ಶಿವಮೊಗ್ಗ: ಸಾಗರದ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ವಾಟ್ಸಪ್ ಗ್ರೂಪ್‌ಗೆ ಅಶ್ಲೀಲ ಪೋಟೋ ಫಾರ್ವಡ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಬೇಳೂರು ರವರು ತಮ್ಮ ಪಕ್ಷದ ಕಾರ್ಯಕರ್ತ ಸೂಡೂರಿನ ಶಿವಣ್ಣ ಎಂಬಾತ ರಚಿಸಿರುವ ಶಿವಣ್ಣ ಸೂಡೂರು ವಾಟ್ಸಪ್ ಗ್ರೂಪ್‌ಗೆ ಅಶ್ಲೀಲ ಫೋಟೋ ಫಾರ್ವಡ್ ಮಾಡಿದ್ದಾರೆ ಎನ್ನಲಾಗಿದೆ. ಸೋಮವಾರದಿಂದ ಹಂತ ಹಂತವಾಗಿ ಲಾಕ್‌ಡೌನ್ ಓಪನ್ ಎಂದು ಮಹಿಳೆಯ ಅಶ್ಲೀಲ ಪೋಟೊವನ್ನು ಫಾರ್ವಡ್ ಮಾಡಿದ್ದಾರೆ.
ಆದರೆ ಗೋಪಾಲಕೃಷ್ಣ ರವರು ಫೋಟೋವನ್ನು ಆಲ್ ಡಿಲಿಟ್ ಅಂತ ಹೇಳಿದ್ದಾರೆ. ಆದರೆ ಅವರು ಆಲ್ ಡಿಲಿಟ್ ಮಾಡದೆ ಹಾಗೆ ಬಿಟ್ಟಿದ್ದಾರೆ. ಇದರಿಂದ ಅಶ್ಲೀಲ ಪೋಟೊ ಹಾಗೆ ಉಳಿದಿದೆ. ಇದಕ್ಕೆ ಹೊಸನಗರ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ವೀರೇಶ್ ಅಲವಳ್ಳಿ ರವರು ಖಂಡನೆ ವ್ಯಕ್ತಪಡಿಸಿದ್ದಾರೆ.