ETV Bharat / city

ಶಿವಮೊಗ್ಗದ ಕಾಸ್ಮೋ ಕ್ಲಬ್​​ನಲ್ಲಿ ಗಮನ ಸೆಳೆದ ಜಲಯೋಗ - ಎಂಟನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ

8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶಿವಮೊಗ್ಗ ಹೊರ ವಲಯದ ಕಾಸ್ಮೋ ಕ್ಲಬ್​​ನಲ್ಲಿ ಜಲಯೋಗ ಪ್ರದರ್ಶಿಸಲಾಯಿತು.

Jalayoga Show in Cosmo Club at Shivamogga
ಶಿವಮೊಗ್ಗದ ಕಾಸ್ಮೋ ಕ್ಲಬ್‌ನಲ್ಲಿ ಜಲಯೋಗ ಪ್ರದರ್ಶನ
author img

By

Published : Jun 21, 2022, 1:53 PM IST

ಶಿವಮೊಗ್ಗ: ಯೋಗಾಸನ ಮನುಷ್ಯನ ದೇಹದ ಆರೋಗ್ಯ ಹೆಚ್ಚಿಸುವುದರ ಜೊತೆಗೆ, ಮನಸ್ಸಿಗೂ ಸಂತಸವನ್ನುಂಟು ಮಾಡುತ್ತದೆ.‌ ಆದರೆ, ಈ ಯೋಗಾಸನವನ್ನು ನೆಲದ ಮೇಲೆ ಕುಳಿತು ಮಾಡುವುದೇ ಕಷ್ಟಕರ. ಹೀಗಿರುವಾಗ ನೀರಿನ ಮೇಲೆ ತೇಲುತ್ತಾ ಯೋಗಾಸನ ಮಾಡಿದ್ದು, ನಗರದಲ್ಲಿ ಎಲ್ಲರ ಗಮನ ಸೆಳೆಯಿತು.

ಕಾಸ್ಮೋ ಕ್ಲಬ್​​ನಲ್ಲಿ ಗಮನ ಸೆಳೆದ ಜಲಯೋಗ

8ನೇ ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಶಿವಮೊಗ್ಗ ಹೊರ ವಲಯದ ಕಾಸ್ಮೋ ಕ್ಲಬ್​​ನಲ್ಲಿ ಜಲಯೋಗ ಪ್ರದರ್ಶಿಸಲಾಯಿತು. ಕ್ಲಬ್​ನ ಈಜುಕೊಳದಲ್ಲಿ ಒಟ್ಟು ಹತ್ತು ಜನ ವಿದ್ಯಾರ್ಥಿಗಳು ಇಂದು ಜಲಯೋಗ ಮಾಡಿದರು. ಕೃಷಿ ಕಾಲೇಜಿನ ಉಪನ್ಯಾಸಕ ರಮೇಶ್ ಕುಂಬಾರ ಅವರು ಕ್ಲಬ್​​ ಸದಸ್ಯರಾದ ಹತ್ತು ಜನ ವಿದ್ಯಾರ್ಥಿಗಳಿಗೆ ಕಳೆದ 15 ದಿನಗಳ ಕಾಲ ತರಬೇತಿ ನೀಡಿದ್ದರು.

Jalayoga Show in Cosmo Club at Shivamogga
ಶಿವಮೊಗ್ಗದ ಕಾಸ್ಮೋ ಕ್ಲಬ್‌ನಲ್ಲಿ ಜಲಯೋಗ ಪ್ರದರ್ಶನ

ಮತ್ಸ್ಯಾಸನ, ಕುರ್ಮಾಸನ ಸೇರಿದಂತೆ ವಿವಿಧ ರೀತಿಯ ಆಸನಗಳನ್ನು ಸುಮಾರು 30 ನಿಮಿಷಗಳ ಕಾಲ ಪ್ರದರ್ಶಿಸಿದರು. ನೀರಿನಲ್ಲಿಯೇ ಪದ್ಮಾಸನ ಹಾಕುವುದು, ಪದ್ಮಾಸನ ಹಾಕಿ ಕೈಯನ್ನು ಹಿಂದೆ ಬಾಗಿಸುವುದು. ಹೀಗೆ ವಿವಿಧ ರೀತಿಯ ಭಂಗಿಗಳನ್ನು ಪ್ರದರ್ಶಿಸಿದರು. ನೀರಿನಲ್ಲಿಯೇ ತೇಲುತ್ತಾ ವಿವಿಧ ಯೋಗವನ್ನು ಪ್ರದರ್ಶಿಸಿ ಯೋಗಪಟುಗಳು ಎಲ್ಲರ ಗಮನ ಸೆಳೆದರು.

ಬ್ಯಾಂಕ್ ಉದ್ಯೋಗಿಗಳಿಂದ ಯೋಗಭ್ಯಾಸ: ಶಿವಮೊಗ್ಗ ಜಿಲ್ಲಾ ಲೀಡ್ ಬ್ಯಾಂಕ್​​​​ನಿಂದ ನಗರದ ಕುವೆಂಪು ರಂಗಮಂದಿರದ ಪಕ್ಕದಲ್ಲಿ ಜಿಲ್ಲೆಯ ಎಲ್ಲ ಬ್ಯಾಂಕ್ ಉದ್ಯೋಗಿಗಳು ಒಂದೇ ಕಡೆ ಸೇರಿ ಯೋಗಾಸನ ಮಾಡಿದರು.

ಇದನ್ನೂ ಓದಿ: ಮನಸ್ಸಿಗೆ ಬಲ ನೀಡುವ ವಿದ್ಯೆ ಯೋಗ: ವಿನಯ್ ಗುರೂಜಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.