ಶಿವಮೊಗ್ಗ : ಸಿಎಂ ತವರು ಜಿಲ್ಲೆಯಲ್ಲಿ ಜೂಜಾಟ, ಬೆಟ್ಟಿಂಗ್ ದಂಧೆ, ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ ಸಹ ಪೊಲೀಸರು ಸುಮ್ಮನಿರುವುದು ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ.
ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿನ ಪೊಲೀಸ್ ಠಾಣೆಯ ಅನತಿ ದೂರದಲ್ಲಿರುವ ಮೀನು ಮಾರುಕಟ್ಟೆಯ ಪಕ್ಕದ ಬಯಲಲ್ಲಿ ಬೆಟ್ಟಿಂಗ್ ಕಟ್ಟಿ ಯುವಕರು ರಾಜಾರೋಷವಾಗಿ ತೂರುಬಿಲ್ಲೆ(ರಾಜ ರಾಣಿ) ಆಟವಾಡುತ್ತಿದ್ದಾರೆ. ಆದ್ರೆ ವಿಚಾರ ತಿಳಿದೂ ತಿಳಿಯದಂತೆ ಪೊಲೀಸರಿದ್ದಾರೋ ಅಥವಾ ನಮಗ್ಯಾಕೆ ಊರು ಉಸಾಬರಿ ಅಂತ ಸುಮ್ಮನಿದ್ದಾರೋ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
ಅಲ್ಲದೆ ಇತ್ತೀಚಿಗಷ್ಟೇ ಶಿವಮೊಗ್ಗ ಪೊಲೀಸ್ ಇಲಾಖೆ ಕಾರ್ಯವೈಖರಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪನವರು ಅಸಮಾಧಾನ ಹೊರಹಾಕಿದ್ದರು.