ETV Bharat / city

ದೇವಾಲಯ ಒಡೆದು ಮಸೀದಿ ಕಟ್ಟಿರುವುದನ್ನು ಪುನಃ ದೇವಾಲಯ ಮಾಡುತ್ತಿದ್ದೇವೆ: ಕೆ.ಎಸ್‌.ಈಶ್ವರಪ್ಪ

author img

By

Published : May 16, 2022, 9:19 AM IST

Updated : May 16, 2022, 12:14 PM IST

ಮಸೀದಿ, ಪ್ರಾರ್ಥನಾ ಮಂದಿರಗಳು ಅವರಾಗಿಯೇ ಎಲ್ಲಿ ಕಟ್ಟಿಕೊಂಡಿದ್ದಾರೋ, ಅವುಗಳನ್ನು ನಾವು ಮುಟ್ಟಲು ಕೂಡ ಹೋಗಲ್ಲ. ಆದರೆ, ಎಲ್ಲಿ ದೇವಾಲಯಗಳನ್ನು ಒಡೆದು ಹಾಕಿ, ಮಸೀದಿ ನಿರ್ಮಾಣ ಮಾಡಿದ್ದಾರೋ, ಅವುಗಳನ್ನು ಮಾತ್ರ ಪುನಃ ದೇವಾಲಯ ಮಾಡುತ್ತಿದ್ದೇವೆ ಎಂದು ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಹೇಳಿದರು.

Former Minister K.S.Ishwarappa
ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ

ಶಿವಮೊಗ್ಗ: ಸದ್ಯದಲ್ಲೇ ಇಡೀ ದೇಶವೇ ಕೇಸರಿಮಯವಾಗಲಿದೆ. ಕೇಸರಿಮಯವೆಂದರೆ, ಕೇವಲ ಚುನಾವಣೆ ಗೆಲ್ಲುವುದಲ್ಲ. ಆಯೋಧ್ಯೆಯಲ್ಲಿ ಶ್ರೀರಾಮನ ಮಂದಿರದ ಕಾರ್ಯ ನಡೆಯುತ್ತಿದೆ. ಅದೇ ರೀತಿ ಕಾಶಿಯಲ್ಲಿ ಕೂಡ ಆಗುತ್ತದೆ. ಕೋರ್ಟ್​ ಈಗಾಗಲೇ ವಾರಣಾಸಿಯ ಜ್ಞಾನವಾಪಿ ಮಸೀದಿ ಕುರಿತು ಸರ್ವೇ ನಡೆಸಿ ವರದಿ ನೀಡುವಂತೆ ಕೋರ್ಟ್​ ಆದೇಶ ನೀಡಿದೆ. ಕಾಶಿಯೂ ಅಯೋಧ್ಯೆಯಂತಾಗುವ ದಿನವೂ ದೂರ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶುಭಶ್ರೀ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಪ್ರಕೋಷ್ಟಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕೋರ್ಟ್ ಆದೇಶ ಮಾಡಿದ್ದ ವೇಳೆ ನಾನು ಕಾಶಿ ದೇವಾಲಯದಲ್ಲಿಯೇ ಇದ್ದೆ. ಯಾರಾದರೂ ಸರ್ವೇ ಕಾರ್ಯಕ್ಕೆ ಅಡ್ಡಿ ಮಾಡಿದರೆ ಅವರನ್ನು ಬಂಧಿಸುವಂತೆ ಕೋರ್ಟ್ ಆದೇಶ ಮಾಡಿದೆ. ಸರ್ವೇ ಕಾರ್ಯ ಈಗಾಗಲೇ ಪ್ರಾರಂಭವಾಗಿದ್ದು, ನಾಲ್ಕು ದಿನದಲ್ಲಿ ವರದಿ ಲಭ್ಯವಾಗಲಿದೆ ಎಂದರು.

ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಮಾತನಾಡಿದರು.

ಇದಕ್ಕೆ ಯಾವ ಮುಸಲ್ಮಾನರೂ ಅಡ್ಡಿ ಮಾಡಿಲ್ಲ. ಹಿಂದೂಸ್ಥಾನದಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು, ಬಾಲ ಬಿಚ್ಚುವ ಕೆಲಸ ಮಾಡುತ್ತಿದ್ದಾರೆ. ಕಾಶಿಯ ಮಸೀದಿ ಪಕ್ಕದಲ್ಲಿಯೇ ನಂದಿ ಇದೆ. ನಂದಿ ಎದುರು ಭಾಗದಲ್ಲಿ ಈಶ್ವರ ಲಿಂಗ ಇರಲೇಬೇಕು. ಆದರೆ, ಅಲ್ಲಿ ಮಸೀದಿ ನಿರ್ಮಿಸಲಾಗಿದೆ. ಕಾಶಿಯ ಜ್ಞಾನವಾಪಿ ಸ್ಥಳದಲ್ಲಿ ಲಿಂಗ ಕಾಪಾಡಲು, ನಾಗರಹಾವು ಇದೆ. ಅಸಾದುದ್ದೀನ್ ಓವೈಸಿ, ಔರಂಗಜೇಬನ ಗೋರಿಗೆ ಹೋಗಿ ಚಾದರ್ ಸಲ್ಲಿಸಿ, ಪ್ರಾರ್ಥಿಸುತ್ತಾರೆ. ಒಬ್ಬ ದೇಶ ದ್ರೋಹಿಯ ಗೋರಿಗೆ ಹೋಗಿ ಪ್ರಾರ್ಥಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮಸೀದಿ, ಪ್ರಾರ್ಥನಾ ಮಂದಿರಗಳು ಅವರಾಗಿಯೇ ಎಲ್ಲಿ ಕಟ್ಟಿಕೊಂಡಿದ್ದಾರೋ, ಅವುಗಳನ್ನು ನಾವು ಮುಟ್ಟಲು ಕೂಡ ಹೋಗಲ್ಲ. ಆದರೆ, ಎಲ್ಲಿ ದೇವಾಲಯಗಳನ್ನು ಒಡೆದು ಹಾಕಿ, ಮಸೀದಿ ನಿರ್ಮಾಣ ಮಾಡಿದ್ದಾರೋ, ಅವುಗಳನ್ನು ಮಾತ್ರ ಪುನಃ ದೇವಾಲಯ ಮಾಡುತ್ತಿದ್ದೇವೆ. ಶ್ರೀರಂಗಪಟ್ಟಣದಲ್ಲಿ ಮಸೀದಿ ಕೆಳಗೆ ಆಂಜನೇಯನ ಮೂರ್ತಿ ದೊರೆತಿದೆ. ಇದು ಎಲ್ಲಿದೆ ಎಂದು ಪ್ರಶ್ನಿಸಿದರೆ, ಬೇರೆಡೆಗೆ ಸ್ಥಳಾಂತರಿಸಿದ್ದೇವೆ ಎಂದು ಹೇಳುತ್ತಾರೆ. ಇವರ್ಯಾರೀ ಇದೆಲ್ಲಾ ಮಾಡೋಕೆ ಎಂದು ಹೇಳಿದರು.

ಇದನ್ನೂ ಓದಿ: ಜ್ಞಾನವಾಪಿ ಮಸೀದಿ: ಬಿಗಿ ಭದ್ರತೆಯಲ್ಲಿ 2ನೇ ದಿನದ ವಿಡಿಯೋಗ್ರಾಫಿ ಸಮೀಕ್ಷೆ

Last Updated : May 16, 2022, 12:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.