ETV Bharat / city

ಸಂಪುಟ ರಚನೆ ದಿನವೇ ಸಿಎಂ ರಾಜೀನಾಮೆಗೆ ದಿನೇಶ್​ ಗುಂಡೂರಾವ್ ಆಗ್ರಹ: ಕಾರಣ?

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲಾಗದಿದ್ದರೆ, ರಾಜೀನಾಮೆ ಕೊಡಲಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

If the neighboring victims are not compensated, let the BSY resign
author img

By

Published : Aug 20, 2019, 9:14 PM IST

ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಘೋಷಿಸಿದ ನೆರೆ ಪರಿಹಾರ ನೀಡಲು ಹಣವಿಲ್ಲದೆ ಒದ್ದಾಡುತ್ತಿದ್ದಾರೆ. ಇತ್ತ ಕೇಂದ್ರದಿಂದಲೂ ಸಹಕಾರ ದೊರೆಯುತ್ತಿಲ್ಲ ಎಂದು ಕುಟುಕಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಸಂತ್ರಸ್ತರಿಗೆ ಪರಿಹಾರ ನೀಡಲು‌ ಆಗದಿದ್ದರೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ನಗರದಲ್ಲಿ ಪ್ರವಾಹಕ್ಕೆ ಸಿಲುಕಿ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹದಿಂದ ಶೇ.50ರಷ್ಟು ಹಾನಿಯಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಆಸಕ್ತಿ ತೋರದಿರುವುದು ನೋವಿನ ಸಂಗತಿ. ಈ ಪ್ರವಾಹದ ಅನಾಹುತ ಮನಗಂಡು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಘೋಷಿಸಬೇಕು. ನರೇಂದ್ರ ಮೋದಿ ಅವರು ರಾಜ್ಯಕ್ಕೆ ಖುದ್ದು‌‌ ಭೇಟಿ ನೀಡಬೇಕೆಂದು ಆಗ್ರಹಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಇನ್ನು ಗೃಹ ಸಚಿವ ಅಮಿತ್ ಶಾ ತೋರಿಕೆಗೆ ಮಾತ್ರ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಮೋದಿ ಬೇರೆಲ್ಲಾ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ರಾಜ್ಯ ಪ್ರವಾಹದ ಕುರಿತು ಏನನ್ನೂ ಮಾತನಾಡದೆ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ಇದನ್ನು ರಾಜ್ಯ ಬಿಜೆಪಿಯವರು ಯಾಕೆ ಪ್ರಶ್ನಿಸುತ್ತಿಲ್ಲ. ಈ ಬಗ್ಗೆ ನಾವು ಮಾತೆತ್ತಿದ್ದರೆ ದೇಶ ದ್ರೋಹಿಗಳಾಗುತ್ತೇವೆ ಎಂದು ದಿನೇಶ್​ ಗುಂಡೂರಾವ್​ ಕಿಡಿಕಾರಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೂ ಏನು ಪ್ರಯೋಜನವಿಲ್ಲ. ಅಲ್ಲದೆ, ಸಿಎಂ ಸರ್ವ ಪಕ್ಷಗಳ ಸಭೆಯನ್ನೂ ಕರೆದಿಲ್ಲ ಎಂದರು. ಇನ್ನು ಯಡಿಯೂರಪ್ಪ‌ ಫೋನ್ ಕದ್ದಾಲಿಕೆಯ ಪ್ರಕರಣವನ್ನು ಸಿಬಿಐಗೆ ವಹಿಸಿರುವುದನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ಇದರ ತನಿಖೆಗೆ ಕೇಂದ್ರದ ಸಂಸ್ಥೆಗಳ ಮೊರೆ ಹೋಗಿರುವುದು ನೋಡಿದರೆ, ಅವರಿಗೆ ರಾಜ್ಯ ತನಿಖಾ ಸಂಸ್ಥೆಗಳ ಸಾಮರ್ಥ್ಯದ ಮೇಲೆ ನಂಬಿಕೆ ಇಲ್ಲ ಎಂಬುದು ತಿಳಿಯುತ್ತದೆ. ಐಎಂಎ, ಗೌರಿ ಹತ್ಯೆ ಪ್ರಕರಣ ಪತ್ತೆ ಹಚ್ಚಿದ ಎಸ್​​ಐಟಿಯನ್ನೂ ಕಡೆಗಣಿಸಿರುವುದು ಎಷ್ಟು ಸರಿ ಎಂದು ಕೆಪಿಸಿಸಿ ಅಧ್ಯಕ್ಷರು ಪ್ರಶ್ನಿಸಿದರು.

