ಶಿವಮೊಗ್ಗ: ಕಾರ್ತಿಕ ಮಾಸದಲ್ಲಿ ಹಲವು ಕೆಡುಕುಗಳು ನಡೆಯುತ್ತವೆ. ಭೂಮಿ ನಡುಗೀತು, ಮೇಘ ಅಬ್ಬರಿಸೀತು, ನೀರು ತಲ್ಲಣಗೊಂಡೀತು ಎಂದು ಕೋಡಿಹಳ್ಳಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಸೊರಬ ತಾಲೂಕು ಜಡೆ ಸಂಸ್ಥಾನ ಮಠದ ಶ್ರೀ ಕುಮಾರ ಕಂಪಿನ ಸಿದ್ದ ವೃಷಭೇಂದ್ರ ಕತೃ ಗದ್ದುಗೆ ಶಿಲಾಮಯ ಕಟ್ಟಡದ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ದೇಶದಲ್ಲಿ ನಡೆಯುತ್ತಿರುವ ಧರ್ಮ ಸಂಘರ್ಷಗಳಿಗೆ ಜ್ಞಾನದ ಕೊರತೆ ಮುಖ್ಯ ಕಾರಣ. ಇದರಿಂದ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತದೆ. ಶುಭಕೃತನಾಮ ಸಂತ್ಸವರ ಈ ವರ್ಷ ಅಶುಭವನ್ನುಂಟು ಮಾಡುತ್ತದೆ ಎಂದರು.
ಮಠದಲ್ಲಿ ಪಂಚಾಗ್ನಿ ಮಾಡುವ ಸಂದರ್ಭದಲ್ಲಿ ಅಗ್ನಿಕುಂಡ ಒಡೆದು ಗಾಯವಾಗಿದೆ. ಪೂರ್ಣ ಪ್ರಮಾಣಲ್ಲಿ ಪೂಜೆ ಸಲ್ಲಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ನಾಡಿನಲ್ಲಿ ಬೆಂಕಿ ಅನಾಹುತ ಸಂಭವಿಸುವ ಲಕ್ಷಣವಿದೆ. ರಾಜಕೀಯ ಪಕ್ಷಗಳು ಇಬ್ಬಾಗವಾಗಲಿದೆ. ಹಿಂಗಾರು ಮಳೆ ಕಡಿಮೆಯಾದರೂ, ಅಕಾಲಿಕ ಮಳೆಯಾಗಿ ರೋಗ ರುಜಿನ ಹೆಚ್ಚಾಗಲಿವೆ ಎಂದರು.
ಇದನ್ನೂ ಓದಿ : ಯಡಿಯೂರಪ್ಪನವರನ್ನು ಬಿಜೆಪಿ ಗುರುತಿಸಿರುವುದು ಸಂತೋಷ: ಸಿದ್ದರಾಮಯ್ಯ