ETV Bharat / city

ಬಜರಂಗದಳ ಕಾರ್ಯಕರ್ತನ ಹತ್ಯೆ ಬಳಿಕ ನಡೆದ ಗಲಭೆ ಸರ್ಕಾರಿ ಪ್ರಾಯೋಜಿತ : ಜಾಯಿಂಟ್ ಆ್ಯಕ್ಷನ್ ಕಮಿಟಿ - ಜಾಯಿಂಟ್ ಆಕ್ಷನ್ ಕಮಿಟಿಯ ಸುದ್ದಿಗೋಷ್ಟಿ

144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕೂಡ ಹರ್ಷ ಶವವನ್ನು ಮನೆಗೆ ತರುವ ಸಂದರ್ಭದಲ್ಲಿ ಹಾಗೂ ಶವ ಸಂಸ್ಕಾರಕ್ಕೆ ತೆಗೆದುಕೊಂಡ ಹೋದ ಸಂದರ್ಭದಲ್ಲಿ ಮೆರವಣಿಗೆ ಮಾಡಲಾಗಿದೆ. ಇದು ಕಾನೂನನ್ನು ಉಲ್ಲಂಘಿಸಿದಂತಾಗಿದೆ ಎಂದು ಆರೋಪಿಸಿದರು. ಹರ್ಷ ಶವಯಾತ್ರೆ ಸಂದರ್ಭದಲ್ಲಿ ಕ್ಲಾರ್ಕ್‌ಪೇಟೆ, ಆಜಾದ್‌ನಗರ ಸೇರಿದಂತೆ ಹಲವೆಡೆ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಮನೆಗಳಿಗೆ ಕಲ್ಲು ತೂರಲಾಗಿದೆ. ಹಣ್ಣಿನ ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಪೊಲೀಸರು ಕಣ್ಣಿದ್ದು ಕುರುಡಾಗಿದ್ದರು..

joint-action-commitee-press-meet-shivamogga
ಜಾಯಿಂಟ್ ಆಕ್ಷನ್ ಕಮಿಟಿ
author img

By

Published : Feb 25, 2022, 5:00 PM IST

ಶಿವಮೊಗ್ಗ : ಬಜರಂಗಳದ ಕಾರ್ಯಕರ್ತ ಹರ್ಷ ಹತ್ಯೆ ಬಳಿಕ ನಡೆದ ಗಲಭೆ, ಕಲ್ಲು ತೂರಾಟ ಸರ್ಕಾರಿ ಪ್ರಾಯೋಜಿತ ಘಟನೆ ಎಂದು ಜಾಯಿಂಟ್ ಆ್ಯಕ್ಷನ್ ಕಮಿಟಿ ಆರೋಪಿಸಿದೆ.

ನಗರದಲ್ಲಿ ಜಾಯಿಂಟ್ ಆಕ್ಷನ್ ಕಮಿಟಿ ಮುಖಂಡ, ವಕೀಲರಾದ ಶಹರಾಜ್ ಮುಜಾಹಿದ್ ಸಿದ್ದಿಕಿ ಅವರು ಮಾತನಾಡಿ, ಹರ್ಷ ಅವರ ಕೊಲೆಯನ್ನ ಘೋರವಾಗಿ ಖಂಡಿಸುತ್ತೇವೆ. ಯಾರೂ ಕೂಡ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ. ಆರೋಪಿಗಳ ವಿರುದ್ಧ ಸೂಕ್ತ ತನಿಖೆಯಾಗಿ, ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸುತ್ತೇವೆ ಎಂದರು.

ಈ ಘಟನೆ ನಡೆಯುವುದಕ್ಕೂ ಮೊದಲು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೇಸರಿ ಧ್ವಜ ಹಾರಿಸಿದ ಸಂದರ್ಭದಲ್ಲಿ ಜಿಲ್ಲೆಯ ಸಚಿವರೊಬ್ಬರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಅಲ್ಲದೆ ಪೊಲೀಸರು ಕೂಡ ಪ್ರಕರಣ ಕುರಿತು ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದರು.

