ETV Bharat / city

ನಕಲಿ ದಾಖಲೆ ಸೃಷ್ಟಿಸಿ ಮನೆ ಭೋಗ್ಯಕ್ಕೆ ನೀಡಿದ ಭೂಪ: ವಿದ್ಯುತ್ ಬಿಲ್​​ನಿಂದ ಸತ್ಯ ಬಯಲು

author img

By

Published : Apr 2, 2022, 2:32 PM IST

ನಕಲಿ ದಾಖಲೆ ಸೃಷ್ಟಿಸಿ ಮನೆ ಮಾಲೀಕರಿಗೆ ಗೊತ್ತಿಲ್ಲದೇ ಅವರ ಮನೆಯನ್ನು ಬೇರೆಯವರಿಗೆ ಭೋಗ್ಯಕ್ಕೆ ಹಾಕಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ವಿದ್ಯುತ್ ಬಿಲ್​​ನಿಂದ ಈ ಸತ್ಯ ಬಯಲಿಗೆ ಬಂದಿದೆ.

Tunga  nagar Police Station
ತುಂಗಾ ನಗರ ಪೊಲೀಸ್ ಠಾಣೆ

ಶಿವಮೊಗ್ಗ: ನಕಲಿ ದಾಖಲೆ ಸೃಷ್ಟಿಸಿ ಮನೆ ಮಾಲೀಕರಿಗೆ ಗೊತ್ತಿಲ್ಲದೇ ಅವರ ಮನೆಯನ್ನು ಬೇರೆಯವರಿಗೆ ಭೋಗ್ಯಕ್ಕೆ ಹಾಕಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಗೋಪಾಳದ ಶ್ರೀರಾಮ ನಗರದಲ್ಲಿ ಜಯಮ್ಮ ಎಂಬುವರು 2017ರಲ್ಲಿ ಸುರೇಶ್ ಎಂಬುವರಿಂದ ಸರ್ವೆ ನಂಬರ್ 8/1 ರಲ್ಲಿ 25× 50 ಅಡಿ ಎರಡು ಪೋಷನ್ ಹಂಚಿನ ಮನೆ ಖರೀದಿ ಮಾಡಿದ್ದರು.

ಬಳಿಕ ತಮ್ಮ ಹೆಸರಿಗೆ ಮನೆಯನ್ನು ಹಾಗೂ ವಿದ್ಯುತ್ ಮೀಟರ್​​ ಸಹ ಬದಲಾಯಿಸಿಕೊಂಡಿದ್ದರು. ನಂತರ ಜಯಮ್ಮ ಪತಿಯ ಜತೆ ಬೆಂಗಳೂರಿಗೆ ಹೋಗಿ ನೆಲೆಸಿದ್ದರು. ಇದನ್ನೇ ಬಳಸಿಕೊಂಡ ಸಂತೋಷ್ ಎಂಬಾತ 2022ರ ಜನವರಿಯಲ್ಲಿ ಜಯಮ್ಮ ಅವರ ನಕಲಿ ಸಹಿ ಮಾಡಿದ ಛಾಪಾ ಕಾಗದ ತಯಾರು ಮಾಡಿ, ತನ್ನ ಹೆಸರಿಗೆ ವಿದ್ಯುತ್ ಮೀಟರ್​​ನ್ನು ಬದಲಾಯಿಸಿಕೊಂಡಿದ್ದಾನೆ.

ಅಲ್ಲದೇ ಸಂತೋಷ್ ಮನೆಯನ್ನು ಬೇರೆಯವರಿಗೆ ಭೋಗ್ಯಕ್ಕೆ ಹಾಕಿದ್ದಾನೆ. ವಿದ್ಯುತ್ ಬಿಲ್ ಸಂತೋಷ್​​ ಹೆಸರಿಗೆ ಬಂದಿದ್ದನ್ನು ಗಮನಿಸಿದ, ಜಯಮ್ಮ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.