ETV Bharat / city

ಲವ್​ ಜಿಹಾದ್​, ಮತಾಂತರದಿಂದ ಜನ ಅನುಭವಿಸುತ್ತಿರುವ ಕಷ್ಟ ತಿಳಿಯದೇ : ಡಿಕೆಶಿ ವಿರುದ್ಧ ಈಶ್ವರಪ್ಪ ಕಿಡಿ - ಮತಾಂತರ ನಿಷೇಧ ಕಾಯ್ದೆ

ಮತಾಂತರ ನಿಷೇಧ ಕಾಯ್ದೆಗೆ ಡಿ. ಕೆ. ಶಿವಕುಮಾರ್ ವಿರೋಧ ಕುರಿತು ಮಾತನಾಡಿದ ಸಚಿವ ಕೆ. ಎಸ್​. ಈಶ್ವರಪ್ಪ, ಲವ್ ಜಿಹಾದ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಬೇರೆ ಬೇರೆ ಕಡೆ ನಮ್ಮ ಸಹೋದರಿಯರು ಬಲಿಯಾಗಿದ್ದಾರೆ ಎನ್ನುವುದು ಡಿಕೆಶಿ ಅವರಿಗೆ ಗೊತ್ತಿಲ್ಲವಾ? ಗೊತ್ತಿಲ್ಲ ಅಂದ್ರೆ ನಾನೇ ಕರೆದುಕೊಂಡು ಹೋಗಿ ತೋರಿಸುತ್ತೇನೆ ಬರಲಿ. ಎಲ್ಲೆಲ್ಲಿ ಮತಾಂತರ ಮಾಡಿ ಹೆಣ್ಣು ಮಕ್ಕಳಿಗೆ ಮೋಸ ಮಾಡ್ತಿದ್ದಾರೆ ಎಂಬುದನ್ನು ತೋರಿಸುತ್ತೇನೆ ಎಂದು ಸವಾಲು ಹಾಕಿದರು.

eshwarappa-slams-dk-shivakumar
ಡಿಕೆಶಿ, ಈಶ್ವರಪ್ಪ
author img

By

Published : Dec 11, 2021, 12:36 PM IST

ಶಿವಮೊಗ್ಗ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತಾಂತರ ನಿಷೇಧ ಕಾಯ್ದೆ ಬಗ್ಗೆ ವಿರೋಧ ಮಾಡ್ತೀನಿ ಅಂತಿದ್ದಾರೆ. ನೀವು ಎಷ್ಟೇ ವಿರೋಧ ಮಾಡಿ, ರಾಜ್ಯದಲ್ಲಿ ಧರ್ಮ ಮತ್ತು ನಮ್ಮ ಅಕ್ಕ-ತಂಗಿಯರ‌ನ್ನು ಉಳಿಸುವ ಪೂರ್ಣ ಬಹುಮತ ಬಿಜೆಪಿಗಿದೆ ಇದೆ ಎಂದು ಡಿಕೆಶಿ ವಿರುದ್ಧ ಸಚಿವ ಕೆ.ಎಸ್​​​​​​.ಈಶ್ವರಪ್ಪ ಕಿಡಿಕಾರಿದ್ದಾರೆ.

ಡಿಕೆಶಿ ವಿರುದ್ಧ ಈಶ್ವರಪ್ಪ ಕಿಡಿ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಗ್ಧ ವೀರಶೈವ ಬಂಧುಗಳನ್ನು ಆಸೆ, ಆಮಿಷ ತೋರಿಸಿ ಮತಾಂತರ ಮಾಡಿದ್ದಾರೆ. ಅವರನ್ನು ಮತ್ತೆ ವಾಪಸ್ ನಮ್ಮ ಧರ್ಮಕ್ಕೆ ತರುತ್ತೇವೆ ಎಂಬುದನ್ನು ಸ್ವತಃ ವೀರಶೈವ ಸಮಾಜದ ಅನೇಕ ಪೂಜ್ಯರು ಶಿವಕುಮಾರ್ ಅವರಿಗೆ ಹೇಳಿದ್ದಾರೆ.

ಡಿಕೆಶಿ ವೋಟಿನ ಲೆಕ್ಕ ನೋಡುತ್ತಿದ್ದಾರೆ : ಲವ್ ಜಿಹಾದ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಬೇರೆ ಬೇರೆ ಕಡೆ ನಮ್ಮ ಸಹೋದರಿಯರು ಬಲಿಯಾಗಿದ್ದಾರೆ ಎನ್ನುವುದು ಡಿಕೆಶಿ ಅವರಿಗೆ ಗೊತ್ತಿಲ್ಲವಾ? ಗೊತ್ತಿಲ್ಲ ಅಂದ್ರೆ ನಾನೇ ಕರೆದುಕೊಂಡು ಹೋಗಿ ತೋರಿಸುತ್ತೇನೆ ಬರಲಿ. ಎಲ್ಲೆಲ್ಲಿ ಮತಾಂತರ ಮಾಡಿ ಹಿಂದು ಹೆಣ್ಣು ಮಕ್ಕಳಿಗೆ ಮೋಸ ಮಾಡ್ತಿದ್ದಾರೆ ಎಂಬುದನ್ನು ತೋರಿಸುತ್ತೇನೆ. ಡಿಕೆಶಿ ಅವರು‌ ಕೇವಲ ಓಟಿನ ಲೆಕ್ಕ ನೋಡ್ತಿದ್ದಾರೆ ಎಂದು ಕೆಎಸ್​ಈ ಕಿಡಿಕಾರಿದರು.

