ETV Bharat / city

ಮಲೆನಾಡ ಜಾನುವಾರುಗಳಲ್ಲಿ ಚರ್ಮಗಂಟು ರೋಗ: ರೈತರಲ್ಲಿ ಆತಂಕ - Dermatitis virus Pax viridae

ಪ್ರಾರಂಭದಲ್ಲಿ ಆಫ್ರಿಕಾ, ರಷ್ಯಾ, ಯುರೋಪ್ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದ್ದ ಈ ಕಾಯಿಲೆ, ದೇಶದ ಕೇರಳ ಹಾಗೂ ಒಡಿಶಾ ರಾಜ್ಯದಲ್ಲಿ ಕಾಣಿಸಿತ್ತು. ಈಗ ರಾಜ್ಯದ ಜಾನುವಾರುಗಳಿಗೂ ವಕ್ಕರಿಸಿದೆ..

melanada-cattle-dermatitis-virus-pax-viridae-has-appeared
ಮಲೆನಾಡ ಜಾನುವಾರುಗಳಲ್ಲಿ ಕಾಣಿಸಿಕೊಂಡ ಚರ್ಮಗಂಟು ರೋಗ, ರೈತರಲ್ಲಿ ಆತಂಕ..
author img

By

Published : Oct 23, 2020, 3:44 PM IST

Updated : Oct 23, 2020, 4:04 PM IST

ಶಿವಮೊಗ್ಗ: ಕೊರೊನಾ ವೈರಸ್​​ನಿಂದಾಗಿ ಈಗಾಗಲೇ ಕಂಗಾಲಾಗಿರುವ ಮಲೆನಾಡ ರೈತರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಲೆನಾಡ ಜಾನುವಾರುಗಳಲ್ಲಿ ಚರ್ಮಗಂಟು ರೋಗ (ಎಲ್ಎಸ್​​ಡಿ) ಕಾಣಿಸಿದೆ.

ಮಲೆನಾಡ ಜಾನುವಾರುಗಳಲ್ಲಿ ಚರ್ಮಗಂಟು ರೋಗ, ರೈತರಲ್ಲಿ ಆತಂಕ..

ಕೊರೊನಾ ಸೋಂಕಿನಂತೆ ನೇರ ಸಂಪರ್ಕದಿಂದಲೇ ಹರಡುತ್ತೆ ಈ ರೋಗ. ಪಾಕ್ಸ್ ವಿರಿಡೆ ಎಂಬ ವೈರಸ್‌ನಿಂದ ಹರಡುತ್ತಿದೆ ಈ ಚರ್ಮಗಂಟು (ಎಲ್ಎಸ್​​ಡಿ) ಕಾಯಿಲೆ. ಸದ್ಯ ಮಲೆನಾಡಿನ 50ಕ್ಕೂ ಹೆಚ್ಚು ಹಳ್ಳಿಗಳ ಜಾನುವಾರುಗಳಲ್ಲಿ ಈ ಚರ್ಮಗಂಟು ರೋಗ ಪತ್ತೆಯಾಗಿ ರೈತರಲ್ಲಿ ಆತಂಕ ಮೂಡಿಸಿದೆ.

ಪ್ರಾರಂಭದಲ್ಲಿ ಆಫ್ರಿಕಾ, ರಷ್ಯಾ, ಯುರೋಪ್ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದ್ದ ಈ ಕಾಯಿಲೆ, ದೇಶದ ಕೇರಳ ಹಾಗೂ ಒಡಿಶಾ ರಾಜ್ಯದಲ್ಲಿ ಕಾಣಿಸಿತ್ತು. ನಂತರ ರಾಜ್ಯದ ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಯಲ್ಲಿ ಕಾಣಿಸಿಕೊಂಡು ಸದ್ಯ ಮಲೆನಾಡಿನ ಜಾನುವಾರುಗಳಿಗೂ ವಕ್ಕರಿಸಿದೆ.

ರೋಗ ಲಕ್ಷಣ ಮತ್ತು ಜಾಗೃತಿ:

ಚರ್ಮಗಂಟು ರೋಗ ನಿವಾರಣೆಗೆ ಜಾನುವಾರುಗಳಿಗೆ ಐಸೋಲೇಷನ್, ರೋಗಗ್ರಸ್ತ ಜಾನುವಾರುಗಳನ್ನು ಗುಂಪಿನಿಂದ ಪ್ರತ್ಯೇಕವಾಗಿರಿಸುವುದು, ಜಾನುವಾರುಗಳ ನೇರ ಸಂಪರ್ಕ ಹಾಗೂ ಮೇವು-ನೀರಿನಿಂದಲೂ ಗುಂಪಿನ ಶೇ.‌20ರಷ್ಟು ಜಾನುವಾರುಗಳಿಗೆ ಸೋಂಕು ಹರಡುತ್ತೆ ಎಂದು ಪಶುಪಾಲನಾ ಇಲಾಖೆ ಎಚ್ಚರಿಸಿದೆ.

ರೋಗಗ್ರಸ್ತ ಜಾನುವಾರುಗಳಲ್ಲಿ ಶೇ. 1 ರಿಂದ 5 ರಷ್ಟು ಜಾನುವಾರುಗಳು ಸಾವನ್ನಪ್ಪುತ್ತವೆ. ರೋಗ ಪತ್ತೆಯಾದ ಜಾಗದಲ್ಲಿ ಜಾತ್ರೆ, ಪಶು ಸಾಗಾಣಿಕೆ, ಪಶುಮೇಳ ನಿಷೇಧಿಸಲು ಇಲಾಖೆ ಸೂಚನೆ ನೀಡಿದೆ.

Last Updated : Oct 23, 2020, 4:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.