Intro:ಸಿಎಂ ಯಡಿಯೂರಪ್ಪನವರಿಗೆ ಘೋಷಿಸಿದ ನೆರೆ ಪರಿಹಾರ ನೀಡಲು ಹಣವಿಲ್ಲದಂತೆ, ಸಿಎಂ ಯಡಿಯೂರಪ್ಪನವರು ಒನ್ ಮ್ಯಾನ್ ಆರ್ಮಿ ತರ ಆಗಿದ್ದಾರೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ. ಬಿಜೆಪಿ‌ ಸರ್ಕಾರ ಅತಿವೃಷ್ಟಿ ನಿಭಾಯಿಸುವಲ್ಲಿ ವಿಫಲವಾಗಿದೆ. ರಾಜ್ಯದ ಪ್ರವಾಹ ಪ್ರದೇಶಗಳಲ್ಲಿ ಸಾಕಷ್ಟು ಪ್ರಮಾಣದ ಹಾನಿಯಾಗಿದೆ. ಕೇವಲ ಉತ್ತರ ಕರ್ನಾಟಕ ಭಾಗ ಮಾತ್ರವಲ್ಲದೆ, ರಾಜ್ಯದ ಶೇ 50 ರಷ್ಟು ಭಾಗ ಹಾನಿಯಾಗಿದೆ. ಸಂತ್ರಸ್ತರಿಗೆ ಪರಿಹಾರ ನೀಡಲು‌ ಆಗದೆ ಹೋದ್ರೆ ಯಡಿಯೂರಪ್ಪ ರಾಜೀನಾಮೆ ನೀಡಿ ಹೋಗಲಿ ಎಂದರು. ಕೇಂದ್ರ ಸರ್ಕಾರ ಈ ಬಗ್ಗೆ ಆಸಕ್ತಿ ತೋರದೆ ಇರುವುದು ನೋವಿನ ಸಂಗತಿಯಾಗಿದೆ. ರಾಜ್ಯದಲ್ಲಿ ಆಗಿರುವ ಪ್ರವಾಹದ ಅನಾಹುತ ಮನಗಂಡು ಕೇಂದ್ರ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.ಗೃಹ ಸಚಿವ ಅಮಿತ್ ಷಾ ರವರು ತೋರಿಕೆಗೆ ಮಾತ್ರ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಬೇರೆಲ್ಲಾ ವಿಷಯಗಳ ಬಗ್ಗೆ ಮಾತನಾಡುವ ಪಿಎಂ ಮೋದಿರವರು ಇದುವರೆಗೂ ರಾಜ್ಯದ ಪ್ರವಾಹದ ಬಗ್ಗೆ ಮಾತನಾಡದೆ ಇರುವುದು ನಿಜಕ್ಕೂ ದುಂತವೇ ಸರಿ ಎಂದರು.

Body:ಬೇರೆ ಬೇರೆ ವಿಷಯಗಳಿಗ ಟ್ವೀಟ್ ಮಾಡುವ ಮೋದಿರವರು ಪ್ರವಾಹದ ಬಗ್ಗೆ ಮಾತನಾಡುತ್ತಲೆ ಇಲ್ಲ. ಈ ಬಗ್ಗೆ ರಾಜ್ಯ ಬಿಜೆಪಿಯವರು ಯಾಕೆ ಪ್ರಶ್ನೆ ಮಾಡುತ್ತಿಲ್ಲ ಎಂದರು. ಈ ಬಗ್ಗೆ ನಾವು ಕೇಳಿದ್ರೆ, ದೇಶದ್ರೋಹಿಗಳಾಗಿ ಬಿಡುತ್ತೆವೆ.‌ರಾಜ್ಯದ ಪ್ರವಾಹದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದೆ. ಅದರೂ ನೆರೆ ಪರಿಹಾರ ಮಾತ್ರ ವಿತರಣೆ ಆಗುತ್ತಿಲ್ಲ. ಪ್ರವಾಹದ ಇದುವರೆಗೂ ಯಾಕೆ ಸಿಎಂ ಸರ್ವ ಪಕ್ಷಗಳ ಸಭೆ ಕರೆದಿಲ್ಲ. ಜನರು‌ ಅಧಿಕಾರಿಗಳ ಬಳಿ ಹೋಗಿ ಕೆಲ್ಸ ಮಾಡಿ ಕೊಳ್ಳಲು ಆಗುತ್ತಿಲ್ಲ, ಸರ್ಕಾರ ಎಲ್ಲಾ ರೀತಿಯಲ್ಲಿ‌ ವಿಫಲವಾಗಿದೆ.‌ನರೇಂದ್ರ ಮೋದಿರವರು ರಾಜ್ಯಕ್ಕೆ ಖುದ್ದು‌‌ ಭೇಟಿ ನೀಡಬೇಕು ಎಂದು‌ ಆಗ್ರಹಿಸಿದರು.

Conclusion:ಇನ್ನೂ ಯಡಿಯೂರಪ್ಪ‌ ಪೋನ್ ಕದ್ದಾಲಿಕೆಯ ವಿಚಾರನ್ನು ಸಿಬಿಐಗೆ ವಹಿಸಿವುದುದನ್ನು‌ ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ಕದ್ದಾಲಿಕೆ ವಿಚಾರ ಪರಿಶೀಲನೆ ನಡೆಸಲಿ, ಯಾರು‌ ತಪ್ಪಿತಸ್ಥರಿದ್ದಾರೂ ಅವರಿಗೆ ಶಿಕ್ಷೆ ನೀಡಲಿ ಎಂದರು.
ಯಡಿಯೂರಪ್ಪನವರಿಗೆ ರಾಜ್ಯ ತನಿಖಾ ತಂಡಗಳಿಗೆ ಸಾಮರ್ಥ್ಯವನ್ನು ಯಡಿಯೂರಪ್ಪ ಕಡೆಗಣಿಸಿದ್ದಾರೆ.ಐಎಂಎ , ಗೌರಿ ಹತ್ಯಾ ಕೇಸ್ ಗಳನ್ನು ಪತ್ತೆ ಮಾಡಿದ ಎನ್ ಐ ಟಿಯ್ನು ಬಿಟ್ಟು ಬೇರೆಯವರಿಗೆ ನೀಡಿದ್ದು ಎಷ್ಟು ಸರಿ ಎದು ಪ್ರಶ್ನೆ ಮಾಡಿದರು. ಈ ವೇಳೆ ಜಿಲ್ಲಾ‌ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಇತರರು ಹಾಜರಿದ್ದರು.

ಬೈಟ್: ದಿನೇಶ್ ಗುಂಡೂರವ್. ಅಧ್ಯಕ್ಷರು .ಕೆಪಿಸಿಸಿ.

ಕಿರಣ್ ಕುಮಾರ್.‌ಶಿಚಮೊಗ್ಗ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.