ಡಿ ಕೆ ಶಿವಕುಮಾರ ಮತಾಂತರ ಕಾಯ್ದೆ ಹೇಳಿಕೆಗೆ ಈಶ್ವರಪ್ಪ ಕಿಡಿ​ : ಒಬ್ಬೊಬ್ಬ ವ್ಯಕ್ತಿ ಮತಾಂತರ ಆದ ಸಂದರ್ಭದಲ್ಲಿ ಅವರು ಅನುಭವಿಸುವ, ಜೀವನದ ತೊಂದರೆಯನ್ನು ಡಿಕೆಶಿ ಗಮನಿಸಿಲ್ಲ. ಡಿಕೆಶಿ ಅವರೇ.. ನಮ್ಮ‌ ದೇಶದಿಂದ ವಿದೇಶಕ್ಕೆ ತೆಗೆದುಕೊಂಡು ಮಾರಾಟ ಮಾಡಿರುವ ಹೆಣ್ಣುಮಕ್ಕಳ ಕಷ್ಟ ಕೇಳಿ ತಿಳಿದುಕೊಳ್ಳಿ. ವಿಷಯ ತಿಳಿದುಕೊಳ್ಳದೆ ಈ ರೀತಿ ಮಾತನಾಡುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತಾಂತರದ ಕಷ್ಟ ಕಾರ್ಪಣ್ಯಗಳು ನಿಮಗೆ ತಿಳಿಯದು : ಒಂದೇ ಒಂದು ಧರ್ಮವನ್ನು ಉದ್ದೇಶಿಸಿ ಮತಾಂತರ ಕಾಯ್ದೆ ತರುತ್ತಿದ್ದಾರೆ ಎಂದು ಶಿವಕುಮಾರ್​ ಆರೋಪಿಸಿದ್ದಾರೆ. ಹೌದು, ಒಂದು ಧರ್ಮವನ್ನು ಉದ್ದೇಶಿಸಿಯೇ ಈ ಮತಾಂತರ ನಿಷೇಧ ಕಾಯ್ದೆ ತರುತ್ತಿರುವುದು. ಆ ಧರ್ಮದವರು ಹಿಂದು ಹೆಣ್ಣುಮಕ್ಕಳು, ಬಡ ಹಿಂದು ಜನರ ಮೇಲೆ ಕಣ್ಣಿಟ್ಟು, ಆಸೆ ಆಮಿಷ ತೋರಿಸಿ ಮತಾಂತರ ಮಾಡುತ್ತಿರುವುದು ನಿಮ್ಮ ಕಣ್ಣಿಗೆ ಬೀಳುತ್ತಿಲ್ಲವಾ. ಸಮಾಜದ ಕಣ್ಣಿಗೆ ಬಿದ್ದಿದೆ, ಸಾಧು ಸಂತರ ಕಣ್ಣಿಗೆ ಬಿದ್ದಿದೆ. ತಂದೆ-ತಾಯಿಯವರು ನೋವು ಅನುಭವಿಸುತ್ತಿದ್ದಾರೆ. ಆದ್ರೆ ನಿಮಗೆ ಅದು ಕಾಣಿಸುತ್ತಿಲ್ಲವೇ ಎಂದು ಡಿಕೆಶಿಯನ್ನು ಈಶ್ವರಪ್ಪ ಪ್ರಶ್ನಿಸಿದರು.

ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆ : ಸ್ವತಃ ಶಾಸಕ ಗೂಳಿಹಟ್ಟಿ ಶೇಖರ್ ಅವರು ಅವರ ತಾಯಿಯೇ ಮತಾಂತರ ಆಗಿದ್ದನ್ನು ಸದನದಲ್ಲೇ ಬಹಿರಂಗಪಡಿಸಿದ್ದರು. ಮತಾಂತರ ನಿಷೇಧವನ್ನು ಏಕೆ ವಿರೋಧ ಮಾಡ್ತೀರಾ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿ. ಎಲ್ಲಾ ಹಿಂದುಗಳು ಮತಾಂತರ ಆಗಬೇಕಾ ಹೇಳಿ ನೋಡೋಣ. ಪಾಕಿಸ್ತಾನದಲ್ಲಿ ಶೇ. 24 ಷ್ಟು ಹಿಂದುಗಳು ಇದ್ದರು. ಇಂದು ಆ ಸಂಖ್ಯೆ ಶೇ. 3ಕ್ಕೆ ಬಂದಿದೆ. ಹೊಡೆದು, ಬಡಿದು ಕೊಲೆ ಮಾಡಿದ್ದಾರೆ. ಮತಾಂತರ ಮಾಡಿದ್ದಾರೆ. ಹೀಗಿರುವಾಗ ನಿಮಗೆ ಏನು ಅನಿಸುವುದಿಲ್ಲವಾ. ನಾವು ಇದನ್ನು ವಿಧಾನಸಭೆಯಲ್ಲಿ ಕಾಯ್ದೆಯನ್ನು ಪಾಸ್ ಮಾಡ್ತೀವಿ. ರಾಜ್ಯದಲ್ಲಿ ಭಾರತೀಯ ಸಂಸ್ಕೃತಿ ಉಳಿಸುವ ಅನೇಕ ಕಾಯ್ದೆ ತರುತ್ತೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.