ಶಿವಮೊಗ್ಗ: ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆ ಮಾರಾಟಕ್ಕೆ ಯತ್ನಿಸಿದ ನಾಲ್ವರನ್ನು ಶಿವಮೊಗ್ಗದ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಅನಂತಪುರಂ ಮೂಲದ ಯರ್ರಿ ಸ್ವಾಮಿ, ಶಬ್ಬೀರ್ ಬಾಷಾ, ರಾಯಚೂರಿನ ಮುರಳೀಧರ್, ಚಿತ್ರದುರ್ಗದ ಪದ್ಮಾವತಿ ಬಂಧಿತ ಆರೋಪಿಗಳು. ಇವರು 5 ಲಕ್ಷ ರೂಪಾಯಿಗೆ ನಕ್ಷತ್ರ ಆಮೆ ಮಾರಾಟ ಮಾಡಲು ಶಿವಮೊಗ್ಗ ನಗರಕ್ಕೆ ಬಂದಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ವಿಭಾಗದ ಅಧಿಕಾರಿಗಳು, ಪುರದಾಳು-ಗಾಡಿಕೊಪ್ಪ ರಸ್ತೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಅನಂತಪುರಂನಿಂದ ನಕ್ಷತ್ರ ಆಮೆ ತರಲಾಗಿತ್ತು. ಆದರೆ, ಶಿವಮೊಗ್ಗದಲ್ಲಿ ಆಮೆ ಖರೀದಿಗೆ ಮುಂದಾದವರು ಯಾರು ಎಂಬುದು ತಿಳಿದುಬಂದಲ್ಲ.