ಶಿವಮೊಗ್ಗ: ಬಂಜಾರರ ಆರಾಧ್ಯದೈವ ಸಂತಶ್ರೀ ಸೇವಾಲಾಲ್ ರ 281ನೇ ಜಯಂತಿಯ ಪ್ರಯುಕ್ತ ಜಿಲ್ಲೆಯ ಶಿಕಾರಿಪುರ ತಾಲೂಕಿನ ಗಡಿ ಗ್ರಾಮ ಶೀರಿಹಳ್ಳಿ ತಾಂಡದಲ್ಲಿ ಸಂತ ಸೇವಾಲಾಲ ಮಾಲಾಧಾರಿಗಳು ಪಾದಯಾತ್ರೆ ಮೂಲಕ ದಾವಣಗೆರೆ ಜಿಲ್ಲೆಹೊನ್ನಾಳಿ ತಾಲೂಕಿನ ಸೇವಾಲಾಲ್ ರ ಜನ್ಮಸ್ಥಳ ಭಾಯಘಡಕ್ಕೆ ಪಯಣ ಬೆಳಸಿದರು, ಮಾಲಾಧಾರಿಗಳಿಗೆ ಇಡಿ ಊರಿನ ಜನ ಶ್ರದ್ಧಾ ಭಕ್ತಿಯಿಂದಪೂಜೆ ಸಲ್ಲಿಸಿ ಬಿಳ್ಕೊಟ್ಟಿದ್ದಾರೆ.
ಮಾಲಾಧಾರಿಗಳು ಪಾದಯಾತ್ರೆಗೆ ಹೋಗುವ ಮುನ್ನ ಊರಿನ ಸಮಸ್ತ ಜನರು ಲಂಬಾಣಿಗರ ವೇಷಭೂಷಣ ಧರಿಸಿ, ಲಂಬಾಣಿ ಗರ ಕುಣಿತ ಮಾಡುವ ಮೂಲಕ ಊರಿನ ಪ್ರಮುಖ ಬಿದಿಗಳ ಮೂಲಕ ಮಾಲಾದಾರಿಗಳಿಗೆ ಪೂಜೆ ಸಲ್ಲಿಸಿ ಕಳಿಸಿಕೊಡುತ್ತಾರೆ. ಈ ರೀತಿಯಾ ಮಾಲಾಧಾರಿಗಳ ಆಚರಣೆ ಅಯ್ಯಪ್ಪಸ್ವಾಮಿ ಭಕ್ತರು ಬಿಟ್ಟರೆ ಬಂಜಾರ ಸಮುದಾಯದಲ್ಲಿ ಮಾತ್ರ ಮಾಲೆ ಹಾಕುವ ಸಂಪ್ರದಾಯ ಪ್ರಚಲಿತದಲ್ಲಿದೆ ಎನ್ನಲಾಗಿದೆ.