ETV Bharat / city

ತಾಯಿ ಕಣ್ಮುಂದೆಯೇ ಮಗಳ ಅಪಹರಣ...ಸಿನಿಮೀಯ ರೀತಿಯಲ್ಲಿ ಚೇಸ್​ ಮಾಡಿ ರಕ್ಷಿಸಿದ ತಂದೆ! - ತಾಯಿ ಕಣ್ಮುಂದೆಯೇ ಮಗಳ ಕಿಡ್ನಾಪ್

ಪತ್ನಿಯೊಂದಿಗೆ ಸಮೀಪದ ದೇವಾಲಯಕ್ಕೆ ಹೋಗುತ್ತಿದ್ದ ಮಗಳನ್ನು ಅಪಹರಿಸಿದ ಕಿಡಿಗೇಡಿಗಳಿಂದ ತಂದೆ ತನ್ನ ಕಡೆಯವರೊಂದಿಗೆ ಸಿನಿಮೀಯಾ ರೀತಿಯಲ್ಲಿ ಚೇಸ್​ ಮಾಡಿ ಮಗಳನ್ನು ರಕ್ಷಿಸಿದ್ದಾರೆ.

daughter-kidnap-dot-dot-dot-father-save
author img

By

Published : Oct 4, 2019, 6:29 PM IST

ಶಿವಮೊಗ್ಗ: ಇಂದು ಮಧ್ಯಾಹ್ನ ತಾಯಿ ಜೊತೆ ಸಮೀಪದ ದೇವಾಲಯಕ್ಕೆ ಹೋಗುತ್ತಿದ್ದ ಮಗಳಿಗೆ ಲಾಂಗು ಮಚ್ಚು ತೋರಿಸಿ ಕಿಡ್ನಾಪ್​ ಮಾಡಿದ ಕಿಡಿಗೇಡಿಗಳನ್ನು ಚೇಸ್​ ಮಾಡಿದ ತಂದೆ ತಮ್ಮ ಮಗಳನ್ನು ಸಿನಿಮೀಯ ರೀತಿಯಲ್ಲಿ ಕಾಪಾಡಿದ್ದಾರೆ.

ಈ ಘಟನೆ ಯಡೂರು ಗ್ರಾಮದಲ್ಲಿ ನಡೆದಿದೆ. ಯಡೂರಿನ ಶ್ರೀಧರ್ ಎಂಬವರ ಮಗಳು ತನ್ನ ತಾಯಿಯೊಂದಿಗೆ ದೇವಾಲಯಕ್ಕೆ ಹೋಗುತ್ತಿದ್ದರು. ಏಕಾಏಕಿ ರಿಡ್ಜ್ ಕಾರಿನಲ್ಲಿ ಬಂದ ತೀರ್ಥಹಳ್ಳಿಯ ಕುರುವಳ್ಳಿ ನಾಗರಾಜ್ ಹಾಗೂ ಆತನ ಸ್ನೇಹಿತರು ಕಾರಿನಲ್ಲಿ ಯುವತಿಯನ್ನು ಅಪಹರಿಸಿಕೊಂಡು ಪರಾರಿಯಾದರು. ಈ ವೇಳೆ ಮಗಳನ್ನು ರಕ್ಷಿಸಲು ಮುಂದಾದ ತಾಯಿಯನ್ನೂ ತಳ್ಳಿ ಎಳೆದೊಯ್ದರು.

daughter-kidnap-dot-dot-dot-father-save
ಕೃತ್ಯಕ್ಕೆ ಬಳಸಿದ ಲಾಂಗ್

ಈ ವಿಚಾರ ತಿಳಿದ ಯುವತಿ ತಂದೆ ಮತ್ತು ತನ್ನ ಕಡೆಯವರು ಆ ಕಾರನ್ನು ಸಿನಿಮೀಯಾ ರೀತಿಯಲ್ಲಿ ಬೆನ್ನಟ್ಟಿದ ಶ್ರೀಧರ್​ ಕಡೆಯವರು ತೀರ್ಥಹಳ್ಳಿಯ ಮುತ್ತೂರು ಗ್ರಾಮದ ಬಳಿ ಅಪಹರಣಕಾರರ ಕಾರನ್ನು ಅಡ್ಡಗಟ್ಟಿದರು. ತಕ್ಷಣ ಕುರುವಳ್ಳಿ ನಾಗರಾಜ್, ಆತನ ಸ್ನೇಹಿತರು ಕಾರನ್ನು ಹಾಗೂ ಯುವತಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಯುವತಿಯನ್ನು ವಾಪಸ್ ಕರೆ ತರಲಾಗಿದ್ದು, ಕುರುವಳ್ಳಿ ನಾಗರಾಜ್ ನ ವಿರುದ್ದ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಾಗರಾಜ್ ಹಾಗೂ‌ ಶ್ರೀಧರ್​ ಮಗಳು ಪ್ರೀತಿಸುತ್ತಿದ್ದರು. ನಾಗರಾಜ ಶೋಕಿವಾಲನಾಗಿದ್ದ. ಈತ ಹುಡುಗಿಯರೊಂದಿಗೆ ಅನೈತಿಕ ವರ್ತಿಸಿ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ. ಇದನ್ನು ತಿಳಿದ ಯುವತಿ ಆತನ ಸಹವಾಸ ಬಿಟ್ಟಿದ್ದಳು. ಇದರಿಂದ ಕುಪಿತಗೊಂಡ ನಾಗರಾಜ್​ ತನ್ನನ್ನು ಪ್ರೀತಿಸಿ ಮೋಸ ಮಾಡ್ತೀಯಾ ಎಂದು ಅಪಹರಿಸಿದ್ದಾನೆ ಎಂದು ಪೊಲೀಸ್​ ಮೂಲಗಳು ಹೇಳಿವೆ.

