ಶಿವಮೊಗ್ಗ: ಸಾಗರ-ಹೊಸನಗರದಲ್ಲಿ ಭಾನುವಾರ ಸಂಜೆ ಧಿಡೀರನೇ ಗುಡುಗು-ಸಿಡಿಲು ಸಹಿತ ಭಾರಿ ಮಳೆ ಸುರಿದಿದೆ. ಹೊಸನಗರದಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಮಳೆ ಸುರಿದಿದೆ. ಹೊಸನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದ್ದು, ಬಿಸಿಲ ದಗೆಯಿಂದ ಬಳಲಿದ್ದ ಜನತೆಗೆ ಸ್ವಲ್ಪ ರಿಲ್ಯಾಕ್ಸ್ ಎನಿಸಿದೆ.
ಮಳೆಯ ಜೊತೆ ಗಾಳಿಯು ಇದ್ದ ಕಾರಣ ಕೆಲವು ಮನೆಯ ಮೇಲಿನ ತಗಡಿನ ಶೀಟುಗಳು ಹಾರಿ ಹೋಗಿವೆ. ಅಲ್ಲಲ್ಲಿ ಮರಗಳು ಧರೆಗೆ ಉರುಳಿದ್ದು ವರದಿಯಾಗಿದೆ. ಸಾಗರ ಪಟ್ಟಣದ ಟಿಪ್ ಟಾಪ್ ಕಲ್ಯಾಣ ಮಂದಿರದ ರಸ್ತೆಯಲ್ಲಿ ಬೃಹತ್ ಮರವೊಂದು ಧರೆಗೆ ಉರುಳಿದ್ದು, ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಚಂಡ ಮಾರುತದಿಂದ ಗಾಳಿ ಸಹಿತ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆಯು ಮೊದಲೇ ಮುನ್ಸೂಚನೆ ನೀಡಿತ್ತು.