ಶಿವಮೊಗ್ಗ: ಕೊರೊನಾ ಭೀತಿಯ ಹಿನ್ನೆಲೆ ನಗರ ಪಾಲಿಕೆ ವತಿಯಿಂದ ಸರಳ ನಾಡಹಬ್ಬ ಆಚರಿಸಲಾಯಿತು.. ಕೋವಿಡ್ ವಾರಿಯರ್ಸ್ ದಸರಾ ಉತ್ಸವಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.
ಮಹಾನಗರ ಪಾಲಿಕೆ ವತಿಯಿಂದ ಕೊರೊನಾ ವಾರಿಯರ್ಸ್ಗೆ ಸನ್ಮಾನ ಮಾಡಲಾಯಿತು. ಕೊರೊನಾ ಬಗ್ಗೆ ಯಾರು ಸಹ ಭಯಪಡಬೇಡಿ. ರೋಗ ಲಕ್ಷಣಗಳು ಕಂಡು ಬಂದ್ರೆ ತಕ್ಷಣವೇ ತಪಾಸಣೆಗೆ ಒಳಗಾಗಿ ಎಂದು ಅಂಗನವಾಡಿ ಕಾರ್ಯಕರ್ತೆ ಅನ್ನಪೂರ್ಣ ಅವರು ವಿನಂತಿಸಿಕೊಂಡರು.
ನಂತರ ಮಾತನಾಡಿದ ಸಂಸದ ಬಿ. ವೈ. ರಾಘವೇಂದ್ರರವರು ಈ ಭಾರಿ ಕೊರೊನಾ ವಾರಿಯರ್ಸ್ ದಸರಾ ಉದ್ಘಾಟನೆ ಮಾಡಿದ್ದು ಸಂತೋಷದಾಯಕವಾಗಿದೆ. ಕೊರೊನಾ ಕಡಿಮೆಯಾಗುವವರೆಗೂ ಜನ ತಮ್ಮ ಎಚ್ಚರಿಕೆಯಲ್ಲಿ ತಾವು ಇರಬೇಕಿದೆ. ಕೋವಿಡ್ ನಿಂದ ಆರ್ಥಿಕ ಪರಿಸ್ಥಿತಿ ಬಗ್ಗೆ ನಾವು ಯೋಚನೆ ಮಾಡಬೇಕಿದೆ. ಪ್ರಧಾನಿಗಳು ಹೊಸ ವರ್ಷದ ಡೈರಿ ಹಾಗೂ ಕ್ಯಾಲೆಂಡರ್ನ್ನು ಮುದ್ರಿಸದಂತೆ ತಿಳಿಸಿದ್ದಾರೆ. ಪ್ರಧಾನ ಮಂತ್ರಿಗಳ ಕೆಲಸಗಳಿಗೆ ಎಲ್ಲರೂ ಸಹಕಾರ ನೀಡಬೇಕಿದೆ ಎಂದರು.
ಮೆರವಣಿಗೆಯಲ್ಲಿ ಸ್ಟೇಪ್ ಹಾಕಿದ ಪಾಲಿಕೆ ಸದಸ್ಯರು
ತಾಯಿ ಚಾಮುಂಡಿ ದೇವಿ ಮರೆವಣಿಗೆಯಲ್ಲಿ ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರುಳಿಧರ್, ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್, ಕವಿತಾ ರಂಗೇಗೌಡ, ರಾಹುಲ್, ಪ್ರಭಾಕರ್, ಶಂಕರ್ ಗನ್ನಿ ಸೇರಿ ಡ್ಯಾನ್ಸ್ ಮಾಡಿದ್ದು ವಿಶೇಷವಾಗಿತ್ತು.