Intro:ಹಾಡು ಹಗಲೆ ತಾಯಿ ಮುಂದೆ ಮಗಳ ಕಿಡ್ನಾಪ್: ಸಿನಿಮಿಯ ರೀತಿಯಲ್ಲಿ ಹುಡುಗಿ ಬಚಾವ್.

ಶಿವಮೊಗ್ಗ: ತಾಯಿಯ ಜೊತೆ ದೇವಾಲಯಕ್ಕೆ ಹೊರಟಿದ್ದ ಯುವತಿಯನ್ನು ನಡು ರಸ್ತೆಯಲ್ಲಿ ಲಾಂಗ್ ಮಚ್ಚು ತೋರಿಸಿ ಕಿಡ್ನಾಪ್ ಮಾಡಿದ ಘಟನೆ ಯಡೂರು ಗ್ರಾಮದಲ್ಲಿ ನಡೆದಿದೆ. ಇಂದು ಮಧ್ಯಾಹ್ನ ಯಡೂರಿನ ಶ್ರೀಧರ್ ರವರ ಮಗಳು ತನ್ನ ತಾಯಿಯ ಜೊತೆ ಸಮೀಪದ ದೇವಾಲಯಕ್ಕೆ ಹೋಗುವಾಗ ರಿಡ್ಜ್ ಕಾರಿನಲ್ಲಿ ಬಂದ ತೀರ್ಥಹಳ್ಳಿ ತಾಲೂಕು ಕುರುವಳ್ಳಿಯ ನಾಗರಾಜ್ ಹಾಗೂ ಆತನ ಸ್ನೇಹಿತರು ಯುವತಿಯನ್ನು ಲಾಂಗ್ ಮಚ್ಚು ತೋರಿಸಿ ಕಿಡ್ನಾಪ್ ಮಾಡಿ ಕಾರಿನಲ್ಲಿ ಕರೆದು ಕೊಂಡು ಹೋಗಿದ್ದಾರೆ. ಈ ವೇಳೆ ಯುವತಿಯ ತಾಯಿ ತಡೆಯಲು ಯತ್ನ ಮಾಡಿದರು ಆಕೆಯನ್ನು ದಬ್ಬಿ ಯುವತಿಯನ್ನು ಕಿಡ್ನಾಪ್ ಮಾಡಿದ್ದಾರೆ.Body:ಈ ವಿಚಾರ ತಿಳಿದ ಯುವತಿಯ ತಂದೆಯ ಕಡೆಯವರು ಕಾರನ್ನು ಹಿಂಬಾಲಿಸಿ ಕೊಂಡು ಹೋಗಿ ತೀರ್ಥಹಳ್ಳಿ ತಾಲೂಕು ಆಗುಂಬೆ ಬಳಿಯ ತೀರ್ಥ ಮುತ್ತೂರು ಗ್ರಾಮ ಬಳಿ ಕಿಡ್ನಾಪರ್ಸ್ ಕಾರನ್ನು ಅಡ್ಡ ಹಾಕಿದ್ದಾರೆ. ತಕ್ಷಣ ಕುರುವಳ್ಳಿ ನಾಗರಾಜ್ ಆತನ ಸ್ನೇಹಿತರು ಕಾರನ್ನು ಹಾಗೂ ಯುವತಿಯನ್ನು ಬಿಟ್ಟು ಕಾಡಿನಲ್ಲಿ ಪರಾರಿಯಾಗಿದ್ದಾರೆ. ಯುವತಿಯನ್ನು ವಾಪಸ್ ಕರೆ ತರಲಾಗಿದೆ. ಕುರುವಳ್ಳಿ ನಾಗರಾಜ್ ನ ವಿರುದ್ದ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.Conclusion:ಕುರುವಳ್ಳಿ‌ ನಾಗರಾಜ್ ಹಾಗೂ‌ ಕಿಡ್ನಾಪ್ ಆದ ಹುಡುಗಿ ಇಬ್ಬರು ಲವ್ ಮಾಡುತ್ತಿದ್ದರು. ನಾಗರಾಜ ಶೋಕಿವಾಲನಾಗಿದ್ದು, ಈತ ಹುಡುಗಿಯರ ಜೊತೆ‌ ಲವ್ ಮಾಡಿ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುವ ಕೆಲ್ಸ ಮಾಡುತ್ತಿದ್ದ. ಇದನ್ನು ತಿಳಿದ ಯುವತಿ ಆತನ ಸಹವಾಸ ಬಿಟ್ಟಿದ್ದಳು. ತನ್ನನ್ನು ಪ್ರೀತಿಸಿ ಮೋಸ ಮಾಡಿದ್ದೀಯಾ ಎಂದು ಕುರುವಳ್ಳಿ ನಾಗರಾಜ್ ಯುವತಿಯನ್ನು ಕಿಡ್ನಾಪ್ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.