ಶಿವಮೊಗ್ಗ : ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ಆನವಟ್ಟಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಸೊರಬ ಜಿಂಕೆ ಬೇಟೆಗಾರನ ಬಂಧನ : ಸೊರಬ ತಾಲೂಕು ಆನವಟ್ಟಿ ವಲಯದ ತವನಂದಿ ಶಾಖೆಯ ಕರೆಕೊಪ್ಪ ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ, ಮಾಂಸ ಮಾರಾಟ ಮಾಡಲಾಗುತ್ತಿತ್ತು.
ಈ ವೇಳೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ, ನಾರಾಯಣಪ್ಪ ಎಂಬಾತನನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಧಿಸಿ ಬೂದ್ಯಪ್ಪ, ನಾಗಪ್ಪ, ಆಸೀಫ್, ಫೈಜಾನ್ ಎಂಬುವರು ತಲೆಮರೆಸಿಕೊಂಡಿದ್ದಾರೆ.
ದಾಳಿಯ ವೇಳೆ ಜಿಂಕೆ ತಲೆ, 10 ಕೆಜಿ ಮಾಂಸ, ಎರಡು ಕತ್ತಿ, ಎರಡು ದ್ವಿಚಕ್ರವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಜಾವದ್ ಭಾಷಾ ಅಂಗಡಿ, ಆನವಟ್ಟಿ ವಲಯದ ವೀರಭದ್ರಯ್ಯ, ಮುರುಳಿ ಸೇರಿ ಇತರರಿದ್ದರು.