ಹರ್ಷ ಸಾವಿನ ನಂತರ ಜಿಲ್ಲೆಯ ಸಚಿವರು ಮುಸ್ಲಿಂ ಗೂಂಡಾಗಳು ಹರ್ಷನನ್ನು ಕೊಲೆ ಮಾಡಿದ್ದಾರೆ ಎಂದು ಹೇಳುವ ಮೂಲಕ ಇಡೀ ಸಮುದಾಯವನ್ನು ಅವರು ಗುರಿಯಾಗಿಸಿದ್ದಾರೆ.

144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕೂಡ ಹರ್ಷ ಶವವನ್ನು ಮನೆಗೆ ತರುವ ಸಂದರ್ಭದಲ್ಲಿ ಹಾಗೂ ಶವ ಸಂಸ್ಕಾರಕ್ಕೆ ತೆಗೆದುಕೊಂಡ ಹೋದ ಸಂದರ್ಭದಲ್ಲಿ ಮೆರವಣಿಗೆ ಮಾಡಲಾಗಿದೆ.

ಇದು ಕಾನೂನನ್ನು ಉಲ್ಲಂಘಿಸಿದಂತಾಗಿದೆ ಎಂದು ಆರೋಪಿಸಿದರು. ಹರ್ಷ ಶವಯಾತ್ರೆ ಸಂದರ್ಭದಲ್ಲಿ ಕ್ಲಾರ್ಕ್‌ಪೇಟೆ, ಆಜಾದ್‌ನಗರ ಸೇರಿದಂತೆ ಹಲವೆಡೆ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಮನೆಗಳಿಗೆ ಕಲ್ಲು ತೂರಲಾಗಿದೆ. ಹಣ್ಣಿನ ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಪೊಲೀಸರು ಕಣ್ಣಿದ್ದು ಕುರುಡಾಗಿದ್ದರು.

ಇದೆಲ್ಲದಕ್ಕೂ ಸಚಿವರ ಪ್ರಚೋದನಕಾರಿ ಹೇಳಿಕೆಯೇ ಪ್ರಮುಖ ಕಾರಣವಾಗಿದೆ ಎಂದ ಅವರು, ಘಟನೆ ನಡೆದ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳು ಇವೆ. ಮೂರು ದಿನಗಳ ಅವಧಿಯ ಸಿಸಿ ಕ್ಯಾಮೆರಾದ ದೃಶ್ಯಗಳನ್ನು ಪೊಲೀಸರು ವಶಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಜಾಯಿಂಟ್ ಆ್ಯಕ್ಷನ್ ಕಮಿಟಿ ಮುಖಂಡರಾದ ಸಿದ್ದಿಕಿ ಮಾತನಾಡುತ್ತಿರುವುದು..

ಶವಯಾತ್ರೆಯ ಸಂದರ್ಭದಲ್ಲಿ ಜಿಲ್ಲೆಯ ಸಚಿವರು ಹಾಗೂ ಸಂಸದರು ಭಾಗಿಯಾಗಿದ್ದರು. ಆದರೂ ಸಹ ಮೆರವಣಿಗೆಯಲ್ಲಿದ್ದವರು ಮನೆಗಳ ಮೇಲೆ ಕಲ್ಲು ತೂರಿದ್ದಾರೆ. ಅಂಗಡಿಗಳನ್ನು ದೋಚಿದ್ದಾರೆ. ಈ ಹಿನ್ನೆಲೆಯಲ್ಲಿ ಈ ನಾಯಕರುಗಳಿಂದಲೇ ಹಾನಿಯ ಪ್ರಮಾಣವನ್ನು ಭರಿಸಬೇಕು ಎಂದು ಆಗ್ರಹಿಸಿದರು.

ಘಟನೆ ನಂತರ ಅಮಾಯಕರನ್ನು ಬಂಧಿಸಲಾಗುತ್ತಿದ್ದು, ಮಧ್ಯರಾತ್ರಿ ಮನೆಗಳಿಗೆ ನುಗ್ಗಿ ಘಟನೆಯಲ್ಲಿ ಪಾಲ್ಗೊಳ್ಳದವರನ್ನೂ ಕೂಡ ಎಳೆದುಕೊಂಡು ಹೋಗಲಾಗುತ್ತಿದೆ. ಇಲ್ಲಿ ನಿಯಮದ ಉಲ್ಲಂಘನೆಯಾಗುತ್ತಿದೆ ಎಂದು ಹೇಳಿದರು.

ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ-20, ಕೋಟೆ ಠಾಣಾ ವ್ಯಾಪ್ತಿಯಲ್ಲಿ-10 ದೂರು ಸಲ್ಲಿಸಲಾಗಿದೆ. ಕೆಲವರು ಭಯಭೀತರಾಗಿ ದೂರು ಕೊಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಆದ್ದರಿಂದ ಪೊಲೀಸರೇ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಳ್ಳಬೇಕೆಂದು ಒತ್ತಾಯಿಸಿದರು.

ಇಷ್ಟೆಲ್ಲಾ ಘಟನೆಗಳಿಗೆ ಕಾರಣರಾಗಿರುವ ಸಚಿವರಾದ ಕೆ.ಎಸ್.ಈಶ್ವರಪ್ಪನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆ ಕಾರ್ಯವನ್ನು ಅವರು ಮಾಡದಿದ್ದರೆ ರಾಜ್ಯಪಾಲರು ಸಚಿವ ಸ್ಥಾನದಿಂದ ಹಾಗೂ ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು. ಸಚಿವ ಕೆ. ಎಸ್ ಈಶ್ವರಪ್ಪ ಅವರು ಬಳಸಿದ ಮುಸ್ಲಿಂ ಗೂಂಡಾ ಶಬ್ದ ಬಳಕೆ ಅವಹೇಳನಕಾರಿಯಾಗಿದೆ.

ಪದೇಪದೆ ಇದನ್ನು ಹೇಳುತ್ತಿದ್ದಾರೆ. ಸಮುದಾಯದಲ್ಲಿ ಇದು ಆಕ್ರೋಶವನ್ನುಂಟು ಮಾಡಿದೆ. ಇನ್ನು ಮೊನ್ನೆಯ ಗಲಾಟೆಗೆ ಅವರ ಜೊತೆ ಸಂಸದರು ಮತ್ತು ಮುಂಚೂಣಿಯಲ್ಲಿದ್ದ ನಾಯಕರು ಕಾರಣರು. ಆಸ್ತಿ-ಪಾಸ್ತಿ ಹಾನಿಗೂ ಅವರೇ ಕಾರಣರು. ಈ ಹಿನ್ನೆಲೆಯಲ್ಲಿ ಇವರೆಲ್ಲರ ವಿರುದ್ಧ ದೂರುಕೊಟ್ಟರೆ ದೊಡ್ಡಪೇಟೆ ಠಾಣೆಯಲ್ಲಿ ಸ್ವೀಕರಿಸಿಲ್ಲ. ಎಸ್‌ಪಿಗೆ ದೂರು ಕೊಟ್ಟರೂ ಪ್ರತಿಕ್ರಿಯಿಸಿಲ್ಲ.

ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ದೂರು ಕೊಡಲಾಗುವುದು. ಜೊತೆಗೆ ಅವಹೇಳನಕಾರಿ ನಿಂದನೆಯ ಬಗ್ಗೆಯೂ ದೂರು ದಾಖಲಿಸಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಲೀಂ ಪಾಷಾ, ಶಾಹುಲ್ ಅಹಮದ್, ಮಫ್ತಿ ಮುಜೀಬುಲ್ಲಾ ಸಾಬ್, ಜಫ್ರುಲ್ಲಾ ಸತ್ತರ್ ಖಾನ್, ಮಹಮ್ಮದ್ ಆಸೀಪ್, ಫಜ್ಲುರೆಹಮಾನ್ ಮತ್ತಿತರರು ಉಪಸ್ಥಿತರಿದ್ದರು.

ಓದಿ : ಹಿಜಾಬ್ ನಿರ್ಬಂಧ ಪ್ರಶ್ನಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ಪೂರ್ಣ.. ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.