ಶಿವಮೊಗ್ಗ: ಶರಾವತಿ ಹಿನ್ನೀರಿನಲ್ಲಿ ಚಲಿಸುತ್ತಿದ್ದ ಲಾಂಚ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಸಾಗರ ತಾಲೂಕು ಹೊಳೆ ಬಾಗಿಲು ಕಡೆಯಿಂದ ಹೊರಟಿದ್ದ ಲಾಂಚ್ ಹಾಗೂ ಸಿಗಂದೂರು, ತುಮರಿ ಕಡೆಯಿಂದ ತೆರಳುತ್ತಿದ್ದ ಲಾಂಚ್ ಹಿನ್ನೀರಿನ ಮಧ್ಯದಲ್ಲಿ ಡಿಕ್ಕಿಯಾಗಿವೆ. ಆದ್ರೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಲಾಂಚ್ ನಡೆಸಬೇಕಿದ್ದ ಡ್ರೈವರ್ಗಳು ಬಾರದೇ, ಡಿ ದರ್ಜೆ ನೌಕರರುಗಳಾದ ಸುನೀಲ್ ಹಾಗೂ ಮಂಜಪ್ಪ ಎನ್ನುವರು ಅನುಭವವಿಲ್ಲದವರೂ ಲಾಂಚ್ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗ್ತಿದೆ.
ಇನ್ನು ಅವಘಡ ಸಂಭವಿಸಿದ್ದ ವೇಳೆ ಎರಡು ಲಾಂಚ್ನಲ್ಲಿ ಬಸ್, ಕಾರು ಸೇರಿದಂತೆ ಸಾಕಷ್ಟು ಜನರಿದ್ದರು. ಡಿಕ್ಕಿಯಾದ ಸ್ಥಳದಲ್ಲಿ ಭಾರಿ ಅಳದಷ್ಟು ನೀರಿದೆ. ಒಂದು ವೇಳೆ ಅವಘಡ ನಡೆದಿದ್ದರೆ ಭಾರಿ ಅನಾಹುತ ಉಂಟಾಗುತ್ತಿತ್ತು.
ಲಾಂಚ್, ಹಿನ್ನೀರಿನ ಪ್ರದೇಶ ಹಾಗೂ ಸಾಗರಕ್ಕೆ ಸಂಪರ್ಕ ಕೊಂಡಿಯಾಗಿದೆ. ಇಂತಹ ಅನಾಹುತಗಳು ಮುಂದೆ ನಡೆಯದಂತೆ ಒಳನಾಡು ಬಂದರು ಹಾಗೂ ಸಾರಿಗೆ ಇಲಾಖೆ ಎಚ್ಚರ ವಹಿಸಬೇಕಿದೆ ಎಂದು ತುಮರಿ ಗ್ರಾಮ ಪಂಚಾಯತ್ ಅಧ್ಯಕ್ಷ ಸತ್ಯನಾರಾಯಣ್ ಆಗ್ರಹಿಸಿದ್ದಾರೆ.