವಾಸಿಯಾಗಿದ್ದ ಸುರೇಶ್​ 1992ರಲ್ಲಿ ಪೊಲೀಸ್​ ಕಾನ್ಸ್​ಟೇಬಲ್​ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಮೊದಲಿಗೆ ಭದ್ರಾವತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಸುರೇಶ್​ ಶಿರಾಳಕೊಪ್ಪ, ಆಗುಂಬೆ, ತೀರ್ಥಹಳ್ಳಿಯ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಓದಿ: ನೀವೆಲ್ಲಾದರೂ ತಲೆಕೆಳಗಾದ ಮನೆ ಕಂಡಿದ್ದೀರಾ? ಇಲ್ಲಿದೆ ನೋಡಿ..

ಸೇವಾ ಹಿರಿತನದ ಮೇಲೆ ಬಡ್ತಿ ಪಡೆದ ಸುರೇಶ್​ 2019 ರಲ್ಲಿ ದೊಡ್ಡಪೇಟೆ ಠಾಣೆಗೆ ವರ್ಗಾವಣೆಗೊಂಡರು. ಸುರೇಶ್​ಗೆ ಇಬ್ಬರು ಗಂಡು ಮಕ್ಕಳಿದ್ದು, 2018ರಲ್ಲಿ ಸುರೇಶ್​ ತಮ್ಮ ಪತ್ನಿಯನ್ನು ಕಳೆದುಕೊಂಡರು. ಸುರೇಶ್ ರವರ ನಿಧನಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.