ETV Bharat / city

ಐಎಂಎ ಜ್ಯುವೆಲ್ಲರಿ ಹಗರಣ: CBIಗೆ ವಹಿಸಲು ಈಶ್ವರಪ್ಪ ಒತ್ತಾಯ

author img

By

Published : Jun 12, 2019, 5:16 PM IST

ಐಎಂಎ ಕಂಪನಿಯ ಭಾರಿ​ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಅಸಹಾಯಕ ರೀತಿಯಲ್ಲಿ ವರ್ತಿಸುತ್ತಿದೆ. ಬಡ, ಮಧ್ಯಮ ವರ್ಗದವರು ಬೀದಿಗೆ ಬಂದಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ. ಈ ಕೂಡಲೇ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಒತ್ತಾಯಿಸಿದ್ದಾರೆ.

ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ: ಐಎಂಎ ಜುವೆಲ್ಲರಿ ಕಂಪನಿಯಲ್ಲಿ ನಡೆದಿದೆ ಎನ್ನಲಾದ 10 ಸಾವಿರ ಕೋಟಿ ರೂಗೂ ಅಧಿಕ ಮೊತ್ತದ ಹಗರಣವನ್ನು ಸಿಬಿಐಗೆ ವಹಿಸುವಂತೆ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ.

ಐಎಂಎ ಕಂಪನಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಈಶ್ವರಪ್ಪ ಒತ್ತಾಯ

ರಾಜ್ಯ ಸರ್ಕಾರ ಅಸಹಾಯಕರ ರೀತಿಯಲ್ಲಿ ವರ್ತಿಸುತ್ತಿದೆ. ಬಡ, ಮಧ್ಯಮವರ್ಗದವರು ಬೀದಿಗೆ ಬಂದಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ಕೊಡ್ತಿದ್ದಾರೆ. ಈ ಜನರ ಕಾಳಜಿ ಬಗ್ಗೆ ಸರ್ಕಾರಕ್ಕೆ ಕಿವಿ, ಕಣ್ಣು, ಹೃದಯ ಇಲ್ವಾ? ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿ ನಡೆದ ಅತೀ ದೊಡ್ಡ ಹಗರಣ ಇದಾಗಿದೆ. ಈ ಹಗರಣದ ಹಿನ್ನೆಲೆಯಲ್ಲಿ ಯಾವುದೇ ಸಂಸ್ಥೆಯಲ್ಲಿ ಜನರು ಹೂಡಿಕೆ ಮಾಡುವುದಕ್ಕೆ ಭಯ ಪಡುತ್ತಿದ್ದಾರೆ. ಹಾಗಾಗಿ ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಲು ಮುಂದಾಗಲಿ, ಇಲ್ಲದಿದ್ದರೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಿ ಎಂದರು.

Intro:ಶಿವಮೊಗ್ಗ,
ಐ.ಎಂ.ಎ. ಜ್ಯುವೆಲರ್ಸ್ ಹಗರಣ ಸಿ.ಬಿ.ಐ. ತನಿಖೆಗೆ ವಹಿಸಿ. ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಒತ್ತಾಯ

ಶಿವಮೊಗ್ಗದಲ್ಲಿ ಮಾಜಿ ಡಿ.ಸಿ.ಎಂ. ಕೆ. ಎಸ್. ಈಶ್ವರಪ್ಪ
ಐ.ಎಂ.ಎ. ಕಂಪನಿ ಹೂಡಿಕೆದಾರರಿಗೆ ದೋಖಾ ಪ್ರಕರಣದ ಕುರಿತು ಮಾತನಾಡಿದ ಅವರು
10 ಸಾವಿರ ಕೋಟಿಗೂ ಅಧಿಕ ವಂಚನೆ ಆಗಿದೆ.
ಇದರಲ್ಲಿ ಅನೇಕ ರಾಜಕಾರಣಿಗಳು ಪ್ರಭಾವಿ ಮಂತ್ರಿಗಳು ಪಾತ್ರವಿರುವುದು ಮಾದ್ಯಮದಲ್ಲಿ ಬರುತ್ತಿದೆ.ಹಾಗಾಗಿ
ಗೃಹ ಮಂತ್ರಿಗಳು ಇಂತಹವರ ವಿರುದ್ಧ ಕ್ರಮಕ್ಕೆ ತೆಗೆದುಕೊಳ್ಳಲು ಕಾನೂನು ಇಲ್ಲ ಎನ್ನುವ ಹೇಳಿಕೆಯಿಂದ ನೋವು ಆಗಿದೆ ಎಂದರು.

Body:ಸರ್ಕಾರ ಅಸಹಾಯಕತೆ ರೀತಿಯಲ್ಲಿ ವರ್ತನೆ ಮಾಡುತ್ತಿದೆ.ಕೂಡಲೇ ವಂಚನೆ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಲಿ ಎಂದು ಒತ್ತಾಯಿಸಿದರು.
ಬಡ ಮಧ್ಯಮ ವರ್ಗದವರು ,ಬಿದಿಗೆ ಬಂದಿದ್ದಾರೆ .ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ.ಈ ಕುರಿತು ಸರ್ಕಾರ ಕ್ಕೆ ಕಿವಿ ,ಕಣ್ಣು, ಹೃದಯ ಇಲ್ವಾ ಎಂದು ಪ್ರಶ್ನಿಸಿದರು.
ಸರ್ಕಾರದ ಕೈಯಲ್ಲಿ ಆದ್ರೆ ಕ್ರಮಕ್ಕೆ ಮುಂದಾಗಲಿ ಇಲ್ಲದಿದ್ದರೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಿ ಎಂದರು.
ಕರ್ನಾಟಕ ದಲ್ಲಿ ಇದೊಂದು ಅತಿದೊಡ್ಡ ಹಗರಣವಾಗಿದೆ.ಇದರಿಂದ ಯಾವುದೇ ಸಂಸ್ಥೆಯಲ್ಲಿ ಜನರು ಹೂಡಿಕೆ ಮಾಡುವುದಕ್ಕೆ ಭಯ ಪಡುತ್ತಾರೆ .ಹಾಗಾಗಿ ಸರ್ಕಾರ ಕೋಡಲೆ ಸಿಬಿಐ ಗೆ ಒಪ್ಪಿಸಿ ಈ ಪ್ರಕರಣದಲ್ಲಿ ಬಾಗಿಯಾದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಿ ಎಂದರು.
ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.