ETV Bharat / city

ಹರ್ಷ ಕೊಲೆ ಕೇಸ್​.. ಆರೋಪಿ ಬಂಧನಕ್ಕೆ ಪೊಲೀಸರು ಸ್ಕೆಚ್‌ ಹಾಕಿದ್ದ ಸಿಸಿಟಿವಿ ವಿಡಿಯೋ

ಹರ್ಷನ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವ ಮೊದಲು ಆತನ ಸಹಚರನನ್ನು ಪೊಲೀಸರು ವಶಕ್ಕೆ ಪಡೆದಿದ್ದ ಸಿಸಿಟಿವಿ ದೃಶ್ಯಾವಳಿ ಸಿಕ್ಕಿದೆ.

ಚೋಟುವನ್ನು ಪೊಲೀಸರು ವಶಕ್ಕೆ ಪಡೆದಿದ್ದ ಸಿಸಿಟಿವಿ ದೃಶ್ಯಾವಳಿ

author img

By

Published : Feb 22, 2022, 4:58 PM IST

Updated : Feb 22, 2022, 7:25 PM IST

ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣ ಸಂಬಂಧ ಈವರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, 12 ಮಂದಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮೂವರಲ್ಲಿ ಓರ್ವ ಆರೋಪಿಯನ್ನು ಬಂಧಿಸಲು ಪೊಲೀಸರು ಸ್ಕೆಚ್‌ ಹಾಕಿದ್ದ ಸಿಸಿಟಿವಿ ವಿಡಿಯೋ ಇದೀಗ ವೈರಲ್ ಆಗಿದೆ.

ಮೊದಲು ಆರೋಪಿಯ ಸಹಚರನನ್ನು ಆತನ ಮನೆಯ ಬಳಿಯೇ ವಶಕ್ಕೆ ಪಡೆದಿದ್ದ ಪೊಲೀಸರು, ಈತನ ಮೂಲಕವೇ ಕೊಲೆ ಆರೋಪಿ ಬಂಧನಕ್ಕೆ ಬಲೆ‌ ಬೀಸಿದ್ದರು. ಸಹಚರನನ್ನು ಪೊಲೀಸರು ವಶಕ್ಕೆ ಪಡೆದ ದೃಶ್ಯದ ಸಿಸಿಟಿವಿ ಫೂಟೇಜ್ ಸಿಕ್ಕಿದೆ.

ಆರೋಪಿಯ ಸಹಚರನನ್ನು ಪೊಲೀಸರು ವಶಕ್ಕೆ ಪಡೆದಿದ್ದ ಸಿಸಿಟಿವಿ ದೃಶ್ಯಾವಳಿ

ತುಂಗಾನಗರ ಠಾಣೆ ಪೊಲೀಸ್​ ಇನ್ಸ್​ಪೆಕ್ಟರ್​ ದೀಪಕ್ ನೇತೃತ್ವದ ಪೊಲೀಸರ ತಂಡ ಆರೋಪಿಯ ಸಹಚರನನ್ನು ಆತನ ಮನೆಯ ಬಳಿಯೇ ವಶಕ್ಕೆ ಪಡೆದಿತ್ತು. ಹರ್ಷ ಕೊಲೆಯಾದ ದಿನ ರಾತ್ರಿಯೇ ಕೊಲೆ ಆರೋಪಿಯ ಸಹಚರನನ್ನು ಮುಂದಿಟ್ಟುಕೊಂಡು ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಆದರೆ ಕೊಲೆ‌ ನಡೆದ ದಿನ ಯಾರನ್ನೂ ಬಂಧಿಸಿರಲಿಲ್ಲ.

ಇದನ್ನೂ ಓದಿ: ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು ಹೋಗಿ ಬೆಂಕಿ ಹಚ್ಚಿದ ಪ್ರಕರಣ ಇಲ್ಲ: ಭಾರತಿ ಶೆಟ್ಟಿ

ಆರೋಪಿಯ ಸಹಚರ ಕೊಟ್ಟ ಮಾಹಿತಿ ಆಧಾರದ ಮೇಲೆ ಆರೋಪಿಯನ್ನು ಹರ್ಷ ಕೊಲೆಯಾದ ಮರುದಿನವೇ ಪೊಲೀಸರು ಬಂಧಿಸಿದ್ದರು. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರ ಮೇಲೆ ಶಂಕೆ ಇದ್ದ ಹಿನ್ನೆಲೆಯಲ್ಲಿ ಅವರ ಮನೆಗಳ ಬಳಿ ಹೋಗಿ ಶೋಧ ನಡೆಸಿದ್ದರು ಎಂದು ತಿಳಿದುಬಂದಿದೆ.

Last Updated : Feb 22, 2022, 7:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.