ETV Bharat / city

ಲಂಚ ತಿಂದ್ಕೊಂಡು ಬದ್ದಿರ್ತಾರೆ ಅವರು ನಾಯಿ ಹಂಗೆ, ಪೊಲೀಸ್ರಿಗೊಂದು ಆತ್ಮಗೌರವ ಬೇಕಲ್ರೀ.. ಸಚಿವ ಆರಗ - ಪೊಲೀಸರ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ಅಸಮಾಧಾನ

ನಾನು ಗೃಹ ಸಚಿವನಾಗಿ ಇರುಬೇಕಾ?, ಬೇಡ್ವಾ? ಎಂದು ಪ್ರಶ್ನೆ ಮಾಡಿದ ಸಚಿವರು, ಎಲ್ಲಾ ಪೊಲೀಸರು ಕೆಟ್ಟು ಹಾಳಾಗಿ ಹೋಗಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ..

Home Minister Araga Jnanendra outrage against police
ಪೊಲೀಸರ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ಅಸಮಾಧಾನ
author img

By

Published : Dec 3, 2021, 11:54 AM IST

Updated : Dec 3, 2021, 10:21 PM IST

ಶಿವಮೊಗ್ಗ : ಪೊಲೀಸ್ ಇಲಾಖೆಯ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ಅಸಮಾಧಾನ ಹೊರ ಹಾಕಿದ್ದಾರೆ. ಸದ್ಯ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪೊಲೀಸರ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ಅಸಮಾಧಾನ : ವಿಡಿಯೋ ವೈರಲ್

ಚಿಕ್ಕಮಗಳೂರಿನ ಪೊಲೀಸ್ ಅಧಿಕಾರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೈರಲ್ ಆದ ವಿಡಿಯೋದಲ್ಲಿ ಸಚಿವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪ‌ದ ತಮ್ಮ ನಿವಾಸದ ಕಚೇರಿಯಿಂದ ಪೊಲೀಸ್ ಅಧಿಕಾರಿಯೊಬ್ಬರಿಗೆ ಫೋನ್​​ನಲ್ಲಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ಗೋಹತ್ಯೆ‌ ನಿಷೇಧ ಕಾಯ್ದೆ ಜಾರಿಗೆ ತಂದು, ಪೊಲೀಸರ ಕೈಗೆ ಕಾನೂನು ನೀಡಿದರು ಸಹ ಅಕ್ರಮ ಗೋಸಾಗಾಟ ನಿಲ್ಲದೇ ಇರುವುದರಿಂದ ಗೃಹ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರಿಗೆ ಕೈ ತುಂಬಾ ಸಂಬಳ ಕೊಡುತ್ತಿದ್ದೇವೆ. ಆದರೂ ಅವರು ಎಂಜಲು ಕಾಸು ತಿಂದು ಬದುಕುತ್ತಿದ್ದಾರೆ. ಯೋಗ್ಯತೆ ಇಲ್ಲದಿದ್ದರೆ ಯೂನಿಫಾರ್ಮ್ ಬಿಚ್ಚಿಟ್ಟು, ಮನೆ ಕಡೆ ಹೋಗಿ, ಮಣ್ಣು ಹೊರಲಿ ಎಂದು ಕಿಡಿಕಾರಿದ್ದಾರೆ.

ಪ್ರತಿನಿತ್ಯ‌ ಗೋಸಾಗಾಟ ಮಾಡುವವರು ಯಾರು? ಎಂಬುದು ಪೊಲೀಸರಿಗೆ ಗೊತ್ತಿದೆ. ಲಂಚ ತಿಂದುಕೊಂಡು ನಾಯಿಯ ಹಾಗೆ ಬಿದ್ದಿರುತ್ತಾರೆ. ಪೊಲೀಸರಿಗೆ ಆತ್ಮಗೌರವ ಬೇಕಲ್ಲರೀ.. ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ನಾನು ಗೃಹ ಸಚಿವನಾಗಿ ಇರುಬೇಕಾ?, ಬೇಡ್ವಾ? ಎಂದು ಪ್ರಶ್ನೆ ಮಾಡಿದ ಸಚಿವರು, ಎಲ್ಲಾ ಪೊಲೀಸರು ಕೆಟ್ಟು ಹಾಳಾಗಿ ಹೋಗಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಾಯ್ದೆ ಜಾರಿಗೆ ಬಂದ ಮೇಲೂ ಅಕ್ರಮ ಗೋ ಸಾಗಣೆ ನಡೆಯುತ್ತಿದೆ: ಆರಗ ಜ್ಞಾನೇಂದ್ರ

Last Updated : Dec 3, 2021, 10:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.