ಶಿವಮೊಗ್ಗ: ಜನವರಿ 21 ರಂದು ಹುಣಸೋಡಿನಲ್ಲಿ ನಡೆದ ಜಿಲೆಟಿನ್ ಸ್ಫೋಟ ಪ್ರಕರಣದಲ್ಲಿ ಹಾನಿಗೊಳಗಾದ ಸಂತ್ರಸ್ತರ ಮನೆಗಳ ವಿವರವನ್ನು ಚಾರ್ಜ್ಶೀಟ್ನಲ್ಲಿ ನಮೂದಿಸಬೇಕು ಎಂದು ಬಸವನಗಂಗೂರಿನ ಮಹಿಳೆಯೊಬ್ಬರು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ಜಿಲೆಟಿನ್ ಸ್ಪೋಟದ ವೇಳೆ ನಮ್ಮ ಮನೆ ಹಾನಿಗೊಳಗಾಗಿದೆ. ಈ ಕುರಿತು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮ ಪಂಚಾಯತಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಮನೆಯ ಸರ್ವೆ ನಡೆಸಿ, ಹಾನಿಗೊಳಗಾಗಿರುವ ಕುರಿತು ವರದಿ ಸಲ್ಲಿಸಿಲ್ಲ. ಇದೀಗ ಮನೆ ಬೀಳುವ ಸ್ಥಿತಿ ತಲುಪಿದೆ.
ಸ್ಪೋಟದಲ್ಲಿ ಕೇವಲ ಪ್ರಾಣಹಾನಿ ಕುರಿತು ಮಾತ್ರ ಹೇಳಲಾಗುತ್ತಿದೆ. ಆದರೆ, ಮನೆ ಹಾನಿಗೊಳಗಾದ ಕುರಿತು ಯಾವುದೇ ರೀತಿಯ ಮಾಹಿತಿ ನೀಡದೆ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದರಿಂದ ಸೂಕ್ತ ತನಿಖೆ ನಡೆಸಿ, ಪ್ರಕರಣದ ಕುರಿತು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸುವುದಕ್ಕೂ ಮುನ್ನ ಮನೆ ಹಾನಿಗೊಳದವರ ವಿವರವನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕೋವಿಡ್‌ಗೆ ತಾಯಿ ಬಲಿ; ಆಘಾತಕ್ಕೊಳಗಾದ ಪುತ್ರಿ ಫ್ಲ್ಯಾಟ್‌ನಿಂದ ಹಾರಿ ಆತ್ಮಹತ್ಯೆ