ಶಿವಮೊಗ್ಗ: ಜಿಲ್ಲೆಯಾದ್ಯಂತ ಭೂಮಿ ಕಂಪಿಸಿದ ಅನುಭವವಾಗಿದ್ದು, ಇದರಿಂದ ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಜಿಲ್ಲೆಯ ವಿವಿಧೆಡೆ ಒಂದೇ ರೀತಿಯ ಅನುಭವಾಗಿದ್ದು, ಕೇವಲ 4 ಸೆಂಕೆಡ್ಗಳ ಕಾಲ ನಿಗೂಢವಾದ ಶಬ್ದವಾಗಿದೆ. ತದನಂತರ ಭೂಮಿ ನಡುಗಿದ ಅನುಭವವಾಗಿದ್ದು, ಶಬ್ದದ ಭೀಕರತೆಗೆ ಜನ ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದು ಬೀದಿಯಲ್ಲಿ ನಿಂತಿದ್ದಾರೆ.
ಓದಿ: ಚಿಕ್ಕಮಗಳೂರಿನಲ್ಲೂ ಭೂಕಂಪನದ ಅನುಭವ... ಭಯಭೀತರಾದ ಜನರು!
ಭೂಮಿಯ ಕಂಪನ ಎಷ್ಟು ಪ್ರಮಾಣದ್ದು ಅಂತ ಇನ್ನೂ ತಿಳಿಯಬೇಕಿದೆ. ಜಿಲ್ಲೆಯ ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ರಿಪ್ಪನಪೇಟೆ, ಸಾಗರ, ಶಿಕಾರಿಪುರ ಭಾಗದಲ್ಲಿ ಕಂಪಿಸಿದ ಅನುಭವವಾಗಿದೆ.