ETV Bharat / city

ಸಚಿವ ಸ್ಥಾನದ ಲಾಬಿಗಾಗಿ ನಾನು ದೆಹಲಿಗೆ ಹೋಗಲ್ಲ: ಹರತಾಳು ಹಾಲಪ್ಪ

ನಾನು ಆಶಾವಾದಿ, ಹಾಗಂತ ಗುಂಪುಗಾರಿಕೆ ಮಾಡುವುದಿಲ್ಲ. ಮನುಷ್ಯ ಸಹಜ ಹಾಗೂ ರಾಜಕಾರಣ ಸಹಜವಾದ ಆಸೆ ಇರುತ್ತದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದ್ದಾರೆ.

MLA Harathalu Halappa
ಶಾಸಕ ಹರತಾಳು ಹಾಲಪ್ಪ
author img

By

Published : Jul 31, 2021, 4:59 PM IST

ಶಿವಮೊಗ್ಗ: ನನಗೆ ಸಚಿವ ಸ್ಥಾನ ನೀಡಿ ಎಂದು ದೆಹಲಿಗೆ ಹೋಗಲ್ಲ ಎಂದು ಸಾಗರ ಶಾಸಕ ಹರತಾಳು ಹಾಲಪ್ಪ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ನೀಡಿದರೆ ಕೆಲಸ ಮಾಡುತ್ತೇನೆ. ಇಲ್ಲವೇ ಈಶ್ವರಪ್ಪ ಹೇಳಿದ ಹಾಗೆ ಶಾಸಕನಾಗಿ ಕೆಲಸ ಮಾಡುತ್ತೇನೆ ಎಂದರು.

ಶಾಸಕ ಹರತಾಳು ಹಾಲಪ್ಪ ಪ್ರತಿಕ್ರಿಯೆ

ಬೇರೆ ಬೇರೆ ಕಾರಣಕ್ಕೆ ಹಿರಿಯರನ್ನು ಕೈ ಬಿಟ್ಟರೆ, ನಮ್ಮಂತಹವರಿಗೆ ಸ್ಥಾನ ಸಿಗಬಹುದು. ನನಗೂ ಹಾಗೂ ಆರಗ ಜ್ಞಾನೇಂದ್ರ ಅಂತಹವರಿಗೆ ಅವಕಾಶ ಸಿಗಬಹುದು. ನಮ್ಮ ಪಕ್ಷದ ಹೈಕಮಾಂಡ್ ಹಾಗೂ ಯಡಿಯೂರಪ್ಪ ಇಬ್ಬರು ಸ್ಟ್ರಾಂಗ್ ಇದ್ದಾರೆ. ನಮಗೆ ಪರಿವಾರವಿದೆ. ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ನಮ್ಮ ಪಕ್ಷದಲ್ಲಿ ಒತ್ತಡವೆಲ್ಲ ನಡೆಯುವುದಿಲ್ಲ.‌ ಕೇಂದ್ರ ಸಚಿವ ಸಂಪುಟವನ್ನೇ ನೋಡಿದ್ದೇವೆ. ನಮ್ಮ ಪಕ್ಷದ ಹೈಕಮಾಂಡ್ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತೆ. ಯಾರಿಗೆ ಡಿಮ್ಯಾಂಡ್​​ ಇಡೋದು. ನಮ್ಮ ಎಲ್ಲಾ ವರದಿಯನ್ನು ವರಿಷ್ಠರು ನೋಡುತ್ತಾರೆ. ನಾನು ಆಶಾವಾದಿ. ಹಾಗಂತ ಗುಂಪುಗಾರಿಕೆ ಮಾಡುವುದಿಲ್ಲ. ಮನುಷ್ಯ ಸಹಜ ಹಾಗೂ ರಾಜಕಾರಣ ಸಹಜವಾದ ಆಸೆ ಇರುತ್ತದೆ ಎಂದರು.

ಇದನ್ನೂ ಓದಿ: ನಾನು ಈ ರಾಜ್ಯದಲ್ಲಿ ಸ್ವತಂತ್ರ ಸಿಎಂ ಆಗಿರಲಿಲ್ಲ, ಒಬ್ಬ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದೆ: ಹೆಚ್​​​ಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.