ಶಿವಮೊಗ್ಗ: ಚಂಡಮಾರುತದ ಎಫೆಕ್ಟ್ ನಡುವೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರರವರು ತಮ್ಮ ಕ್ಷೇತ್ರದ ಜನರಿಗೆ ಪುಡ್ ಕಿಟ್ ವಿತರಣೆ ಕಾರ್ಯ ಮಾಡುತ್ತಿದ್ದಾರೆ.
ತೀರ್ಥಹಳ್ಳಿ ಅಪ್ಪಟ ಮಲೆನಾಡು. ಇಲ್ಲಿ ಮನೆ ಕಿಲೋ ಮೀಟರಿಗೊಂದರಂತೆ ಇರುತ್ತವೆ. ಅಲ್ಲದೆ ಲಾಕ್ಡೌನ್ನಿಂದ ಜನ ಸಂಕಷ್ಟಕ್ಕೀಡಾಗಿದ್ದು, ಅವರ ನೆರವಿಗೆ ಧಾವಿಸುವುದು ಅತಿ ಅವಶ್ಯಕವಾಗಿರುತ್ತದೆ. ಈ ಹಿನ್ನೆಲೆ ಶಾಸಕ ಆರಗ ಜ್ಞಾನೇಂದ್ರರವರು ತಮ್ಮ ಬೆಂಬಲಿಗರೊಂದಿಗೆ ಪ್ರತಿ ಮನೆ ಮನೆ ತಲುಪಿ ಕಿಟ್ ವಿತರಿಸಿದ್ದಾರೆ.