ETV Bharat / city

ಬಿಜೆಪಿಗೆ ಆಡಳಿತ ನಡೆಸಲು ಬರಲ್ಲ‌, ಕೋಮುಗಲಭೆ ಮಾಡಲು ಮಾತ್ರ ಬರುತ್ತೆ: ಕಿಮ್ಮನೆ ರತ್ನಾಕರ್

ಯತ್ನಾಳ್​ರಂತಹವರು ಕಳೆದ 6 ತಿಂಗಳಿನಿಂದ ಸರ್ಕಾರವನ್ನು ಬೈಯುತ್ತಿದ್ದಾರೆ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ದುರಾಡಳಿತ ನಡೆಯುತ್ತಿದ್ದು, ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಸರ್ಕಾರಗಳು ರಾಜೀನಾಮೆ ನೀಡಿ ಮನೆಗೆ ಹೋಗಬೇಕು ಎಂದು ಕಿಮ್ಮನೆ ಹೇಳಿದರು.

former-minister-kimmane-ratnakar-talk
ಕಿಮ್ಮನೆ ರತ್ನಾಕರ್
author img

By

Published : May 29, 2021, 5:07 PM IST

ಶಿವಮೊಗ್ಗ: ಬಿಜೆಪಿಯವರಿಗೆ ಆಡಳಿತ ಮಾಡಲು ಬರಲ್ಲ, ಆದರೆ ಕೋಮುಗಲಭೆ ಮಾಡಲು ಮಾತ್ರ ಬರುತ್ತದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ.

ಕಿಮ್ಮನೆ ರತ್ನಾಕರ್

ಓದಿ: ಅತ್ಯಾಚಾರ ಪ್ರಕರಣ: ಎಲ್ಲ ಆರೋಪಿಗಳ ಬಂಧನ..ಅಜ್ಞಾತ ಸ್ಥಳದಿಂದ ಸಂತ್ರಸ್ತೆ ಹೇಳಿಕೆ ಸಾಧ್ಯತೆ

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಬಿಜೆಪಿ ದುರಾಡಳಿತ ನಡೆಸುತ್ತಿದೆ. ಪಕ್ಷದಲ್ಲಿನ ಭಿನ್ನಾಭಿಪ್ರಾಯ, ವ್ಯತ್ಯಾಸಗಳನ್ನು ಸಾರ್ವಜನಿಕ ಕ್ಷೇತ್ರಕ್ಕೆ ತರಬಾರದಿತ್ತು. ಅವರು ಏನೇ ಇದ್ದರೂ ಅದನ್ನು ತಮ್ಮೂಳಗೆ ಬಗೆಹರಿಸಿಕೊಳ್ಳಬೇಕಿತ್ತು. ಯತ್ನಾಳರಂತಹವರು ಕಳೆದ 6 ತಿಂಗಳಿನಿಂದ ಸರ್ಕಾರವನ್ನು ಬೈಯುತ್ತಿದ್ದಾರೆ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ದುರಾಡಳಿತ ನಡೆಯುತ್ತಿದೆ. ನರೇಂದ್ರ ಮೋದಿಗೆ ಹಾಗೂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಸರ್ಕಾರಗಳು ರಾಜೀನಾಮೆ ನೀಡಿ ಮನೆಗೆ ಹೋಗಬೇಕೆಂದರು.

ಇಂದು ಗಂಗಾ ನದಿಯಲ್ಲಿ ಹೆಣಗಳು ತೇಲುತ್ತಿದ್ದು, ಸರ್ಕಾರ ಹೇಳುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಜನ ಸಾಯುತ್ತಿದ್ದಾರೆ. ಜನ ಆಕ್ಸಿಜನ್, ವೈದ್ಯರು ಇಲ್ಲದೆ ಮನೆಯಲ್ಲಿ, ಆಟೋದಲ್ಲಿ ಸಾಯುತ್ತಿದ್ದಾರೆ. ಸರ್ಕಾರ ಜನರಿಗೆ ಸರಿಯಾದ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿದೆ.

ಬಿಜೆಪಿಯವರು ಜನರ ಸಂಕಷ್ಟಕ್ಕೆ ಸ್ಪಂದಿಸದೆ, ಅವರನ್ನು ಕೆಳಗಿಸಬೇಕು ಇವರನ್ನು ಮಂತ್ರಿ ಮಾಡಬೇಕು ಎನ್ನುವುದರಲ್ಲಿಯೇ ಇದ್ದಾರೆ. ಬಿಜೆಪಿಯವರು ಈ ವಾತಾವರಣದಲ್ಲಿ ಪಕ್ಷ ಸಂಘಟನೆ ಮಾಡುವತ್ತಾ ಗಮನ ಹರಿಸುತ್ತಿದ್ದಾರೆ. ಇದು ರಾಷ್ಟ್ರೀಯ ವಿಪತ್ತು ಎಂದು ಗಮನಿಸಿ, ಬಿಜೆಪಿ ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.