ಶಿವಮೊಗ್ಗ: ಟೆಂಪೊ ಟ್ರಾವೆಲ್ಲರ್ ಡ್ರೈವರ್ಗೆ ಫಿಟ್ಸ್ ಬಂದ ಕಾರಣ ವಾಹನ ಕಂದಕಕ್ಕೆ ಬಿದ್ದು 10 ಜನಕ್ಕೆ ಗಾಯವಾಗಿರುವ ಘಟನೆ ಸಾಗರ ತಾಲೂಕು ಸಿಗಂದೂರು ಬಳಿ ನಡೆದಿದೆ. ರಾಮನಗರದ ಬಿಡದಿಯ ಪ್ರವಾಸಿಗರು ಸಿಗಂದೂರು ದೇವಿಯ ದರ್ಶನಕ್ಕೆ ಬರುವಾಗ ದಿಢೀರನೆ ಡ್ರೈವರ್ಗೆ ಫಿಟ್ಸ್ ಬಂದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಟಿಟಿ ರಸ್ತೆ ಪಕ್ಕದ ಇಳಿಜಾರು ಪ್ರದೇಶಕ್ಕೆ ಉರುಳಿದೆ.
ಇದರಿಂದ ಟಿಟಿಯಲ್ಲಿದ್ದ 10 ಜನರಿಗೆ ಗಾಯವಾಗಿದೆ. ಇದರಲ್ಲಿ ನಾಲ್ಕು ಜನಕ್ಕೆ ತೀವ್ರ ತರಹದ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯರು ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ನಾಲ್ವರಲ್ಲಿ ಇಬ್ಬರಿಗೆ ಕಾಲು ಮುರಿತವಾಗಿದೆ. ಉಳಿದ ಇಬ್ಬರಲ್ಲಿ ಒಬ್ಬರ ತಲೆ ಹಾಗೂ ಕೈಗೆ ಗಾಯವಾಗಿದೆ. ಉಳಿದ ಆರು ಜನರಲ್ಲಿ ಮಕ್ಕಳೂ ಇದ್ದಾರೆ. ಇವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸ್ಥಳೀಯ ಮುಖಂಡರಾದ ಜಿ.ಟಿ.ಸತ್ಯನಾರಾಯಣ ಅವರು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲು ಸಹಕಾರ ನೀಡಿದ್ದಾರೆ. ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತೀವ್ರ ಗಾಯಗೊಂಡ ಗಾಯಾಳುಗಳನ್ನು ಸಾಗರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ: ಬೇಸ್ಮೆಂಟ್ ರಾಡ್ ಮೇಲೆ ಬಿದ್ದ ಕೆಲಸಕ್ಕೆ ಬಂದಿದ್ದ ಕೂಲಿ ಕಾರ್ಮಿಕ.. ದವಡೆ ಮೂಲಕ ತಲೆ ಮೇಲಿಂದ ಹಾದು ಹೋದ ಕಬ್ಬಿಣ!